ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

Date: 11-03-2024

Location: ಬೆಂಗಳೂರು


"ಜಗತ್ತಿನಲ್ಲಿ ಯಾವುದಾದರೂ ಬಾಶೆ ಇನ್ನೊಂದು ಬಾಶೆಯ ಇಲ್ಲವೆ ಬಾಶೆಗಳ ನಂಟು ಇಲ್ಲದೆ ಬದುಕಬಹುದೆ? ಹೀಗೊಂದು ಪ್ರಶ್ನೆಯನ್ನು ಮೊದಲಿಗೆ ನಮ್ಮ ಮುಂದೆ ಇಟ್ಟುಕೊಂಡು ಬಾಶೆಗಳ ನಡುವೆ ನಂಟು ಬೆಳೆಯುವುದಕ್ಕೆ ಮೂಲಬೂತವಾದ ಕಾರಣಗಳಲ್ಲಿ ಒಂದೆರಡು ಮಹತ್ವವಾದವುಗಳನ್ನು ಇವತ್ತು ಮಾತಾಡೋಣ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?’ ಕುರಿತು ಬರೆದಿರುವ ಲೇಖನ.

ಜಗತ್ತಿನ ಬಹುತೇಕ ಬಾಶೆಗಳು ಇನ್ನೊಂದು ಬಾಶೆಯ ಸಂಪರ‍್ಕವನ್ನು ಒಂದಲ್ಲ ಇನ್ನೊಂದು ರೀತಿಯಲ್ಲಿ ಪಡೆದುಕೊಂಡಿವೆ. ಅದರಲ್ಲಿಯೂ ಮುಕ್ಯವಾಗಿ ದೊಡ್ಡ ಸಂಕೆಯ ಮಾತುಗರು ಇರುವ ಮತ್ತು ಸಾಹಿತ್ಯವನ್ನು ಹೊಂದಿರುವ, ಸಾಮ್ರಾಜ್ಯಗಳನ್ನು ಹೊಂದಿದ್ದ/ಹೊಂದಿರುವ ಮತ್ತು ಸಂಕೀರ್‍ಣ ಸಮಾಜ ರಚನೆಯನ್ನು ಹೊಂದಿರುವ, ವ್ಯಾಪಾರ-ವ್ಯವಹಾರವನ್ನು ಹೊಂದಿರುವ ಯಾವುದೆ ಬಾಶೆಯನ್ನು ತೆಗೆದುಕೊಂಡಾಗ ಹಲವು ಬಾಶೆಗಳ ಜೊತೆಗಿನ ಬಾಶಾನಂಟು ಅತ್ಯಂತ ಸಹಜವಾಗಿ ಕಾಣಿಸುತ್ತದೆ. ಈ ಮೇಲೆ ಪಟ್ಟಿಸಿದ ಎಲ್ಲವನ್ನೂ ಹೊಂದಿರುವ ಇಂಗ್ಲೀಶಿನಂತ ಬಾಶೆಯನ್ನು ಗಮನಿಸಿದಾಗ, ಅದು ಗ್ರೀಕ್, ಲ್ಯಾಟಿನ್, ಜರ‍್ಮನಿ ಮೊದಲಾದ ಯುರೋಪಿನ ಹಲವು ಹಳೆಯ ಬಾಶೆಗಳೊಂದಿಗೆ, ಅರೇಬಿಕ್, ಪರ‍್ಶಿಯನ್ ಮೊದಲಾದ ಹಲವು ಅರಾಬಿಕ್ ಜಗತ್ತಿನ ಬಾಶೆಗಳೊಂದಿಗೆ ಆನಂತರದ ಕಾಲದಲ್ಲಿ ಸಂಸ್ಕ್ರುತ ಮೊದಲಾಗಿ ಹಲವು ಬಾರತೀಯ ಬಾಶೆಗಳ ಜೊತೆಗೆ ಹೀಗೆ ವ್ಯಾಪಕವಾದ ನಂಟನ್ನು ಹೊಂದಿದೆ. ಕನ್ನಡ, ತಮಿಳು, ಸಂಸ್ಕ್ರುತ ಮೊದಲಾದ ಬಾರತೀಯ ಬಾಶೆಗಳೂ ಹೊರತೇನೂ ಅಲ್ಲ. ಈ ಬಾಶೆಗಳು ಎಶ್ಟು ಪ್ರಮಾಣದಲ್ಲಿ ತಮ್ಮ ಸಾಮಾಜಿಕತೆಯನ್ನು ಪಸರಿಸಿಕೊಂಡಿವೆಯೊ ಅಶ್ಟು ಪ್ರಮಾಣದಲ್ಲಿ ಬಾಶಾ ನಂಟು ತೀವ್ರವಾಗಿರುತ್ತದೆ. ಇದು ಆಳವೂ, ಅಗಲವೂ ಆಗಿರುತ್ತದೆ. ಇಂಗ್ಲೀಶು ಬಾಶೆಯ ಸಾಮಾಜಿಕತೆ ವಿಪರೀತವಾಗಿರುವುದರಿಂದ ಇಂದು ಇಂಗ್ಲೀಶಿನ ಶಬ್ದಕೋಶ ಹೆಚ್ಚಾಗಿ ಬೇರೆ ಬಾಶೆಗಳಿಂದ ತುಂಬಿಕೊಂಡಿದೆ ಮತ್ತು ಅದು ಮಾತ್ರವಲ್ಲದೆ ಇವತ್ತು ಇಂಗ್ಲೀಶು ತನ್ನ ಹಲವು ಅವತಾರಗಳನ್ನೂ ಪಡೆದುಕೊಂಡಿದೆ. ಅಂದರೆ, ಇಂದು ಹಲವು ಇಂಗ್ಲೀಶುಗಳು ಬೆಳೆದಿವೆ, ಒಂದು ಇಂಗ್ಲೀಶು ಆಗಿ ಉಳಿದಿಲ್ಲ. ಒಂದೊಮ್ಮೆ ಇದೆ ಬಗೆಯ ಕತೆ ತುಸು ಬಿನ್ನ ಬಗೆಯಲ್ಲಿ ಸಂಸ್ಕ್ರುತಕ್ಕೂ ಆಗಿತ್ತು.

