Date: 18-11-2024
Location: ಬೆಂಗಳೂರು
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಶೆ ಆದಾರದ ಮೇಲೆ ಸಮಾನತೆಯನ್ನು ಯಾರೂ ಯೋಚಿಸುವುದಿಲ್ಲ. ದೇಶದಲ್ಲಿ ಶಿಕ್ಶಣವನ್ನು ಕೇವಲ ಕೆಲವೆ ಬಾಶೆಗಳಲ್ಲಿ ಕೊಡಲಾಗುತ್ತಿದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ’ ಕುರಿತು ಬರೆದಿರುವ ಲೇಖನ.
ಸಮಾನತೆ ಎನ್ನುವುದು ಆದುನಿಕ ರಾಶ್ಟ್ರಸಮಾಜಗಳ ಅತ್ಯಂತ ಮುಕ್ಯವಾದ ಒಂದು ಆಶಯ. ಪ್ರಜಾಪ್ರಬುತ್ವ ದೇಶಗಳು ಮುಕ್ಯವಾಗಿ ಈ ಆಶಯವನ್ನು ಹೊಂದಿವೆ. ದೇಶದ ಎಲ್ಲ ನಾಗರಿಕರ ನಡುವೆ ಸಮಾನತೆಯನ್ನು ತರುವುದು ಎಂಬುದೆ ಈ ಆಶಯ. ಸಮಾನತೆ ಎಂದರೆ ಏನು ಎಂಬುದನ್ನು ತುಸು ಸೂಕ್ಷ್ಮವಾಗಿ ಆಲೋಚಿಸಬೇಕು. ಸಮಾನತೆ ಎಂದರೆ ಸರಕಾರದ ಎಲ್ಲ ಸೇವೆ, ಸವುಲಬ್ಯ ಮೊದಲಾದವುಗಳನ್ನು ಪಡೆದುಕೊಳ್ಳುವಲ್ಲಿ ಎಲ್ಲರೂ ಸಮಾನ ಅವಕಾಶ ಹೊಂದಿರಬೇಕು, ಮತ ಚಲಾಯಿಸುವುದು ಮತ್ತು ಆಡಳಿತ ಇಲ್ಲವೆ ನಾಗರಿಕ ಸೇವೆ ಮೊದಲಾದ ವಲಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಬೇಕು ಎಂಬುದು. ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಶೆ ಆದಾರದ ಮೇಲೆ ಸಮಾನತೆಯನ್ನು ಯಾರೂ ಯೋಚಿಸುವುದಿಲ್ಲ. ದೇಶದಲ್ಲಿ ಶಿಕ್ಶಣವನ್ನು ಕೇವಲ ಕೆಲವೆ ಬಾಶೆಗಳಲ್ಲಿ ಕೊಡಲಾಗುತ್ತಿದೆ.
