ದೋಕ್ಲಾಂ ಕರ್ಮಕಾಂಡ

Author : ಯಡೂರ ಮಹಾಬಲ

Pages 64

₹ 50.00




Year of Publication: 2017
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಚೀನಾದೊಂದಿಗಿನ ಗಡಿ ಸಮಸ್ಯೆಗಳು ಇಲ್ಲವಾಗುತ್ತವೆ ಎಂಬ ಭಾವನೆ ಇತ್ತು. ಆದರೆ ಆ ಭಾವನೆ ಹುಸಿಯಾಯಿತು. ದೋಕ್ಲಾಂ ಬಿಕ್ಕಟ್ಟು ಭುಗಿಲೆದ್ದಿತು. ಯಾರೇ ಅಧಿಕಾರಕ್ಕೆ ಬಂದರೂ ಪರಿಸ್ಥಿತಿ ಸುಧಾರಿಸದು ಎಂಬ ಸಂದೇಶ ಹೊರಟಿತು. ಈ ಗಡಿ ತಂಟೆಯ ಪೂರ್ವಾಪರವನ್ನು ವಿವರಿಸಿದ್ದಾರೆ ಲೇಖಕ ಯಡೂರ ಮಹಾಬಲ. ದೋಕ್ಲಾಂ ವಿವಾದ ಇಂದಿನ ಸಮಸ್ಯೆಯಲ್ಲ ಅದಕ್ಕೆ ಒಂದು ಶತಮಾನದಷ್ಟು ಇತಿಹಾಸವಿದೆ ಎನ್ನುವ ಗಮನಾರ್ಹ ಅಂಶವನ್ನು ಲೇಖಕರು ಉಲ್ಲೇಖಿಸುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ಹಲವು ಮಾರ್ಗಗಳಿದ್ದರೂ ಇತಿಹಾಸದುದ್ದಕ್ಕೂ ಅದನ್ನು ಹೇಗೆ ನಿರ್ಲಕ್ಷಿಸುತ್ತ ಬರಲಾಯಿತು ಎಂಬುದನ್ನು ಹಾಗೂ ಇದು ಭಾರತಕ್ಕೆ ತಂದೊಡ್ಡಿದ ಸಮಸ್ಯೆಗಳನ್ನು ಚರ್ಚಿಸುತ್ತಾರೆ. 

ಒಟ್ಟು 7 ಅಧ್ಯಾಯಗಳನ್ನು ಹೊಂದಿರುವ ಕೃತಿ ಗಡಿ ತಂಟೆಗೂ ಭೂತಾನ್‌ ದೇಶಕ್ಕೂ ಇರುವ ಸಂಬಂಧವನ್ನು ವಿಶ್ಲೇಷಿಸುತ್ತದೆ. ಅಲ್ಲದೆ ದೋಕ್ಲಾಂ ಬಳಿ ರಸ್ತೆ ನಿರ್ಮಿಸಲು ಚೀನಾ ಮುಂದಾದಾಗ ಭಾರತ ಎದುರಿಸಿದ ಮುಖಭಂಗವನ್ನು ಕೂಡ ಪ್ರಸ್ತಾಪಿಸಲಾಗಿದೆ. ಒಂದು ಘಟನೆಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವುದಕ್ಕಿಂತಲೂ ಅದರ ಆಳ ಅಗಲ ಅರಿತು ಉತ್ತರಿಸಬೇಕು ಎನ್ನುವ ಕಾರಣಕ್ಕೆ ಕೃತಿಯನ್ನು ಓದಬಹುದು. ಪತ್ರಕರ್ತರು, ಸಮಾಜವಿಜ್ಞಾನಿಗಳು, ರಾಜಕಾರಣಿಗಳು, ಚಿಂತಕರು ಓದಲೇಬೇಕಾದ ಕೃತಿ ಇದು. 

About the Author

ಯಡೂರ ಮಹಾಬಲ
(11 June 1954)

ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ.  ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...

READ MORE

Related Books