ಇಲ್ಲಿ ಮುಕ್ಯವಾಗಿ ಓದುಗರ ಗಮನಕ್ಕೆ ತರುವ ವಿಚಾರವೆಂದರೆ ಯಾವುದೆ ಬಾಶೆ ಸಾಮಾಜಿಕತೆಯನ್ನು ಅದು ಆಡಳಿತವಾಗಿರಲಿ, ಸಾಹಿತ್ಯವಾಗಿರಲಿ, ಮತಪಂತವಾಗಿರಲಿ, ವ್ಯಾಪಾರ-ಉದ್ದಿಮೆಯಾಗಿರಲಿ ಹೀಗೆ ಯಾವುದೆ ವಲಯದಲ್ಲಿ ಬೆಳೆಸಿಕೊಂಡರೆ ಸಹಜವಾಗಿ ಮತ್ತು ಅನಿವಾರ‍್ಯವಾಗಿ ಬೇರೆ ಬಾಶೆಗಳ ನಂಟನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಆಡಳಿತ, ವ್ಯಾಪಾರ-ಉದ್ದಿಮೆ ಇರುವ ಬಾಶೆಗಳು ಈ ಕಾರಣಕ್ಕೆ ಅತ್ಯನಿವಾರ‍್ಯವಾಗಿ ಇನ್ನೊಂದು ಬಾಶೆಯ/ಗಳ ಸಂಬಂದವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯ-ವಿಗ್ನಾನ ಬೆಳೆಸಿಕೊಂಡ ಬಾಶೆ ಸಹಜವಾಗಿ ಇನ್ನೊಂದು ಬಾಶೆಯ/ಗಳಲ್ಲಿ ಹುಟ್ಟಿದ ಸಾಹಿತ್ಯ-ವಿಗ್ನಾನವನ್ನು ಓದಿಕೊಳ್ಳುತ್ತದೆ ಮತ್ತು ಮತ್ತೊಂದು ಬಾಶೆ/ಗಳಿಗೆ ಪ್ರಬಾವ ಬೀರುತ್ತದೆ. ಹೀಗೆ ಬೇರೆ ಬಾಶೆಗಳ ಜೊತೆಗೆ ನಂಟನ್ನು ಇಟ್ಟುಕೊಳ್ಳಲೇಬೇಕು. ಮತಪಂತಗಳ ವಿಚಾರದಲ್ಲಿಯೂ ಇಂತದೆ ಪರಿಸ್ತಿತಿ ಇರುತ್ತದೆ. ಆದರೆ, ತನ್ನಶ್ಟಕ್ಕೆ ಸಾಹಿತ್ಯವನ್ನೂ ಮತಪಂತವನ್ನೂ ಇಟ್ಟುಕೊಂಡು ಬೆಳೆದ ಕೆಲವು ಬಾಶಿಕ ಸಮುದಾಯಗಳನ್ನು ಕಾಣಬಹುದು. ಅಂದರೆ ಬೇರೆ ಬಾಶೆಗಳ ನಂಟು ಬೆಳೆಸಿಕೊಂಡಿಲ್ಲದೆ ತಾತ್ವಿಕತೆಯನ್ನೂ ಸಾಹಿತ್ಯವನ್ನೂ ಸಾಮಾಜಿಕತೆಯನ್ನೂ ಬೆಳೆಸಿಕೊಂಡಿರುವ ನಿದರ‍್ಶನ. ಇಂತದೊಂದು ನಿದರ‍್ಶನವನ್ನು ಈಗ ಮಾತಾಡೋಣ.

