ಬಾರತೀಯ ಇಂಗ್ಲೀಶು

Date: 07-07-2024

Location: ಬೆಂಗಳೂರು


"ಹತ್ತೊಂಬತ್ತನೆ ಶತಮಾನದಲ್ಲಿ ಯುರೋಪಿಗೆ ಮತ್ತು ತುಸು ಕಾಲದ ನಂತರ ಅಮೆರಿಕಾಕ್ಕೆ ವಿದ್ಯಾಬ್ಯಾಸಕ್ಕೆ ಜಗತ್ತಿನ ವಿವಿದ ಬಾಗಗಳಿಂದ ವಿದ್ಯರ‍್ತಿಗಳು ಬರುವುದಕ್ಕೆ ಮೊದಲಾಯಿತು. ಈಗ ಇದುವರೆಗೆ ಪಶ್ಚಿಮವು ಅನುಬವಿಸಿಲ್ಲದ ಒಂದು ವಿಚಿತ್ರ ಸಂಗತಿಯನ್ನು ಎದುರಿಸುವಂತಾಯಿತು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಾರತೀಯ ಇಂಗ್ಲೀಶು’ ಕುರಿತು ಬರೆದಿರುವ ಲೇಖನ.

ಇಲ್ಲಿ, ಕನ್ನಡದವರು, ಇಲ್ಲವೆ ಜನರಲ್ಲಾಗಿ ಬಾರತೀಯರು ಬಳಸುವ ಇಂಗ್ಲೀಶಿನ ಬಗೆಗೆ ತುಸು ಮಾತನಾಡಬಹುದು. ಅದಕ್ಕಿಂತ ಮೊದಲು ಈ ಬಾರತೀಯ ಇಂಗ್ಲೀಶು ಎಂದರೆ ಏನು? ಅಂತದೊAದು ಇಂಗ್ಲೀಶು ಇದೆಯೆ? ಎಂಬ ಪ್ರಶ್ನೆಗಳು ಬರಬಹುದು. ಹಾಗಾಗಿ, ಇಂದು ಬಳಕೆಯಲ್ಲಿರುವ ಇಂಗ್ಲೀಶುಗಳ ಬಗೆಗೆ ಒಂದೆರಡು ಸಾಲು ಬರೆಯಬಹುದು. ಹತ್ತೊಂಬತ್ತನೆ ಶತಮಾನದಲ್ಲಿ ಯುರೋಪಿಗೆ ಮತ್ತು ತುಸು ಕಾಲದ ನಂತರ ಅಮೆರಿಕಾಕ್ಕೆ ವಿದ್ಯಾಬ್ಯಾಸಕ್ಕೆ ಜಗತ್ತಿನ ವಿವಿದ ಬಾಗಗಳಿಂದ ವಿದ್ಯರ‍್ತಿಗಳು ಬರುವುದಕ್ಕೆ ಮೊದಲಾಯಿತು. ಈಗ ಇದುವರೆಗೆ ಪಶ್ಚಿಮವು ಅನುಬವಿಸಿಲ್ಲದ ಒಂದು ವಿಚಿತ್ರ ಸಂಗತಿಯನ್ನು ಎದುರಿಸುವಂತಾಯಿತು. ಅಂದರೆ, ಅದುವರೆಗೆ ತಮ್ಮ ನೆಲದ ಇಂಗ್ಲೀಶನ್ನು ಮತ್ತು ತಮ್ಮದೆ ನೆಲದಲ್ಲಿನ ಬಿನ್ನತೆಗಳನ್ನು ಮಾತ್ರ ಕೇಳಿದ್ದ ಅಲ್ಲಿನವರಿಗೆ ಬಾರತ, ಆಪ್ರಿಕಾ, ಅರಬ್ ದೇಶಗಳಿಂದ ಬಂದ ವಿದ್ಯರ‍್ತಿಗಳ ಇಂಗ್ಲೀಶನ್ನು ಕೇಳಬೇಕಾಯಿತು. ಇದು ಅತ್ಯಂತ ಬಿನ್ನವಾಗಿದ್ದಿತು ಮತ್ತು ಅಮೆರಿಕಾದವರಿಗೆ ಇದು, ಇವರುಗಳ ಉಚ್ಚರಣೆಯು ವಿಚಿತ್ರವಾಗಿ ಕಾಣಿಸುತ್ತಿದ್ದಿತು. ಹೀಗಾಗಿ ಇವರಿಗೆಲ್ಲ ಇಂಗ್ಲೀಶು ಬರುವುದಿಲ್ಲ ಎಂಬ ತಿಳುವಳಿಕೆಯನ್ನು ಮಾತ್ರವಲ್ಲದೆ ಇವರು ಇಂಗ್ಲೀಶನ್ನು ಕಲಿಯುವ ಸಾಮರ್‍ತ್ಯ ಇಲ್ಲದವರು ಎಂದು ಪರಿಗಣಿಸಿದರು. ಇದರಿಂದ ಅಮೆರಿಕಾ ತನ್ನನ್ನು ತಾನು ದಕ್ಶ ಎಂದೂ ಉಳಿದವರು ಅದಕ್ಶರೆಂದೂ ಬೀಗಿಕೊಳ್ಳಲು ಇದೂ ಒಂದು ಕಾರಣವಾಯಿತು. ಉಳಿದೆಲ್ಲರನ್ನು ಎರಡನೆ ರ‍್ಜೆಯವರಂತೆ ಕಾಣುವುದು ಶುರುವಾಯಿತು. ಈ ವಾತಾವರಣ ಶಾಲೆಗಳಲ್ಲಿ ವಿಚಿತ್ರ ಹಂತದವರೆಗೆ ತಲುಪಿದ್ದಿತು.

