ನೀವು ಯಶಸ್ವಿ ಗೃಹಿಣಿಯೇ?

Author : ಶಾಂತಾ ನಾಗರಾಜ್

Pages 96

₹ 45.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳೀ, ಕುಮಾರಪಾರ್ಕ್ ಪೂರ್ವ, ಬೆಂಗಳುರು-560001
Phone: 0802216 1900

Synopsys

ಲೇಖಕಿ ಶಾಂತಾ ನಾಗರಾಜ್ ಅವರ ಕೃತಿ-ನೀವೂ ಯಶಸ್ವಿ ಗೃಹಿಣಿಯೇ? ವ್ಯಕ್ತಿತ್ವ ವಿಕಸನ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ. ಮನೆಯ ಏಳ್ಗೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆ ಮನಸ್ಸು ಮಾಡದಿದ್ದರೆ ಮನೆಯ ಅಭಿವೃದ್ಧಿ ಅಸಾಧ್ಯ. ಬದುಕಿನ ಏರಿಳಿತಗಳಿಗೆ ಹೊಂದಿಕೊಂಡು, ಅತ್ಯಂತ ಸೂಕ್ಷ್ಮ ಕೌಟುಂಬಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಸಬಲ್ಲ ಚಾಕಚಕ್ಯತೆ ಗೃಹಿಣಿಗಿರಬೇಕು. ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಹಕಾರವಿರಬೇಕು. ಯಾವುದು ಸರಿ ಯಾವುದು ತಪ್ಪು ಎನ್ನುವ ವಿವೇಚನೆ ಇರಬೇಕು. ಗಂಡ-ಮಕ್ಕಳು-ಬಳಗ ಇತ್ಯಾದಿ ಹೊಣೆಗಾರಿಕೆಗಳು, ಉದ್ಯೋಗಸ್ಥ ಮಹಿಳೆಯಾಗಿದ್ದರೆ ಕಚೇರಿಯ ಕೆಲಸದ ಒತ್ತಡಗಳು ಇವೆಲ್ಲವನ್ನೂ ನಿಭಾಸುವ ಜಾಣ್ಮೆ ಗೃಹಿಣಿಗೆ ಇರಬೇಕು. ಇಂತಹ ಗುಣದೊಂದಿಗೆ ಇರುವ ಹೆಣ್ಣಿನ ಮನೆಯು ಪ್ರಗತಿಶೀಲವಾಗಿರುತ್ತದೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು. ಮನೋತಜ್ಞ ಡಾ. ಸಿ.ಆರ್. ಚಂದ್ರಶೇಖರ ಅವರು ಕೃತಿಯ ಸಂಪಾದಕರು.

About the Author

ಶಾಂತಾ ನಾಗರಾಜ್
(10 October 1943)

ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ.  ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ,  ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...

READ MORE

Related Books