ಬೇರೆ ಬಾಶೆಗಳ ನಂಟು ತೀರಾ ಕಡಿಮೆ ಇರುವ ಇಲ್ಲವೆ ನಂಟು ಇಲ್ಲದ ಬಾಶೆಗಳೇನಾದರೂ ಇರಬಹುದೆ? ಇದ್ದರೆ ಎಂತವು? ಒಂದಶ್ಟು ಮಾತಾಡೋಣ

ಅಲೆಮಾರಿ ಸಮುದಾಯಗಳ ಬಾಶೆಗಳ ಬಗೆಗೆ ತುಸು ಈಗ ಮಾತಾಡೋಣ. ಅವುಗಳು ನಿರಂತರ ಅಲೆಯುತ್ತಲೆ ಬದುಕಿದ್ದರೂ ಅವು ಬಹುತೇಕ ಮುಚ್ಚಿದ ಗುಂಪುಗಳಂತೆಯೆ ಬದುಕಿರುವುದು ಹೆಚ್ಚು. ಅವಶ್ಯವಿರುವಶ್ಟು ಮಾತ್ರ ಬೇರೆ ಬಾಶೆಗಳೊಂದಿಗೆ ನಂಟನ್ನು ಕಟ್ಟಿಕೊಂಡು ತಮ್ಮಶ್ಟಕ್ಕೆ ಬದುಕಿರುತ್ತವೆ. ಕರ‍್ನಾಟಕದ ಲಂಬಾಣಿ, ಕುಳು (ಕೊರವ), ಕೊರಚ ಮೊದಲಾದ ಬಾಶೆಗಳನ್ನು ಇಲ್ಲಿ ಗಮನಿಸಬಹುದು. ಕಾಲಾಂತರದ ನಡೆದಾಟದಲ್ಲಿ ಈ ಬಾಶೆಗಳು ಬೇರೆ ಬಾಶೆಗಳಿಗೆ ಕೊಡುವಶ್ಟು ಯಾವಾಗಲಾದರೂ ಮಹತ್ವದವಾಗಿದ್ದವೆ ಎಂಬುದು ಅಸ್ಪಶ್ಟ. ಆದರೆ, ಬೇರೆ ಬಾಶೆಗಳಿಂದ ಇವು ಪಡೆದುಕೊಂಡಿವೆ ಎಂಬುದು ಸ್ಪಶ್ಟ. ಈ ಎಲ್ಲ ಬಾಶೆಗಳಲ್ಲಿಯೂ ಪದಕೋಶ ಮಾತ್ರವಲ್ಲದೆ ವ್ಯಾಕರಣ ಕೆಲಸಗಳೂ ವ್ಯಾಕರಣ ರೂಪಗಳೂ ಬೇರೆ ಬಾಶೆಯಿಂದ ಬಂದಿರುವುದನ್ನು ನೋಡಬಹುದು.

