ಅರಾಬಿಕ್-ಪರ‍್ಶಿಯನ್ ಪಸರಿಸಿಕೊಳುವ ಬಗೆ

Date: 08-06-2024

Location: ಬೆಂಗಳೂರು


"ದಾರ‍್ಮಿಕ ಶಿಕ್ಶಣದ ಬಾಗವಾಗಿ ಇಸ್ಲಾಂ ಪಂತವನ್ನು ನಂಬುವ ಎಲ್ಲರೂ ಅರಾಬಿಕ್ ಬಾಶೆಯನ್ನು ಕಡ್ಡಾಯವಾಗಿ ಕಲಿಯುತ್ತಿದ್ದರು. ಹಾಗಾಗಿ ಎಲ್ಲರಿಗೂ ಅರಾಬಿಕ್ ಗೊತ್ತಿತ್ತು. ಇನ್ನೊಂದೆಡೆ ಮೊದಲಿನಿಂದಲೂ ಪರ‍್ಶಿಯನ್ ಬಾಶೆ ಆಡಳಿತ ಬಾಶೆಯಾಗಿ ಬಹಮನಿ ಸಾಮ್ರಾಜ್ಯದಲ್ಲಿ ಇದ್ದುದನ್ನು ನೋಡಬಹುದು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಬರೆದ 100ನೇಯ ಬರಹ ‘ಅರಾಬಿಕ್-ಪರ‍್ಶಿಯನ್ ಪಸರಿಸಿಕೊಳುವ ಬಗೆ’ ನಿಮ್ಮ ಓದಿಗಾಗಿ.

ಈ ಹಿಂದಿನ ಬರಹದಲ್ಲಿ ಅರಾಬಿಕ್-ಪರ‍್ಶಿಯನ್ ಬಾಶೆಗಳನ್ನು ಒಟ್ಟೊಟ್ಟಿಗೆ ಮಾತನಾಡುತ್ತಿದ್ದೆವು. ಈಗ ಇವೆರಡನ್ನು ಬೇರೆಯಾಗಿ ಮಾತನಾಡೋಣ. ಬಹಮನಿ ಸಾಮ್ರಾಜ್ಯದ ನಂತರದಿಂದ ನಮಗೆ ಇತಿಹಾಸಿಕ ಆದಾರಗಳು ಹೆಚ್ಚು ಸಿಗುತ್ತವೆ.

