ಮನದೊಳಗಿನ ಮಾತು

Author : ಗಣೇಶ್‌ರಾವ್ ನಾಡಿಗೇರ್

Pages 144

₹ 110.00
Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 15, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು
Phone: 9480686862

Synopsys

ಇತ್ತೀಚಿನ ದಿನಗಳಲ್ಲಿ ಆಪ್ತ ಸಮಾಲೋಚನೆ ಚಿಕಿತ್ಸಾ ರೂಪವಾಗಿ ಮಾತ್ರವಲ್ಲದೇ ಸಾಂತ್ವಾನವಾಗಿಯೂ ಬೆಳವಣಿಗೆ ಹೊಂದುತ್ತಿರುವುದು ಎಲ್ಲೆಡೆ ಕಂಡುಬರುತ್ತದೆ. ಹಲವಾರು ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಒತ್ತಡಗಳ ಜೊತೆಗೆ ಇನ್ನಿತರ ವೈಯಕ್ತಿಕ ಕಾರಣಗಳಿಂದಾಗಿ ಏನು ಮಾಡಬೇಕೆಂಬುದನ್ನು ಸ್ವತಃ ನಿರ್ಧಾರ ಕೈಗೊಳ್ಳಲಾಗದೆ ಚಡಪಡಿಸಿ ಗೊಂದಲಕ್ಕೆ ಸಿಲುಕುತ್ತಾರೆ. ಒಂದು ಸಮಾಧಾನದ ಮಾತು ಹಾಗೂ ಸ್ಪಷ್ಟ ನಡೆಯ ಬಗ್ಗೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅಂತಹ ಸಹಾನುಭೂತಿಯುಳ್ಳ ಸಲಹೆಯ ಒಂದು ಚಿಕಿತ್ಸಾಕ್ರಮವನ್ನು ಈ ಕೃತಿಯಲ್ಲಿ ಲೇಖಕರು ವಿವರವಾಗಿ ತಿಳಿಸಿದ್ದಾರೆ. ತರಬೇತಿಗೊಂಡ ಆಪ್ತ ಸಮಾಲೋಚಕರು ಸಹಾಯಾರ್ಥಿಯೊಡನೆ ಯಾವ ರೀತಿ ಹಂತಹಂತವಾಗಿ ಆತನ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ನೀಡಿ ಆತನನ್ನು ಹರ್ಷಚಿತ್ತನನ್ನಾಗಿ ಮಾಡುವರೆಂದು ಇಲ್ಲಿ ಓದಿ ತಿಳಿದುಕೊಳ್ಳಿ. 

 

ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ದಿ|| ಡಾ. ಎ. ಎಸ್. ಧರಣೇಂದ್ರಯ್ಯ - ಮನೋವಿಜ್ಞಾನ ದತ್ತಿ ಪ್ರಶಸ್ತಿ ದೊರೆತಿದೆ. 

About the Author

ಗಣೇಶ್‌ರಾವ್ ನಾಡಿಗೇರ್

ಗಣೇಶ್‌ರಾವ್ ನಾಡಿಗೇರ್ ಆಪ್ತ ಸಮಾಲೋಚನೆ - ಮನೋ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವೀಧರರು. ‘ಮಾನಸಾಧಾರ’ ಪುನಶ್ಚೇತನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ  ಹಾಗೂ ದೂರದರ್ಶನದಲ್ಲಿ ಭಾಷಣ, ಸಂದರ್ಶನಗಳು ಪ್ರಸಾರವಾಗಿವೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮ್ಮೇಳನ - ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2010 ರಿಂದ ಶಿವಮೊಗ್ಗೆಯ ಮಾನಸ -ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಹಿರಿಯ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಮನದೊಳಗಿನ ಮಾತು, ಮಾನಸಿಕ ಅಸ್ವಸ್ಥರ ಪುನಶ್ವೇತನ ಹೇಗೆ? ಏಕೆ? ಮುಂತಾದವು.  ...

READ MORE

Related Books