ತೊದ ನೀಲಗಿರಿಯ ಮಹತ್ವದ ಬಾಶೆ. ತಾತ್ವಿಕತೆ, ಸಾಹಿತ್ಯ ಮೊದಲಾದವು ಆಳವಾಗಿ ಈ ಬಾಶೆಯಲ್ಲಿ ಕಂಡುಬಂದರೂ ಅದು ಬೇರೆ ಬಾಶೆಗಳನ್ನು ಪ್ರಬಾವಿಸಿದ್ದರ ಬಗೆಗೆಯಾಗಲಿ ಇಲ್ಲವೆ ಬೇರೆ ಬಾಶೆಗಳ ಪ್ರಬಾವಕ್ಕೆ ಒಳಗಾಗಿದ್ದಕ್ಕೆಯಾಗಲಿ ಇದುವರೆಗೆ ಅಂತ ಮಹತ್ವದ ಸುಳಿವು ಸಿಗುವುದಿಲ್ಲ. ಅಲ್ಲದೆ ಈ ಬಾಶೆ ಬದುಕಿರುವ ಪರಿಸರ ದಟ್ಟಕಾನನವೂ ಬೆಟ್ಟಕಾಡೂ ಆಗಿರುವುದರಿಂದ ಹೊರಬಾಶಿಕರಿಗೆ ಸಂಪರ‍್ಕವೂ ಕಡಿಮೆ ಎಂದೆ ಹೇಳಬೇಕು. ಇಲ್ಲಿ ಒಂದು ವಿಪರ‍್ಯಾಸ ನೋಡಿ. ತೊದರಿಗೆ ಹೊರಸಮಾಜದ ಅವಶ್ಯಕತೆ ಬೀಳುವುದಕ್ಕಿಂತ ಹೆಚ್ಚಾಗಿ ಹೊರಬಾಶಿಕರಾದ ತಮಿಳರಿಗೆ ಒಂದು ಹಂತಕ್ಕೆ ಕನ್ನಡದವರಿಗೆ ಇವರ ಅವಶ್ಯಕತೆ ಬಿತ್ತು. ಹಾಗಾಗಿ ಈ ಬಾಶೆಗಳು ತೊದರನ್ನು ಸಂಪರ‍್ಕದಲ್ಲಿ ಇಟ್ಟುಕೊಂಡವು. ಹೀಗೆ, ಇಶ್ಟು ಮಟ್ಟಿಗೆ ತೊದ ಬೇರೆ ಬಾಶೆಗಳ ನಂಟನ್ನು ಕಡಿಮೆ ಹೊಂದಿರಲಿಲ್ಲ, ಇಲ್ಲವೆ ನಂಟು ಹೊಂದಿರಲಿಲ್ಲ.

