ಪಾಶ್ಚಾತ್ಯ ತತ್ವಜ್ಞಾನದ ಇತಿಹಾಸ

Author : ಪಿ. ವಿ. ನಾರಾಯಣ

Pages 1160

₹ 500.00




Year of Publication: 2022
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕುವೆಂಪು ಭಾಷಾಭಾರತಿ ಪ್ರಾಧಿಕಾರ, \" ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು – 560056\"
Phone: 080-23183312

Synopsys

'ಜ್ಞಾನ ಮತ್ತು ಸಾಹಿತ್ಯದ ನಿರಂತರ ಕೊಡುಕೊಳ್ಳುವಿಕೆಯ ಮೂಲಕ ಕನ್ನಡ ಸಂಸ್ಕೃತಿಯ ಸಂಪರ್ಧನೆ' ಎಂಬುದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಧೈಯವಾಕ್ಯವಾಗಿದೆ. ಈ ಕೊಡುಕೊಳ್ಳುವಿಕೆಯು ವ್ಯಕ್ತಿ, ಸಂಸ್ಥೆ, ಭಾಷೆ ಇವೆಲ್ಲ ಘಟಕಗಳ ನಡುವೆ ಪರಸ್ಪರ ನಡೆಯಬೇಕಾಗುತ್ತದೆ. ಹೀಗಾಗಿ ಕನ್ನಡದಲ್ಲಿ ಹುಟ್ಟಿರುವ ಜ್ಞಾನ ಮತ್ತು ಸಾಹಿತ್ಯವನ್ನು ಸಾಧ್ಯವಾದಷ್ಟು ಹೆಚ್ಚು ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ತಲುಪಿಸಬೇಕಾಗಿದೆ. ಆದೇ ರೀತಿ ಹೊರಗಿನ ಜ್ಞಾನ ಮತ್ತು ಸಾಹಿತ್ಯವು ಕನ್ನಡಿಗರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರವು ಕಾರ್ಯೋನ್ಮುಖವಾಗಿದೆ. ಪಾಶ್ಚಾತ್ಯ ತತ್ರ ಜ್ಞಾನಕ್ಕೆ ಸಾಕಷ್ಟು ಸುದೀರ್ಘವಾದ ಇತಿಹಾಸವಿದೆ. ಪ್ರಾಚೀನ ಗೀ ಸಂಸ್ಕೃತಿಗೂ ಭಾರತೀಯ ಪ್ರಾಚೀನ ಸಂಸ್ಕೃತಿಗಳ ಸಾಕಷ್ಟು ಹತ್ತಿರದ ಹೋಲಿಕೆಯೂ ಇದೆಯೆನ್ನುತ್ತಾರೆ, ಭಾರತದಲ್ಲಿ ಪ್ರಾಚೀನವಾದುದು ಇಂದಿಗೂ ಅಲ್ಪಸ್ವಲ್ಪ ಉಳಿದಿದೆ, ಪಶ್ಚಿಮದಲ್ಲಿ ಉಳಿಯಲಿಲ್ಲ ಎನ್ನುವುದು ನಿಜ. ಈಚಿನ ಶತಮಾನಗಳನ್ನು ಗಮನಿಸಿದರೆ, ವಸಾಹತುಸಾಹಿ ಆಳ್ವಿಕೆಯು ಪಶ್ಚಿಮದವರಿಗೆ ಇತರ ಸಂಸ್ಕೃತಿಗಳನ್ನು ನೋಡಲು, ಅಧ್ಯಯನ ಮಾಡಲು ಮತ್ತು ಅವುಗಳ ಬಗ್ಗೆ ಬರೆಯಲು ಅವಕಾಶವನ್ನು ಮಾಡಿಕೊಟ್ಟಿತು. ಇತರರನ್ನು ಅಧ್ಯಯನ ಮಾಡುವ ಆಸಕ್ತಿ ಪಶ್ಚಿಮದವರಿಗೆ ನಮಗಿಂತ ಹೆಚ್ಚು ಆದೇನೇ ಇದ್ದರೂ ಒಟ್ಟಿನಲ್ಲಿ ವಸಾಹತುಶಾಹಿ ಆಡಳಿತದಿಂದಾಗಿ ಪಶ್ಚಿಮದವರ ಅನುಭವ ವಿಸ್ತಾರವಾಯಿತು. ಅದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ, ಪಶ್ಚಿಮದ ಆಧುನಿಕ ಸಾರಾಸ್ತ್ರಜರ ಮೇಲೆಯೂ ಆಗಿರಬಹುದು. ಪಶ್ಚಿಮದ ತತ್ತ್ವಶಾಸ್ತ್ರದ ಬಗ್ಗೆ ಬೇಕಾದಷ್ಟು ಇತರ ಪುಸ್ತಕಗಳು ಇವೆಯಾದರೂ ದರ್ಚೆಂಡ್ ರಸೆಲ್ ಅವರ ಕೃತಿಗೆ ವಿಶೇಷ ಮಹತ್ವ ಇದ್ದೇ ಇದೆ. ಅವರು ಬರೆದ 'ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ' ಕೃತಿಯ ಕನ್ನಡ ಭಾಷಾಂತರವು ಆಸಕ್ತರಿಗೆ ಈ ಮೂಲಕ ಕನ್ನಡದಲ್ಲಿ ದೊರೆಯುತ್ತಿದೆ. ಕನ್ನಡದ ಪ್ರಸಿದ್ಧ ಸಂಶೋಧಕರು, ಲೇಖಕರು ಹಾಗೂ ಭಾಷಾಂತರಕಾರರೂ ಆದ ಡಾ.ಪಿ.ಎ. ನಾರಾಯಣ ಅವರು ಒಂದೆರಡು ವರ್ಷಗಳ ಹಿಂದೆಯೇ ಈ ಅನುವಾದದ ತಯಾರಿ ನಡೆಸಿದ್ದರು. ತಾಂತ್ರಿಕವಾಗಿ ಅನುಮತಿ ಇತ್ಯಾದಿ ಪ್ರಕ್ರಿಯೆಗಳು ಪೂರೈಸುವಾಗ  ತಡವಾಯಿತು ಎಂದು ಅಜಕ್ಕರ ಗಿರೀಶ ಭಟ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books