ಸ್ವಲ್ಪ ಮಾತಾಡಿ ಪ್ಲೀಸ್

Author : ವಿರೂಪಾಕ್ಷ ದೇವರಮನೆ

Pages 158

₹ 150.00




Year of Publication: 2017
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ಸ್ವಲ್ಪ ಮಾತಾಡಿ ಪ್ಲೀಸ್’ ಮನೋವೈದ್ಯ, ಲೇಖಕ ವಿರೂಪಾಕ್ಷ ದೇವರಮನೆ ಅವರ ಕೃತಿ. ಒಂದು ಸಂಬಂಧ ಬೆಳೆದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ.  ಸಂಬಂಧಗಳ ಸೂಕ್ಷ್ಮತೆಯ ಬಗ್ಗೆ ಮನೋವೈದ್ಯರಾದ ವಿರೂಪಾಕ್ಷ ದೇವರಮನೆ ವಿವರವಾಗಿ ಬರೆದಿದ್ದಾರೆ.

About the Author

ವಿರೂಪಾಕ್ಷ ದೇವರಮನೆ

ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...

READ MORE

Related Books