ಹೀಗಿದ್ದ ಪರಿಸರದಲ್ಲಿ ವಿಬಿನ್ನ ದೇಶಗಳ ವಿದ್ಯರ‍್ತಿಗಳು ಉಚ್ಚರಿಸುವ ಇಂಗ್ಲೀಶುಗಳನ್ನು ಅದ್ಯಯನ ಮಾಡುವ ಪ್ರಯತ್ನ ಮೊದಲಾದವು. ಇವು ದೊಡ್ಡ ಪ್ರಮಾಣದಲ್ಲಿ ಬೆಳೆದು ಇವುರುಗಳ ಇಂಗ್ಲೀಶಿನ ಉಚ್ಚರಣೆಯಲ್ಲಿನ ಬಿನ್ನತೆಗೆ ಅವರ ತಾಯ್ಮಾತುಗಳು ಕಾರಣ ಎಂಬುದನ್ನೂ ತಾಯ್ಮಾತಿನ ಪ್ರಬಾವವನ್ನು ಕಳೆದುಕೊಂಡು ಇನ್ನೊಂದು ಬಾಶೆಯನ್ನು ಪಡೆದುಕೊಳ್ಳುವುದು ಮತ್ತು ಬಳಸುವುದು ಅತ್ಯಂತ ಕಶ್ಟಸಾದ್ಯ ಎಂಬುದನ್ನು ತೋರಿಸಿದವು. ಇದು ಮುಂದುವರೆದು ಅವರುಗಳ ಉಚ್ಚರಿಸುವ ಇಂಗ್ಲೀಶುಗಳ ವ್ಯಾಕರಣ ಅದ್ಯಯನಕ್ಕೆ ಬಂದವು. ಈಗ ಜಗತ್ತಿನ ವಿವಿದ ಕಡೆಗಳಲ್ಲಿ ಬಳಕೆಯಲ್ಲಿರುವ ಇಂಗ್ಲೀಶುಗಳ ಅದ್ಯಯನಗಳೂ ವ್ಯಾಪಕವಾಗಿ ಬೆಳೆದವು ಮತ್ತು ಬೇರೆ ಬೇರೆ ಕಡೆ ಬಳಕೆಯಲ್ಲಿರುವ ಇಂಗ್ಲೀಶುಗಳು ವಿಬಿನ್ನ ವ್ಯಾಕರಣವನ್ನೂ ಪಡೆದುಕೊಂಡಿವೆ ಎಂಬುದನ್ನು ತೋರಿಸಿದವು. ಹೀಗೆ ಜಗತ್ತಿನಲ್ಲಿ ಹಲವು ಇಂಗ್ಲೀಶುಗಳು ಇವೆ ಎಂಬುದನ್ನು ತೋರಿಸಲಾಯಿತು. ವರ‍್ಡ್ ಇಂಗ್ಲೀಶಸ್ (ಜಗತ್ತಿನ ಇಂಗ್ಲೀಶುಗಳು ಎಂಬರ‍್ತ) ಎಂಬ ಜಾಗತಿಕವಾದ ದೊಡ್ಡ ಪತ್ರಿಕೆಯೊಂದು ಬರುತ್ತಿದೆ.

