ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ

Author : ಎನ್.ಪಿ. ಶಂಕರನಾರಾಯಣ ರಾವ್

Pages 220

₹ 60.00




Year of Publication: 1988
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ' ಇತಿಹಾಸ ಬರಹದ ಪುಸ್ತಕವಿದು. ಲೇಖಕ ಎನ್.ಪಿ. ಶಂಕರನಾರಾಯಣ ರಚಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಬಹುಮುಖಿಯಾದ್ದು. ಗಾಂಧೀಜಿಯಂತಹ ಸೌಮ್ಯವಾದಿಗಳ, ಸಾವರ್ಕರರಂತಹ ಕ್ರಾಂತಿಕಾರಿಗಳ ಹೋರಾಟದ ದಾರಿ ಭಿನ್ನ. ಭಿನ್ನ ಹೋರಾಟದಲ್ಲಿ ತೊಡಗಿದ ಹಲವರು ಬ್ರಿಟಿಷ್ ನ್ಯಾಯಾಲಯಗಳ ಕಟಕಟೆಯಲ್ಲಿ ನಿಂತು ಮೊಕದ್ದಮೆ ಎದುರಿಸಬೇಕಾಯಿತು. ಈ ಹೋರಾಟಗಾರರ ವಾದ ಸರಣಿಯಲ್ಲಿನ ವಿಚಾರಗಳು ದೇಶಾದ್ಯಂತ ಸ್ವದೇಶ ಪ್ರೇಮದ ಹೆದ್ದೆರೆಗಳನ್ನು ಎಬ್ಬಿಸಿದವು. ಈ ಪ್ರಜ್ವಲ ಪ್ರಸಂಗಗಳ ಸ್ಮರಣೆ ಈ ಗ್ರಂಥ. ಇತಿಹಾಸದ ಕುರಿತು ಲೇಖಕರು ಹೊಂದಿದ ಒಳನೋಟ ಓದುಗರಿಗೊಂದು ಹೊಸನೋಟ ನೀಡಬಲ್ಲದ್ದಾಗಿದೆ ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.

About the Author

ಎನ್.ಪಿ. ಶಂಕರನಾರಾಯಣ ರಾವ್
(03 August 1928 - 28 November 2006)

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...

READ MORE

Related Books