ಅರಾಬಿಕ್-ಪರ‍್ಶಿಯನ್ ಬಹಮನಿ ಸಾಮ್ರಾಜ್ಯದ ಸ್ತಾಪನೆಯೊಂದಿಗೆ ವ್ಯಾಪಕವಾಗಿ ಬಳಕೆಗೆ ಬಂದವು. ಅರಾಬಿಕ್ ಬಾಶೆಯು ಸಾಮಾನ್ಯವಾಗಿ ದಾರ‍್ಮಿಕ ಬಾಶೆಯಾಗಿ ಮಾತ್ರ ಬಳಕೆಯಲ್ಲಿದ್ದಿತು. ಹಾಗಾಗಿ ಅರಾಬಿಕ್ ಬಾಶೆಯನ್ನು ರಾಜರಾದಿಯಾಗಿ ಬಹುತೇಕರು ಮನೆಯಲ್ಲಿ ಬಳಸುತ್ತಿರಲಿಲ್ಲ. ಆದರೆ, ದಾರ‍್ಮಿಕ ಶಿಕ್ಶಣದ ಬಾಗವಾಗಿ ಇಸ್ಲಾಂ ಪಂತವನ್ನು ನಂಬುವ ಎಲ್ಲರೂ ಅರಾಬಿಕ್ ಬಾಶೆಯನ್ನು ಕಡ್ಡಾಯವಾಗಿ ಕಲಿಯುತ್ತಿದ್ದರು. ಹಾಗಾಗಿ ಎಲ್ಲರಿಗೂ ಅರಾಬಿಕ್ ಗೊತ್ತಿತ್ತು. ಇನ್ನೊಂದೆಡೆ ಮೊದಲಿನಿಂದಲೂ ಪರ‍್ಶಿಯನ್ ಬಾಶೆ ಆಡಳಿತ ಬಾಶೆಯಾಗಿ ಬಹಮನಿ ಸಾಮ್ರಾಜ್ಯದಲ್ಲಿ ಇದ್ದುದನ್ನು ನೋಡಬಹುದು. ಹೀಗಾಗಿ ಅರಾಬಿಕ್ ಬಳಕೆಗೆ ಮದರಸಾದ ಹೊರಗೆ, ಮಸೀದಿಗಳ ಹೊರಗೆ ಅಶ್ಟು ಜಾಗ ಇರಲಿಲ್ಲ. ದಾರ‍್ಮಿಕ ಮಂತ್ರ ಪಟಣ, ದಾರ‍್ಮಿಕ ಪ್ರವಚನ ಮೊದಲಾದ ಕಡೆಗಳಲ್ಲಿ ಮಾತ್ರ ಅರಾಬಿಕ್ ತನ್ನ ಸ್ತಾನವನ್ನು ಸೀಮಿತಿಗೊಳಿಸಿಕೊಂಡಿದ್ದಿತು. ಇಸ್ಲಾಂ ಆಳರಸರು ಕಟ್ಟಿಸಿದ ಮಸೀದಿ, ದರಗಾ ಮೊದಲಾದ ದಾರ‍್ಮಿಕ ಕೇಂದ್ರಗಳಲ್ಲಿ ಅರಾಬಿಕ್ ಬಾಶೆಯಲ್ಲಿ ಕುರಾನಿನ ಶ್ಲೋಕಗಳನ್ನು ಕೆತ್ತಿರುವುದನ್ನು ಬಹಳಶ್ಟು ಕಡೆ ಸಾಮಾನ್ಯವಾಗಿ ಕಾಣಬಹುದು. ಇದರ ಹೊರತಾಗಿ ಯಾವುದೆ ಆಡಳಿತಾತ್ಮಕ, ಸಾಮಾಜಿಕ ವಿಶಯಗಳಿರುವ ಕಡೆ ಅರಾಬಿಕ್ ಬಳಕೆಯಾಗಿರುವುದು ಇರಲಿಕ್ಕಿಲ್ಲ. ಇಲ್ಲೆಲ್ಲ ಪರ‍್ಶಿಯನ್ ಬಾಶೆಯ ಬಳಕೆ ಅತ್ಯಂತ ಸಹಜವಾಗಿ ಕಾಣಿಸುತ್ತದೆ. ಅರಾಬಿಕ್ಕಿನ ನೂರಾರು ಬರಹಗಳನ್ನು ಹೀಗೆ ಕಾಣಬಹುದು. ಆದರೆ, ಪರ‍್ಶಿಯನ್ ಬಾಶೆಯ ಬಳಕೆ ಅರಾಬಿಕ್ ಬಾಶೆಯ ಬಳಕೆಗೆ ಹೋಲಿಸಿದರೆ ವಿಪರೀತ ವ್ಯಾಪಕತೆಯನ್ನು ಹೊಂದಿದ್ದಿತು. ಹೀಗಾಗಿ ದಾರ‍್ಮಿಕೇತರವಾದ ಎಲ್ಲ ವಿಶಯಗಳಲ್ಲಿ ಪರ‍್ಶಿಯನ್ ಬಾಶೆ ಬಳಕೆಯಾಗಿದೆ. ಬಹಮನಿ, ಆದಿಲ್ ಶಾಹಿ, ಬರೀದ್ ಶಾಹಿ ಮನೆತನಗಳಲ್ಲಿ ಈ ಸ್ತಿತಿ ಹೀಗಿದ್ದಿತು.