ಅದ್ಯಯನಗಳು ಮುಂದುವರೆದು ಜಗತ್ತಿನ ಇಂಗ್ಲೀಶುಗಳನ್ನು ವಿಬಿನ್ನವಾಗಿ ವರ‍್ಗೀಕರಿಸುವ ಪ್ರಯತ್ನವನ್ನು ಮಾಡಿದವು. ಅದರಲ್ಲಿ ಮುಕ್ಯವಾದ ಒಂದು ಗುಂಪಿಕೆ, ಬಾರತೀಯ ಮೂಲದವರಾದ ಬ್ರಜ್ ಎಚ್. ಕಾಚ್ರು ಅವರದು. ಕಾಚ್ರು ಅವರು ಜಗತ್ತಿನ ಇಂಗ್ಲೀಶುಗಳನ್ನು ಮೂರು ಗುಂಪುಗಳಾಗಿ ಗುಂಪಿಸುತ್ತಾರೆ, ಅವುಗಳೆಂದರೆ, ಕೇಂದ್ರ ವಲಯ, ಅಂಚಿನ ವಲಯ ಮತ್ತು ಚಾಚಿದ ವಲಯ. ಕೇಂದ್ರ ವಲಯದಲ್ಲಿ ಇಂಗ್ಲೀಶನ್ನು ತಾಯ್ಮಾತು ಆಗಿ ಬಳಸುವ ಇಂಗ್ಲೇಂಡು, ಅಮೆರಿಕಾ ದೇಶಗಳು ಬರುತ್ತವೆ. ಅಂಚಿನ ವಲಯದಲ್ಲಿ ಇಂಗ್ಲೀಶನ್ನು ಎರಡನೆ ಬಾಶೆಯಾಗಿ ಬಳಸುವ ಬಾರತ, ಆಸ್ಟ್ರೇಲಿಯಾ ಮೊದಲಾದ ದೇಶಗಳು ಬರುತ್ತವೆ. ಚಾಚಿದ ವಲಯದಲ್ಲಿ ಇಂಗ್ಲೀಶನ್ನು ವಿದೇಶಿ ಬಾಶೆಯಾಗಿ ಬಳಸುವ ಅರಬ್ ಜಗತ್ತಿನ ದೇಶಗಳು ಬರುತ್ತವೆ.

