ಕೆಳದಿ ಅರಸರ ಯಶೋಗಾಥೆ

Author : ಜಯದೇವಪ್ಪ ಜೈನಕೇರಿ

Pages 240

₹ 250.00




Year of Publication: 2017
Published by: ಶಾಂತಲಾ ಪ್ರಕಾಶನ
Address: ಶಾಂತಲಾ ಪ್ರಕಾಶನ #87, ಶಾಂತಲಾ ಜಿಲ್ಲಾ ಪಂಚಾಯತ್ ಎದುರು, ಕುವೆಂಪು ರಸ್ತೆ, ಶಿವಮೊಗ್ಗ-577201

Synopsys

ವಿಜಯನಗರ ಅರಸರ ಸಾಮಂತ ರಾಜರಲ್ಲಿಕೆಳದಿ ಅರಸು ಮನೆತನ ಕೂಡ ಒಂದು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಿಗೆ ಹಲವು ಕಾಣಿಕೆಗಳನ್ನು ನೀಡಿದ ಮನೆತನ ಅದು. ಕೆಳದಿ ಸಂಸ್ಥಾನದ ಆರಂಭ, ಇತಿಹಾಸ, ಪ್ರಮುಖ ಅರಸರ ವರ್ಣಮಯ ಭಾವಚಿತ್ರಗಳು, ಸಂಸ್ಥಾನದ ಅರಮನೆ, ಕೋಟೆಗಳು, ವಿಶಿಷ್ಟ ವಾಸ್ತುಶಿಲ್ಪದ ದೇಗುಲಗಳು, ಶಾಸನಗಳು, ಸ್ಮಾರಕಗಳ ಚಿತ್ರಗಳು, ಹೀಗೆ ಕೆಳದಿ ಸಂಸ್ಥಾನದ ಸಮಗ್ರ ಚಿತ್ರಣವನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ.

About the Author

ಜಯದೇವಪ್ಪ ಜೈನಕೇರಿ

ಸಾಹಿತಿ, ಸಂಶೋಧಕ ಜಯದೇವಪ್ಪ ಜೈನಕೇರಿ ಅವರು ಮೂಲತಃ ಶಿವಮೊಗ್ಗದವರು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ‘ಕೆಳದಿ ಅರಸರ ಯಶೋಗಾಥೆ’, ‘ಶರಣ ವೈಭವ’, ‘ವಚನಾಮೃತ’, ‘ಶರಣ ಸಂಪದ’, ‘ಸಾಹಿತ್ಯ ಸಂಪದ’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಅವರು 07 ಸೆಪ್ಟಂಬರ್‌ 2020ರಲ್ಲಿ ನಿಧನರಾದರು. ...

READ MORE

Related Books