ಮಹಾತ್ಮ ಗಾಂಧಿ ಕೊಲೆ - ಹಿನ್ನೆಲೆ

Author : ಚಂದ್ರಕಾಂತ ಪೋಕಳೆ

Pages 40

₹ 35.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ಪಶ್ಚಿಮ, ಶಿವಾನಂದ ಸರ್ಕಲ್ ಹತ್ತಿರ, ಬೆಂಗಳೂರು

Synopsys

ವೈಚಾರಿಕವಾಗಿ ಭಿನ್ನ ನಿಲುವುಳ್ಳ ವ್ಯಕ್ತಿಗಳನ್ನು ಸದ್ದಿಲ್ಲದೆ ಇಲ್ಲವಾಗಿಸುವ ಸಂಚೊಂದು ರೂಪುಗೊಳ್ಳುವುದು ಜಗತ್ತಿನಾದ್ಯಂತ ಗೋಚರವಾಗಿದೆ. ನಮ್ಮ ದೇಶದಲ್ಲೂ ಗಾಂಧೀ ಹತ್ಯೆಯ ವಿಶ್ಲೇಷಣೆ ಇದುವರೆಗೂ ಖಂಡನೆಯ ರೂಪದಲ್ಲಿತ್ತು. ಬರುಬರುತ್ತಾ ಅದರ ರೂಪವೇ ಬದಲಾದದ್ದು ವಿಸ್ಮಯ ಮತ್ತು ಆತಂಕಕಾರಿ. ಯಾವುದೋ ಮಹತ್ಕಾರ್ಯ ಸಾಧನೆಗೆ ಆ ಕೆಲಸ ಮಾಡಿದ್ದೆಂದು ಸಮರ್ಥಿಸಿ ಕೊಳ್ಳುವ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಹಾಗೂ ಸಹಚರರನ್ನು ಇಂದು ಹುತಾತ್ಮರೆಂದು ಬಣ್ಣಿಸುವ, ಅವರನ್ನು ಅಮರರನ್ನಾಗಿಸಲು ಸ್ಮಾರಕ ಕಟ್ಟುವ ಹಿಂಬಾಲಕರು ಕಾಣಿಸುತ್ತಿದ್ದಾರೆ. ಗಾಂಧೀಜಿಯನ್ನು ಕೊಂದಿದ್ದೇಕೆಂದು ಸ್ಪಷ್ಟವಾಗಿ ನಿರ್ಭಯವಾಗಿ ಹೇಳುವ ಗೋಡ್ಸೆ ಮುಂದೊಂದು ದಿನ ಹೀರೋ ಆಗುವ ಅಪಾಯವನ್ನು ಈ ಕೃತಿ ಮುಂದಿಡುತ್ತದೆ...

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books