ಹಾಗಾದರೆ, ಬಾರತದಲ್ಲಿ ಬಳಕೆಯಲ್ಲಿರುವ ಬಾರತೀಯ ಇಂಗ್ಲೀಶು ಎಂಬುದು ಇದೆಯೆ ಎಂಬುದನ್ನು ಇಲ್ಲಿ ಮಾತಿಗೆ ತೆಗೆದುಕೊಳ್ಳಬಹುದು. 1970ರ ದಶಕದಿಂದ ಈಕಡೆಗೆ ಹಲವಾರು ಸಂಶೋದನೆಗಳು ಬಾರತದಲ್ಲಿ ವಿವಿದೆಡೆ ಬಳಕೆಯಲ್ಲಿರುವ ಮತ್ತು ಬಾರತೀಯರು ವಿವಿದೆಡೆ ಅಂದರೆ ಅಮೆರಿಕಾ ಮೊದಲಾದ ಕಡೆಯಲ್ಲಿ ಬಳಸುವ ಇಂಗ್ಲೀಶುಗಳನ್ನು ಅದ್ಯಯನ ಮಾಡಿದ್ದಾರೆ. ಈ ಅದ್ಯಯನಗಳು ಬಾರತದ ಇಂಗ್ಲೀಶುಗಳಲ್ಲಿ ದ್ವನಿ, ಪದಕೋಶ, ರ‍್ತ, ವ್ಯಾಕರಣ ಈ ಎಲ್ಲ ಹಂತಗಳಲ್ಲಿ ಬಹುದೊಡ್ಡ ಪ್ರಮಾಣದ ಬಿನ್ನತೆಗಳು, ಹೊಸ ಬೆಳವಣಿಗೆಗಳು, ವಿಬಿನ್ನ ಬಳಕೆಗಳು ಕಾಣಿಸುತ್ತವೆ ಎಂಬುದನ್ನು ತೋರಿಸಿವೆ. ಇಂಗ್ಲೀಶು ಸಿನಿಮಾಗಳನ್ನು ನೋಡುವ ಹವ್ಯಾಸ ಇರುವವರಿಗೆ ಅಮೆರಿಕಾದ ಸಿನಿಮಾಗಳು ಇಂಗ್ಲೀಶನ್ನು ಮಾತನಾಡಿದಾಗ ಮತ್ತು ಬಾರತೀಯರು ಮಾತನಾಡಿದಾಗ ಇರುವ ವ್ಯತ್ಯಾಸಗಳನ್ನು ಸ್ಪಶ್ಟವಾಗಿ ಅವಲೋಕಿಸಲು ಸಾದ್ಯವಾಗುತ್ತದೆ.

