ಮಹಾರಾಷ್ಟ್ರದ ಮೂಲ

Author : ಶಂ.ಬಾ. ಜೋಶಿ

₹ 70.00




Published by: ಶಂಬಾ ವಿಚಾರ ವೇದಿಕೆ
Phone: 099010 84070

Synopsys

ಲೇಖಕ ಡಾ. ಶಂ. ಬಾ. ಜೋಶಿ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಮಹಾರಾಷ್ಟ್ರದ ಮೂಲ, ಅರ್ಥಾತ್‌ ಮೂಲ ಮಹಾರಾಷ್ಟ್ರʼ. ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಇದು ಮಹಾರಾಷ್ಟ್ರದ ಇತಿಹಾಸದ ಬಗ್ಗೆ ಹೇಳುವ ಕೃತಿಯಾಗಿದೆ. ಆಧುನಿಕ ಮರಾಠಿ ಭಾಷೆಯು ಮಹಾರಾಷ್ಟ್ರ ಪ್ರಾಕೃತದಿಂದ ಅಭಿವೃದ್ಧಿಗೊಂಡದ್ದಾಗಿದೆ. ಸುಮಾರು 4 ಶತಮಾನಗ ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಮಹಾರಾಷ್ಟ್ರವು ಮೊದಲ ಸಹಸ್ರಮಾನದಲ್ಲಿ ಹಲವಾರು ಸಾಮ್ರಾಜ್ಯಗಳ ಭಾಗವಾಗಿತ್ತು. ಇವುಗಳಲ್ಲಿ ಮೌರ್ಯ ಸಾಮ್ರಾಜ್ಯ, ಸಾತವಾಹನ ರಾಜವಂಶ, ವಕಾಟ ಸಾಮ್ರಾಜ್ಯ, ಚಾಲುಕ್ಯ ರಾಜವಂಶ ಮತ್ತು ರಾಷ್ಟ್ರಕೂಟ ರಾಜವಂಶಗಳೂ ಸೇರಿವೆ. ಹೀಗೆ ಮಹಾರಾಷ್ಟ್ರ ನೆಲದ ಮೂಲದ ಬಗ್ಗೆ ಈ ಪುಸ್ತಕವು ಹೇಳುತ್ತದೆ.

About the Author

ಶಂ.ಬಾ. ಜೋಶಿ
(04 January 1896 - 28 September 1991)

ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...

READ MORE

Related Books