ಅರಾಬಿಕ್ ದಾರ‍್ಮಿಕ ಬಾಶೆಯಾಗಿದ್ದರಿಂದ ಅದು ಜನರ ನಡುವೆ ಬರಲೆ ಇಲ್ಲ. ಹಾಗಾಗಿ ಅರಾಬಿಕ್ ಕನ್ನಡ ಪರಿಸರದೊಳಗೆ ಎಶ್ಟು ಬೆರೆತುಕೊಂಡಿದೆ ಎಂಬುದು ಅನುಮಾನ. ಆದರೆ, ಅರಾಬಿಕ್ಕಿನ ಶಬ್ದಗಳು ಪರ‍್ಶಿಯನ್ನಿನ ಮೂಲಕವೆ ಕನ್ನಡದೊಳಗೆ ಸೇರಿರುವ ಅವಕಾಶ ಇದೆ. ಆದರೆ, ಆಡಳಿತ ಬಾಶೆಯಾಗಿದ್ದ ಪರ‍್ಶಿಯನ್ ಸಹಜವಾಗಿ ಜನರ ಸಂರ‍್ಕಕ್ಕೆ ಬಂದಿತು. ಈ ಹಿಂದೆ ಪಾಗದ-ಸಕ್ಕದ ಇವುಗಳು ಕನ್ನಡ ಪರಿಸರದೊಳಗೆ, ಕನ್ನಡ ಸಮಾಜದೊಳಗೆ ಬೆರೆತುಕೊಂಡ ಬಗೆಯನ್ನು ಮಾತನಾಡಿದಂತೆ, ಪರ‍್ಶಿಯನ್ ಹೇಗೆ ಬೆಳೆಯುತ್ತದೆ ಎನ್ನುವುದನ್ನೂ ತುಸು ಗಮನಿಸಬೇಕು. ರಾಜಸಂಬಂದ, ಮತಪಸರಣ, ವ್ಯಾಪಾರ ಸಂಬಂದ ಇವುಗಳು ಮುಕ್ಯವಾದ ದಾರಿಗಳಾದರೂ ಒಕ್ಕಲುತನ, ಸಂಗೀತ ಮೊದಲಾಗಿ ಇನ್ನೂ ಹಲವು ಸಾಮಾಜಿಕ ವಲಯಗಳಲ್ಲಿ ಪರ‍್ಶಿಯನ್ ಕನ್ನಡದೊಳಗೆ ಬೆರೆತುಕೊಳ್ಳುತ್ತದೆ. ಈ ನಡುಗಾಲದ ಆಡಳಿತದ ಕೇಂದ್ರದಲ್ಲಿದ್ದ ಇಸ್ಲಾಂ-ಸೂಪಿ ನಂಬಿಕೆಯ ಆಳರಸರು ಅರಬ್ ನೆಲಮೂಲದಿಂದ ತಂದ ವಿಗ್ನಾನವನ್ನೂ, ಆಡಳಿತವನ್ನೂ ತರುವುದರ ಮೂಲಕ ರಾಜ್ಯರಚನೆಯಿಂದ ಮೊದಲ್ಗೊಂಡು, ಶಿಲ್ಪ, ಸಂಗೀತ ಮೊದಲಾಗಿ ಹಲವು ವಲಯಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಈ ಬದಲಾವಣೆಗಳಿಗೆ ಸಾದನವಾಗಿ ಒದಗಿದ್ದು ಪರ‍್ಶಿಯನ್. ಹೀಗಾಗಿ ಈ ಎಲ್ಲ ವಲಯಗಳಲ್ಲಿಯೂ ಪರ‍್ಶಿಯನ್ ಕನ್ನಡ ಸಮಾಜದೊಳಗೆ ಹರಿಡಾದುತ್ತದೆ. ಪಾಗದವೂ ಹೀಗೆಯೆ ಸಾಮಾನ್ಯರ ಜೊತೆಯಲ್ಲಿ ಹರಿದಾಡಿಕೊಂಡದ್ದು. ಸಂಗೀತ, ವಿಗ್ನಾನ, ಆಡಳಿತ ಮೊದಲಾದ ವಲಯಗಳಲ್ಲಿ ಪರ‍್ಶಿಯನ್ ಇದ್ದರೂ ಆದುನಿಕ ವಿದ್ವತ್ ವಲಯದಲ್ಲಿ ಅದರ ಪ್ರಬಾವ ಕಡಿಮೆಯೆ. ಇದಕ್ಕೆ ಹಲವು ಕಾರಣಗಳಿರಬಹುದು. ಬರಹವನ್ನು ಅಶ್ಟಾಗಿ ಅವಲಂಬಿಸದ ಮತ್ತು ತಿರಸ್ಕರಿಸಿದ ಮತಪಂತಗಳಲ್ಲಿ ಸೂಪಿ ಕೂಡ ಒಂದು. ಸೂಪಿ ಮೂಲಕ ಪರ‍್ಶಿಯನ್ ವ್ಯಾಪಕವಾಗಿ ಕನ್ನಡ ಸಮಾಜವನ್ನು ಆವರಿಸಿಕೊಳ್ಳುತ್ತದೆ. ಹಾಗಾಗಿ ಇಂದಿನ ಸಾಮಾನ್ಯ ಬದುಕಿನಲ್ಲಿ ಪರ‍್ಶಿಯನ್ ಎಲ್ಲೆಡೆ ತನ್ನ ಇರುವಿಕೆಯನ್ನು ಇಂದಿಗೂ ತೋರಿಸುತ್ತದೆ.