ಇಂಗ್ಲೀಶಿನ ಉಚ್ಚರಣೆಯ ಬಗೆಗೆ ಇಲ್ಲಿ ಒಂದೆರಡು ಮಾತುಗಳನ್ನಾಡಬಹುದು. ಯಾವುದೆ ವಿದೇಶಿ ಬಾಶೆಯ ಸಂರ‍್ಕವನ್ನು ಪಡೆದುಕೊಂಡಾಗ ಮತ್ತು ಆ ಬಾಶೆಯನ್ನು ಅನುಕರಿಸಿದಾಗ ಮತ್ತು ಅದನ್ನು ತನ್ನ ಮೇಲೆ ಎಳೆದುಕೊಂಡಾಗ ಈ ಅಂಶಗಳು ಸಹಜವಾಗಿ ಕಾಣಿಸುತ್ತವೆ. ಯಾವುದೆ ಬಾಶೆಯ ಮಾತುಗರು ಅವರ ಬಾಶೆಯಲ್ಲಿನ ದ್ವನಿಗಳನ್ನು ಉಚ್ಚರಿಸುತ್ತಾರೆ. ಅಂದರೆ, ಕನ್ನಡ ಮಾತುಗರು ಕನ್ನಡ ಬಾಶೆಯಲ್ಲಿ ಇರುವ ದ್ವನಿಗಳನ್ನು ಉಚ್ಚರಿಸುತ್ತಾರೆ ಮತ್ತು ಅವುಗಳನ್ನು ಮಾತ್ರ ಉಚ್ಚರಿಸುತ್ತಾರೆ. ಆರಂಬದಲ್ಲಿ ಕನ್ನಡಕ್ಕೆ, ಬಾರತಕ್ಕೆ ಒದಗಿದ ಇಂಗ್ಲೀಶಿನ ಮಾತುಗರು ಇಂಗ್ಲೇಂಡಿನ ಇಂಗ್ಲೀಶರು. ಅವರ ರೀತಿಯಲ್ಲಿ ಉಚ್ಚರಿಸುವುದು ಕನ್ನಡಿಗರಿಗೆ, ಬಾರತೀಯರಿಗೆ ಕಶ್ಟ ಮಾತ್ರವಲ್ಲ ಅದು ಸಾದ್ಯವೂ ಇಲ್ಲ. ತರಬೇತಿಯ ನಂತರ ಕೆಲವರು ಹಾಗೆ ಉಚ್ಚರಿಸುವುದನ್ನು ಕಲಿಯಬಹುದು. ಹೀಗಾಗಿ ಬಾರತೀಯ ಇಂಗ್ಲೀಶು ತನ್ನದೆ ಆದ ವಿಬಿನ್ನವಾದ ಮತ್ತು ಅವರವರ ತಾಯ್ಮಾತುಗಳ ಹಿನ್ನೆಲೆಯ ದ್ವನಿಕೋಶವನ್ನು ತಮ್ಮ ಇಂಗ್ಲೀಶಿಗೆ ಬೆಳೆಸಿಕೊಂಡಿದ್ದಾರೆ. ಅಂದರೆ, ಕನ್ನಡ ಮಾತಾಡುವವರು, ಹಾಗೆಯೆ ತಮಿಳು, ತೆಲುಗು, ಪಂಜಾಬಿ, ಬೆಂಗಾಲಿ ಮಾತಾಡುವವರು ಇಂಗ್ಲೀಶನ್ನು ಮಾತಾಡುವಾಗ ತಮ್ಮ ತಾಯ್ಮಾತಿನ ದ್ವನಿಕೋಶದಲ್ಲಿಯೆ ಮಾತನಾಡುತ್ತಾರೆ. ಹಾಗಾಗಿ ಇವರೆಲ್ಲ ಇಂಗ್ಲೀಶನ್ನು ಮಾತನಾಡಿದಾಗ ಬಿನ್ನತೆಗಳು ಕಾಣಿಸುತ್ತವೆ. ದ್ವನಿಯಲ್ಲಿ ಮಾತ್ರವಲ್ಲದೆ ಪದಕೋಶದಲ್ಲಿ, ವಾಕ್ಯರಚನೆಯಲ್ಲಿ, ರ‍್ತಕೋಶದಲ್ಲಿ ಈ ಇಂಗ್ಲೀಶುಗಳು ತಮ್ಮದೆ ಆದ ವಿಬಿನ್ನ ರಚನೆಯನ್ನು ಪಡೆದುಕೊಂಡಿವೆ. ಹಾಗಾಗಿ, ಇಂಗ್ಲೀಶು ಹೆಸರಿನ ಬದಲಾಗಿ ಕಂಗ್ಲೀಶು (ಕನ್ನಡಿಗರು ಮಾತಾಡುವ ಇಂಗ್ಲೀಶು), ತಂಗ್ಲೀಶು (ತಮಿಳರು ಮಾತಾಡುವ ಇಂಗ್ಲೀಶು), ಹಿಂಗ್ಲೀಶು (ಹಿಂದಿಯವರು ಮಾತಾಡುವ ಇಂಗ್ಲೀಶು) ಮೊದಲಾದವು ಬೆಳೆಯುತ್ತಿವೆ ಮತ್ತು ಬೆಳೆದಿವೆ.

