ಹೈದರಾಬಾದ ಸಂಸ್ಥಾನದಲ್ಲಿನ ಚಾರಿತ್ರಿಕ ಸ್ವಾತಂತ್ಯ್ರಾಂದೋಲನ

Author : ಎಂ. ಧ್ರುವನಾರಾಯಣ

Pages 314

₹ 230.00




Year of Publication: 2016
Published by: ಎಸ್.ಎಲ್.ಎನ್. ಪಬ್ಲಿಕೇಷನ್
Address: ನಂ. 3437, 4 ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು – 28
Phone: 9972129376

Synopsys

ಹೈದರಾಬಾದ ಸಂಸ್ಥಾನದಲ್ಲಿನ ಚಾರಿತ್ರಿಕ ಸ್ವಾತಂತ್ಯ್ರಾಂದೋಲನ  ಕೃತಿಯನ್ನು  ಹಿರಿಯ ವಿದ್ವಾಂಸ ಪ್ರೊ. ಎಂ. ಧ್ರುವನಾರಾಯಣ ಅವರು ಹೊರತಂದಿದ್ದಾರೆ.

ಹೈದರಾಬಾದ ಸಂಸ್ಥಾನದ ಚರಿತ್ರೆಯನ್ನು ವಿವರಿಸುವುದಕ್ಕಾಗಿ ಅಲ್ಲಿ ಆಳ್ವಿಕೆ ನಡೆಸಿದ ಅಸಫ್ ಜಾಹಿರಾಜ ಮನೆತನದ ಇತಿಹಾಸ, ಆಡಳಿತ ವ್ಯವಸ್ಥೆ, ಸ್ವತಂತ್ರ ಸಾಮ್ರಾಜ್ಯದ ಬಗ್ಗೆ ನಿಜಾಮರ ದುರಾಡಳಿತ, ಮತ್ತು ಸ್ವಾತಂತ್ಯ್ರ ಆಂದೋಲನದ ಪಕ್ಷಿನೋಟವನ್ನು ನೀಡಿದ್ದಾರೆ.

ನಿಜಾಂ ಹಾಗೂ ಈಸ್ಟ್ ಇಂಡಿಯಾ ಕಂಪನಿ ಹಾಗೂ ಕ್ರಿ.ಶ. 1724 ರಲ್ಲಿ ಹೈದರಾಬಾದ್ ಸಂಸ್ಥಾನದ ಹುಟ್ಟು, ಸಂಸ್ಥಾನದ ವಿಲಿನೀಕರಣ ಹಾಗೂ ಮಹಾತ್ಮ ಗಾಂಧೀಜಿ ,ಮತ್ತು ಹಲವು ನಾಯಕರ ಪಾತ್ರಗಳ ಬಗ್ಗೆ ಚರ್ಚಿಸುವ ಕೃತಿ ’ ಹೈದರಾಬಾದ ಸಂಸ್ಥಾನದಲ್ಲಿನ ಚಾರಿತ್ರಿಕ ಸ್ವಾತಂತ್ಯ್ರಾಂದೋಲನ’.

 

About the Author

ಎಂ. ಧ್ರುವನಾರಾಯಣ
(01 July 1929)

ಹಿರಿಯ ವಿದ್ವಾಂಸ ಎಂ. ಧ್ರುವನಾರಾಯಣ ಅವರು ಜನಿಸಿದ್ದು ನಾರಾಯಣದೇವರಕೆರೆಯಲ್ಲಿ. ರಾಯಚೂರಿನ ಪಂಡಿತ್‌ ತಾರಾನಾಥ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ.  ಜೀವನ ಚರಿತ್ರೆ ಅನುವಾದ ಕ್ಷೇತ್ರಗಳಲ್ಲದೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ರಾವ್ ಬಹದ್ದೂರ್, ಪಂಡಿತ ತಾರಾನಾಥ, ಹನುಮಂತಗೌಡ (ಜೀವನ ಚರಿತ್ರೆ), ಡಾ. ಬಾಬಾ ಸಾಹೇಬ ಅಂಬೇಡ್ಕರರ ಬರಹಗಳು, ವಿಜಯನಗರ ಕಾಲದಲ್ಲಿನ ನೀರಾವರಿ ವ್ಯವಸ್ಥೆ (ಅನುವಾದ), ಭಾರತದ ಸಂವಿಧಾನ, ರಾಜ್ಯ ಶಾಸ್ತ್ರ ಮೀಮಾಂಸಕರು, ಸಾರ್ವಜನಿಕ ಆಡಳಿತ (ಪಠ್ಯ ಪುಸ್ತಕಗಳು). ಪಂಡಿತ್‌ ತಾರಾನಾಥ ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಹಿರಿಮೆ ಅವರದು. ...

READ MORE

Related Books