ಗಾಂಧೀ ನೆಹರೂ ಆಯ್ದ ಪತ್ರಗಳು

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 266

₹ 250.00
Year of Publication: 2014
Published by: ನ್ಯಾಷನಲ್ ಬುಕ್ ಟ್ರಸ್ಟ್
Address: ಬಿಡಿಎ ಸಂಕೀರ್ಣ, ಬನಶಂಕರಿ ಎರಡನೇ ಹಂತ, ಬೆಂಗಳೂರು
Phone: 080 2671 6594

Synopsys

ಮಹಾತ್ಮಾ ಗಾಂಧೀ ಮತ್ತು ಜವಾಹರ್ ಲಾಲ್ ನೆಹರೂ ಅವರು ಬರೆದಂತಹ ಪತ್ರಗಳು ಇಂದಿಗೂ ಮಹತ್ವ ಪಡೆದಿವೆ. ಗಾಂಧಿ ಅವರು ಬರೆದ ಪತ್ರಗಳಲ್ಲಿ ಅವರು ತಮ್ಮ ತತ್ವಗಳ ಪರಿಪಾಲನೆ ಹಾಗೂ ಅಹಿಂಸಾ ಮಾರ್ಗದ ಮಹತ್ವದ ಅರಿವನ್ನು ನೀಡಿದ್ದಾರೆ. ಯಾವ ರೀತಿ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದ ಉದ್ದೇಶ ಸಫಲವಾಗುವುದು ಎಂಬ ಅರಿವನ್ನು ಗಾಂಧೀಜಿಯವರು ಬರೆದಂತಹ ಪತ್ರಗಳೂ ನೀಡುತ್ತವೆ.  ಜವಾಹರ್ ಲಾಲ್ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರಗಳನ್ನು ಪ್ರಾಥಮಿಕ ಮಕ್ಕಳ ಪುಸ್ತಕಗಳಲ್ಲಿ ಪಠ್ಯವಾಗಿತ್ತು. ಜೀವನವನ್ನು ಯಶಸ್ವಿಯಾಗಿ ಯಾವ ರೀತಿ ಮುನ್ನಡೆಸಬೇಕು ಎಂಬುದರ ಕುರಿತು ತಮ್ಮ ಮಗಳಿಗೆ ಬರೆದಂತಹ ಪತ್ರಗಳು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಗಾಂಧೀಜಿ ಮತ್ತುನೆಹರೂ ಅವರು ಬರೆದ ಪತ್ರಗಳಲ್ಲಿ ಪ್ರಮುಖವಾಗಿರುವ ಪತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅರ್ಜುನ್ ದೇವ್ ಅವರು ಇಂಗ್ಲಿಷಿನಲ್ಲಿ ಸಂಪಾದಿಸಿದ ಕೃತಿಯನ್ನು ಕನ್ನಡಕ್ಕೆ ಎಂ ಅಬ್ದುಲ್ ರೆಹಮಾನ್ ಪಾಷಾ ಅವರು ಅನುವಾದಿಸಿದ್ದಾರೆ. ದೇಶದ ಅಗ್ರಮಾನ್ಯ ವ್ಯಕ್ತಿಗಳ ಅಪರೂಪದ ಪತ್ರಗಳು ಸೊಗಸಾಗಿ ಅನುವಾದಗೊಂಡಿಗೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books