ಇನ್ನು ಈ ರೀತಿಯಲ್ಲಿ ದೊಡ್ಡ ಪ್ರಮಾಣದ ಸಾಮಾಜಿಕತೆಯನ್ನು ಹೊಂದಿಲ್ಲದ ಇನ್ನೊಂದು ಬಗೆಯ ಬಾಶೆಯ ನಿದರ‍್ಶನವನ್ನು ತೆಗೆದುಕೊಳ್ಳೋಣ. ಅಂಡಮಾನು ಒಂದು ದ್ವೀಪಸಮೂಹ. ಅಲ್ಲಿ ಹಲವಾರು ದ್ವೀಪಗಳು ಇವೆ, ಅದರಂತೆ ಅಲ್ಲಿ ಹಲವಾರು ಸಮುದಾಯಗಳೂ ಇವೆ. ಈ ಬಿನ್ನ ಸಮುದಾಯಗಳು ವಿಬಿನ್ನ ಬಾಶೆಗಳನ್ನೂ ಮಾತನಾಡುತ್ತವೆ. ಇವುಗಳಲ್ಲಿ ಹಲವು ಬಾಶೆಗಳು ವಿಗ್ನಾನಿಗಳ ತಿಳುವಳಿಕೆ ಪ್ರಕಾರ ಈ ಅಂಡಮಾನಿನ ನೆಲಕ್ಕೆ ಬಂದು ಸುಮಾರು ಅಯವತ್ತು ಸಾವಿರ ವರುಶಗಳಾಗಿವೆ. ಅಯವತ್ತು ಸಾವಿರ ವರುಶಗಳಿಂದ ಒಂದೆ ಪ್ರದೇಶದಲ್ಲಿ, ಒಂದೆ ಪರಿಸರದಲ್ಲಿ ಬದುಕಿವೆ ಮತ್ತು ಅತಿ ಮುಕ್ಯವಾದ ವಿಶಯವೆಂದರೆ ಅವು ತಮ್ಮದೆ ಆದ ಜಗತ್ತನ್ನು ರೂಪಿಸಿಕೊಂಡು ಹೊರಜಗತ್ತಿನಿಂದ ದೂರ ಉಳಿದಿವೆ. ಈ ಸಮುದಾಯಗಳು ಹೊರಗಿನವರೊಂದಿಗೆ ಸಂಬಂದವನ್ನು ಬೇಡವೆನ್ನುತ್ತವೆಯಾದ್ದರಿಂದ ಈ ಬಾಶೆಗಳಲ್ಲಿ ಬೇರೆ ಬಾಶೆಗಳ ನಂಟು ಕಾಣಿಸುವುದಿಲ್ಲ. ಆದ್ದರಿಂದ ಈ ಬಾಶೆಗಳ ರಚನೆ, ಪದಕೋಶ ಜಗತ್ತಿನ ಉಳಿದ ಬಾಶೆಗಳಿಗೆ ಹೋಲಿಸಿದಾಗ ವಿಬಿನ್ನವಾಗಿದೆ. ಇಲ್ಲಿ ನಮಗೆ ಮುಕ್ಯವಾದ ಅಂಶವೆಂದರೆ ಅಂಡಮಾನಿನ ಹಲವು ಬಾಶೆಗಳು ಬೇರೆ ಬಾಶೆಗಳ ನಂಟನ್ನು ಹೊಂದಿಲ್ಲದೆ ಬದುಕಿವೆ. ಅಂದರೆ, ಈ ಬಾಶೆಗಳನ್ನು ಯಾವುದೆ ಬಾಶೆಯ ನಂಟು ಇಲ್ಲದವು ಎಂದು ಕರೆಯಬಹುದು.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಆದುನಿಕ ಕಾಲದಲ್ಲಿ ಇಂದು ಸಮಾಜದ ಪ್ರತಿಯೊಂದು ಬಾಗವನ್ನೂ ಆದುನಿಕತೆ ಮತ್ತು ಯಾಂತ್ರಿಕತೆ ಆವರಿಸಿಕೊಳ್ಳುತ್ತಿದೆ ಇಲ್ಲವೆ ಆವರಿಸಿಕೊಂಡಿದೆ. ಎಶ್ಟೊ ಸಾವಿರ ವರುಶಗಳಿಂದ ತಮ್ಮಶ್ಟಕ್ಕೆ ಇದ್ದ ಸಮುದಾಯಗಳಿಂದ ಅ-ನಿವಾರ‍್ಯವಾಗಿ ಹೊರಜಗತ್ತಿನ ನಂಟನ್ನು ಬೆಳೆಸಿಕೊಳ್ಳಬೇಕಾಗಿದೆ. ಬಹುಕಾಲ ಈ ಬೇರೆ ಬಾಶೆಗಳ ನಂಟು ಹೊಂದಿಲ್ಲದ ತೊದದಂತ ಅಡವಿಯ ಬಾಶೆಗಳು, ಕುಳು, ಕೊರಚದಂತ ಅಲೆಮಾರಿ ಬಾಶೆಗಳು, ಒಂಗೆ ಎನ್ನುವಂತ ಕಾಡಡವಿಯ, ಅಂಡಮಾನಿನ ಬಾಶೆಗಳನ್ನು ಈ ಆದುನಿಕತೆ, ಆದುನಿಕ ಸಾಮಾಜಿಕತೆ ಇಡಿಯಾಗಿ ಆವರಿಸಿಕೊಳ್ಳುತ್ತಿದೆ, ಹಾಗಾಗಿ ಈ ಬಾಶೆಗಳೂ ಬೇರೆ ಬಾಶೆಗಳ ನಂಟನ್ನು ಬೆಳೆಸಿಕೊಳ್ಳುತ್ತಿವೆಯಾದರೂ ಪ್ರತಿಯೊಂದ ಬಾಶೆಯ ಬೆಳವಣಿಗೆಯೂ ವಿಬಿನ್ನ ಹಂತದಲ್ಲಿ, ವಿಬಿನ್ನ ಆಯಾಮದಲ್ಲಿ ಇದೆ. ಹಲವು ಸಾವಿರ ವರುಶಗಳ ಕಾಲ ಬೇರೆ ಬಾಶೆಗಳ ನಂಟು ಇಲ್ಲದೆ ಬದುಕಿದ್ದ ಬಾಶೆಗಳ ಇಂದಿನ ಪರಿಸ್ತಿತಿ ಇನ್ನು ಮುಂದೆ ಏನಾಗುವುದೊ ನೋಡಬೇಕು.

