ಭಗತ್ ಸಿಂಗ್-ವೀರ ಸಾವರ್ಕರ್

Author : ನಾ. ದಿವಾಕರ

Pages 80

₹ 60.00
Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಒಬ್ಬ ಹೋರಾಟಗಾರನನ್ನು ಆತ್ಯಂತಿಕವಾಗಿ ವಿರೋಧಿಸುವುದು ಸಾಧ್ಯವಾಗದೇ ಹೋದರೆ ಆತನಿಗೆ ತಮ್ಮ ಸಿದ್ಧಾಂತಗಳ ಬಣ್ಣ ಬಳಿದುಬಿಡುವುದು ಒಂದು ಬಗೆಯ ರಾಜಕಾರಣ. ಹಾಗೆ ಮಾಡುವುದರಿಂದ ಬಗೆ ಬಗೆಯ ಲಾಭವಿದೆ. ಮೊದಲನೆಯದು ಇತಿಹಾಸವನ್ನು ತಿರುಚಿ ತನಗೆ ಬೇಕಾದಂತೆ ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಎರಡನೆಯದು ಆ ನಾಯಕನಿಗಿಂತಲೂ ತಮ್ಮ ಸಿದ್ಧಾಂತ ದೊಡ್ಡದು ಎಂಬುದನ್ನು ಬಿಂಬಿಸಿದಂತಾಗುತ್ತದೆ. ಮೂರನೆಯದು ಹೊಸತಲೆಮಾರನ್ನು ತಮಗೆ ಬೇಕಾದಂತೆ ಅಣಿಗೊಳಿಸಿಕೊಳ್ಳಲು ಸಹಾಯಕವಾಗುತ್ತದೆ. ನಾ ದಿವಾಕರ ಅನುವಾದಿಸಿರುವ ವಿವಿಧ ಲೇಖನಗಳ ಸಂಕಲನ ’ಭಗತ್ ಸಿಂಗ್-ವೀರ ಸಾವರ್ಕರ್’ ಈ ಅಂಶಗಳನ್ನು ಪ್ರಶ್ನಿಸುತ್ತದೆ. 

ಕಾಲ ಸರಿದಂತೆ ಮಸುಕಾಗುವ ಇಬ್ಬರು ಚಾರಿತ್ರಿಕ ವ್ಯಕ್ತಿಗಳ ನಡುವಿನ ವ್ಯತ್ಯಾಸವನ್ನು ಅನುವಾದಕರು ತೆರೆದಿಟ್ಟಿದ್ದಾರೆ. ಯಾರು ಪಲಾಯನವಾದಿಯಾಗಿದ್ದರು; ಯಾರು ನಿಜವಾಗಿಯೂ ದೇಶಭಕ್ತರಾಗಿದ್ದರು. ನಂತರದ ದಿನಗಳಲ್ಲಿ ಅವರಿಬ್ಬರನ್ನೂ ಹೇಗೆ ಬಿಂಬಿಸಲಾಯಿತು ಎಂಬುದನ್ನು ಕೃತಿ ವಿವರಿಸುತ್ತದೆ. 

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books