ಆಡಳಿತದಲ್ಲಿ ಮತ್ತು ಒಕ್ಕಲುತನದ ವಲಯದಲ್ಲಿ ಈ ಕಾಲದಲ್ಲಿ ಆದ ಬದಲಾವಣೆಗಳು ಹೆಚ್ಚು ಅನುಕೂಲಕಾರಿಯಾಗಿದ್ದವು. ಹೀಗಾಗಿ ಇಂದಿಗೂ ಇವು ಉಳಿದುಕೊಂಡು ಬಂದಿವೆ. ಹೀಗಾಗಿ ಇಂತಾ ವಲಯಗಳಲ್ಲೆಲ್ಲ ಪರ‍್ಶಿಯನ್ ಪದಗಳು ಉಳಿದುಕೊಂಡು ಬಂದಿವೆ. ಪರ‍್ಶಿಯನ್ ಬಾಶೆಯ ಬಹುದೊಡ್ಡ ಪದಕೋಶ ಕನ್ನಡಕ್ಕೆ ಬಂದು ಸೇರಿಕೊಂಡಿದೆ.

ಪರ‍್ಶಿಯನ್ ಬಾಶೆಯನ್ನಾಡುವುದು ಆಡಳಿತದ ಹತ್ತಿರದಲ್ಲಿ ಇರುವವರಿಗೆ ಅನಿವರ‍್ಯವಾಗಿದ್ದಿತು. ರಾಜರ ಬಾಶೆಯನ್ನು ಕಲಿಯುವುದು ಅವಶ್ಯಕತೆಯೂ ಆಗಿದ್ದಿತು. ಹೀಗಾಗಿ ಸಮಾಜದ ಮೇಲ್ರ‍್ಗ ಇದರ ಕಡೆಗೆ ಹೆಚ್ಚು ಆಸ್ತೆಯನ್ನು ತೋರಿಸಿತು. ಆದರೆ, ಪರ‍್ಶಿಯನ್ ಬಾಶೆಯ ಬಳಕೆ ವಿಬಿನ್ನವಾಗಿ ಬೆಳೆದು ಉರ‍್ದು ಎಂಬ ಬಾಶೆ ಬೆಳೆಯುವುದಕ್ಕೆ ಕಾರಣವಾಗುತ್ತದೆ. ಈಉರ‍್ದು ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ಕಾಣಬಹುದು. ಪರ‍್ಶಿಯನ್ ಎಶ್ಟುಮಟ್ಟಿಗೆ ಕನ್ನಡೊಂದಿಗೆ ಬೆರೆತುಕೊಂಡಿತೆಂದರೆ ಪರ‍್ಶಿಯನ್ ಬಾಶೆಯ ಶಬ್ದಗಳು ಮಾತ್ರವಲ್ಲದೆ ಪ್ರತ್ಯಯಗಳನ್ನೂ ಕನ್ನಡ ಪಡೆದುಕೊಳ್ಳುತ್ತದೆ. ಮುಕ್ಯವಾದ ವಿಚಾರವೆಂದರೆ –ದಾರ ಇಂತ ಹಲವು ಪ್ರತ್ಯಯಗಳು ಕನ್ನಡದಲ್ಲಿ ಉತ್ಪಾದಕವೂ ಆಗಿವೆ. ಅಂದರೆ ಈ ಪ್ರತ್ಯಯವನ್ನು ಪರ‍್ಶಿಯನ್ನಿನಿಂದ ಬಂದ ಪದಗಳ ಮೇಲೆ ಮಾತ್ರವಲ್ಲದೆ ಕನ್ನಡದ ದೇಸಿ ಪದಗಳ ಮೇಲೂ ಹಾಕಿ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಸಾದ್ಯವಿದೆ. ಇಶ್ಟುಮಟ್ಟಿಗೆ ಕನ್ನಡದೊಂದಿಗೆ ಪರ‍್ಶಿಯನ್ ಸಂಬಂದವನ್ನು ಬೆಳೆಸಿಕೊಳ್ಳುತ್ತದೆ.