ಇಲ್ಲೊಂದು ವ್ಯಂಗ್ಯವನ್ನು ಉಲ್ಲೇಕಿಸುತ್ತ ಈ ಇಂಗ್ಲೀಶಿನ ಮಾತುಕತೆಯನ್ನು ಮುಗಿಸಬಹುದು. ಬಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು ಇಂದಿಗೂ ಇಂಗ್ಲೀಶನ್ನು ಕಲಿಸುವಾಗ ಇಂಗ್ಲೇಂಡಿನ ಇಂಗ್ಲೀಶನ್ನು ಮಾದರಿಯಾಗಿ ಇಟ್ಟುಕೊಳ್ಳುತ್ತವೆ. ಹಾಗೆ ನೋಡಿದರೆ ಬಾರತೀಯರಿಗೆ ಉದ್ಯೋಗ ಕೊಡುವಲ್ಲಿ ಅಮೆರಿಕಾ ಮುಂದಿದೆ, ಆದರೂ ಬೋದನೆಯಲ್ಲಿ ಇಂಗ್ಲೇಂಡಿನ ಇಂಗ್ಲೀಶು ತನ್ನ ಮಹತ್ವವನ್ನು ಹಾಗೆ ಕಾಪಾಡಿಕೊಂಡಿದೆ. ವಿಚಿತ್ರವೆಂದರೆ ಬಾರತೀಯ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಬಹುತೇಕರು ಬಾರತದಲ್ಲಿಯೆ ಇಂಗ್ಲೀಶನ್ನು ಕಲಿಸುತ್ತಾರೆ, ಅದ್ಯಯನಿಸುತ್ತಾರೆ ಇಲ್ಲವೆ ವ್ಯವಹರಿಸುತ್ತಾರೆ. ಆದರೆ, ಬಾರತೀಯ ಇಂಗ್ಲೀಶಿನ ಉಚ್ಚರಣೆಯನ್ನು ಕಡಿಮೆ ರ‍್ಯಾದೆಯಿಂದ ಕಾಣುವ ‘ಅವ’ಗುಣ ಕಾಣಿಸುತ್ತಿದೆ. ಬಾರತದಲ್ಲಿ ಇಂಗ್ಲೀಶು ಯಾರಿಗಾಗಿ ಎಂಬ ಪ್ರಶ್ನೆಯನ್ನು ಇಲ್ಲಿ ಎತ್ತಿಕೊಳ್ಳಬೇಕು. ಬಾರತದಲ್ಲಿ ಇಂಗ್ಲೀಶು ಬಾರತೀಯರಿಗಾಗಿ ಎಂಬುದು ಸ್ಪಶ್ಟವಿದೆಯಲ್ಲವೆ.

ಈ ಅಂಕಣದ ಹಿಂದಿನ ಬರೆಹಗಳು:
ಇಂಗ್ಲೀಶು ಕನ್ನಡ ಬದುಕಿನೊಳಗೆ

ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ತುಳುವಿನೊಡನೆ ಸಹಸಂಬಂದ

20-07-2024 ಬೆಂಗಳೂರು

"ತುಳುವಿನ ಕುರಿತು ಮಾತನಾಡಬೇಕಾದ ಕೆಲವು ಮಹತ್ವದ ಅಂಶಗಳಿವೆ. ದಕ್ಕನದಲ್ಲಿ ವ್ಯಾಪಿಸಿಕೊಂಡಿರುವ ಅರಬಿ ಸಮುದ್ರದ ಕರಾ...

ಮತ್ಸ್ಯಾಸನ ಮತ್ತು ಪರಿವೃತ್ತ ಪಾರ್ಶ್ವಕೋನಾಸನ

19-07-2024 ಬೆಂಗಳೂರು

"`ಮತ್ಸ್ಯಾಸನ' ಮಾಡುವುದರಿಂದ ಬೆನ್ನುಮೂಳೆಯ ಮೇಲ್ಭಾಗದ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ಬೆನ್ನುಮೂಳೆಯನ...

ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ

16-07-2024 ಬೆಂಗಳೂರು

"ನರೇಂದ್ರ ಪೈ ಅವರು ಕೃತಿಯನ್ನು ವಿಶ್ಲೇಷಣೆ ಮಾಡುವಾಗ ತಮ್ಮದೇ ಚಿಂತನೆಯನ್ನು ವಿಸ್ತಾರವಾಗಿ ತಾತ್ವಿಕವಾಗಿ ಮಂಡಿಸುತ...