ಇಲ್ಲಿ ಮುಕ್ಯವಾಗಿ ಸಾಮಾಜಿಕತೆಯನ್ನು ಕನಿಶ್ಟ ಎರಡು-ಮೂರು ಸಾವಿರ ವರುಶಗಳ ಕಾಲ ವಿಸ್ತರಿಸಿಕೊಳ್ಳುತ್ತ ಬದುಕಿರುವ ಕನ್ನಡದಂತ ಬಾಶೆಗಳನ್ನು ಹಲವಾರು ಸಾವಿರ ವರುಗಳಗಳವರೆಗೆ ಹೊರಗಿನ ಸಂಬಂದ ಬಯಸುವ ಸಾಮಾಜಿಕತೆಯನ್ನೆ ಬೆಳೆಸಿಕೊಂಡಿಲ್ಲದ ಅಡವಿಯ ಬಾಶೆಗಳನ್ನು ಪರಸ್ಪರ ಎದುರಿಗಿಟ್ಟುಕೊಂಡು ನೋಡಬಹುದು. ಅವುಗಳ ಬದುಕು ಹೇಗಿದೆ? ಓಹ್, ಯೋಚಿಸಲು ... ಸಾದ್ಯವೆ? ಯೋಚಿಸಬಹುದು.

ಈ ಅಂಕಣದ ಹಿಂದಿನ ಬರೆಹಗಳು:
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...