ಸೂಪಿ ಮತದ ಕುರಿತು ಮಾತನಾಡುವಾಗ ಕಲಬುರಗಿಯ ಬಂದೆ ನವಾಜ, ಯಾದಗಿರಿ ಜಿಲ್ಲೆಯ ಗೋಗಿ ಊರಿನ ಚಂದಾ ಹುಸೇನಿ, ಗದಗಿನ ಹತ್ತಿರ ಯಮನೂರಿನ ಯಮನೂರಪ್ಪ, ವಿಜಾಪುರದ ಯಂಕಂಚಿಯ ದಾವುಲ್ ಮಲಿಕ್ ಮೊದಲಾದ ಇನ್ನೂ ಹಲವು ದೊಡ್ಡ ಸೂಪಿಗಳನ್ನು ಇಲ್ಲಿ ಹೆಸರಿಸಬಹುದು. ಈ ಸೂಪಿಗಳು 14-15-16ನೆ ಶತಮಾನದಲ್ಲಿ ಬದುಕಿದ್ದು ಅಂದಿನ ಸಾಮಾನ್ಯ ಮಂದಿಯ ಸಮಸ್ಯೆಗಳಿಗೆ ಒದಗಿದರು. ಇವರು ಸಾಮಾನ್ಯರ ಜೊತೆಗೆ ಮಾತನಾಡುವುದಕ್ಕೆ ಪರ‍್ಶಿಯನ್ ಬಾಶೆಯನ್ನು ಬಳಸಿದರು. ಆದರೆ ಅದು ತನ್ನ ಸ್ವರೂಪವನ್ನು ನಿರಂತರ ಬದಲಿಸಿಕೊಳ್ಳುತ್ತಿತ್ತು. ಇದುವೆ ಮುಂದೆ ಉರ‍್ದುವಾಗಿ ಬೆಳೆಯುವುದನ್ನು ಮುಂದಿನ ಬರಹದಲ್ಲಿ ನೋಡಲಿದ್ದೇವೆ. ಕನ್ನಡ ಪರಿಸರದ ಬಹು ಹಳೆಯ ಪರ‍್ಶಿಯನ್ ಬರಹಗಾರ ಹದಿನಾಲ್ಕು-ಹದಿನಯ್ದನೆ ಶತಮಾನದ ಕಲಬುರಗಿಯ ಬಂದೆ ನವಾಜ ಆಗಿದ್ದಾನೆ.

ಪರ‍್ಶಿಯನ್ ಬಾಶೆಯ ಸಂಬಂದ ಮತ್ತು ಪ್ರಬಾವ ಇವುಗಳ ಕುರಿತು ಒಂದು ಮಹತ್ವದ ಅಂಶವನ್ನು ಉಲ್ಲೇಕಿಸಬೇಕು. ಪರ‍್ಶಿಯನ್ ಬಾಶೆ ಇಡಿಯಾಗಿ ಕನ್ನಡವನ್ನು ಬಹು ಆಯಾಮಗಳಲ್ಲಿ ಪ್ರಬಾವಿಸಿದರೂ ಇಂದಿನ ಶಿಶ್ಟಕನ್ನಡದಲ್ಲಿ ಅದರ ಇರುವಿಕೆ ಸ್ಪಶ್ಟವಾಗಿ ಕಾಣುವಂತೆ ಇದ್ದರೂ ಕನ್ನಡ ವಿದ್ವತ್ತು ಇದನ್ನು ಅಶ್ಟು ಗಂಬೀರವಾಗಿ ನೋಡುವುದಿಲ್ಲ. ಸಂಸ್ಕೃತದಿಂದ ಬಂದ ಪದಗಳ ಬಗೆಗೆ ತೋರಿಸುವ ಅದ್ಯಯನಾಸಕ್ತಿ ಪರ‍್ಶಿಯನ್ನಿನಿಂದ ಬಂದ ಪದಗಳ ಬಗೆಗೆ ಕಾಣಿಸುವುದಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು:
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಯಾವು ಮತ್ತು ಎಶ್ಟು?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ಕನ್ನಡಗಂಳ್-ಯಾಕೆ ಬಹುಳತೆ?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವ

MORE NEWS

ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ

26-07-2024 ಬೆಂಗಳೂರು

"ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ...

ತುಳುವಿನೊಡನೆ ಸಹಸಂಬಂದ

20-07-2024 ಬೆಂಗಳೂರು

"ತುಳುವಿನ ಕುರಿತು ಮಾತನಾಡಬೇಕಾದ ಕೆಲವು ಮಹತ್ವದ ಅಂಶಗಳಿವೆ. ದಕ್ಕನದಲ್ಲಿ ವ್ಯಾಪಿಸಿಕೊಂಡಿರುವ ಅರಬಿ ಸಮುದ್ರದ ಕರಾ...

ಮತ್ಸ್ಯಾಸನ ಮತ್ತು ಪರಿವೃತ್ತ ಪಾರ್ಶ್ವಕೋನಾಸನ

19-07-2024 ಬೆಂಗಳೂರು

"`ಮತ್ಸ್ಯಾಸನ' ಮಾಡುವುದರಿಂದ ಬೆನ್ನುಮೂಳೆಯ ಮೇಲ್ಭಾಗದ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ಬೆನ್ನುಮೂಳೆಯನ...