ಆ ಬಾಶೆಗಳನ್ನು ಬಲ್ಲವರಿಗೆ ಮಾತ್ರ ಅದು ಉಪಯೋಗಕಾರಿಯಾಗಿದೆ. ಉಳಿದವರಿಗೆ ಇನ್ನೊಂದು ಬಾಶೆಯನ್ನು ಕಲಿಯುವುದೆ ದೊಡ್ಡ ಕೆಲಸ. ಆನಂತರ ವಿಶಯವನ್ನು ಕಲಿಯಬೇಕಾದ ಅವಶ್ಯಕತೆ ಇರುತ್ತದೆ. ಹಾಗಾಗಿ ಪ್ರದಾನ ಬಾಶೆಗಳಲ್ಲದ ಮಕ್ಕಳಿಗೆ ಶಿಕ್ಶಣ ಸಮಾನವಾಗಿರದೆ ಅಸಮಾನವಾಗಿದೆ. ಬಾರತದಲ್ಲಿ ಇರುವ ನೂರಾರು ಬಾಶೆಗಳನ್ನು ಕನಿಶ್ಟ ಬಾಶೆಯಾಗಿಯೂ ಕಲಿಸುವ ಅವಕಾಶವನ್ನು ಇದುವರೆಗೆ ಬೆಳೆಸಿಲ್ಲ. ಕನಿಶ್ಟ ಪ್ರಾತಮಿಕ ಹಂತದಲ್ಲಿಯಾದರೂ ಇದರ ಅವಶ್ಯಕತೆ ಹೆಚ್ಚಿದೆ. ಅವರವರ ತಾಯ್ಮಾತುಗಳನ್ನು ಶಾಲೆಗಳಲ್ಲಿ ಇತರ ವಿಶಯಗಳ ಜೊತೆಜೊತೆಗೆ ಉಳಿಸಿದರೆ ಅದು ಮಕ್ಕಳನ್ನು ಶಿಕ್ಶಣಕ್ಕೆ ಕೊಂಡಿಸುವ ಕೆಲಸವನ್ನು ಮಾಡುತ್ತದೆ. ಹೀಗೆ ದೇಶದಲ್ಲಿ ಸಮಾನತೆಯನ್ನು ಸಾದಿಸುವುದು ಎಂದರೆ ಎಲ್ಲರಿಗೂ ಅವರವರ ಬಾಶೆಯಲ್ಲಿ ಶಿಕ್ಶಣವನ್ನು ಕೊಡುವುದು.
ಬಾರತ ಹಲವು ಸಾಮಾಜಿಕ ತರತಮಗಳಿಂದ ಕೂಡಿರುವ ದೇಶ. ಬಾಶಾ ತರತಮವೂ ಅವುಗಳಲ್ಲಿ ಒಂದು. ಸಾಮಾಜಿಕ ತರತಮದೊಂದಿಗೆ ಬಾಶಾ ತರತಮ ಅಂಟಿಕೊಂಡಿರುತ್ತದೆ. ಒಂದು ಸೊಗಸಾದ ಬಾಶಾ ತರತಮದ ಚಿತ್ರವನ್ನು ಕೊಡುವುದಾದರೆ, ಮಂಗಳೂರು ಪರಿಸರದ ನಿರ‍್ಶನವನ್ನು ತೆಗೆದುಕೊಳ್ಳೋಣ. ಬಾರತದಲ್ಲಿ ಇಂಗ್ಲೀಶು ಮತ್ತು ಹಿಂದಿಗಳ ನಡುವೆ ಇಂಗ್ಲೀಶು ಸಾಮಾಜಿಕವಾಗಿ ಮೇಲಂತಸ್ತಿನಲ್ಲಿ ಮತ್ತು ಹಿಂದಿ ತುಸು ಕೆಳಗೆ ಬರುತ್ತದೆ. ಇಂಗ್ಲೀಶನ್ನು ಹೊರತುಪಡಿಸಿ ಹಿಂದಿ ಮತ್ತು ಕನ್ನಡ ಮೊದಲಾದ ಇತರ ಬಾರತೀಯ ಬಾಶೆಗಳ ನಡುವಿನ ಸಂಬಂದವನ್ನು ಗಮನಿಸಿದರೆ ಹಿಂದಿ ಅದಕ್ಕಿರುವ ರಾಜಕೀಯ ಮತ್ತು ಆಡಳಿತದ ಬೆಂಬಲದಿಂದ ಪ್ರತಿಶ್ಟೆಯನ್ನು ಕನ್ನಡದೆದುರು ಪಡೆದುಕೊಳ್ಳುತ್ತದೆ.
ಕನ್ನಡವು ಹೆಚ್ಚಾಗಿ ಕರ‍್ನಾಟಕ ರಾಜ್ಯದಲ್ಲಿ ಬಳಕೆಯಲ್ಲಿರುವುದರಿಂದ ಕರ‍್ನಾಟಕದ ಪರಿಸರಕ್ಕೆ ಬರೋಣ. ಕರ‍್ನಾಟಕದಲ್ಲಿ ತುಳು ಮೊದಲಾದ ಹಲವು ಸ್ತಳೀಯ ಬಾಶೆಗಳು ದೊಡ್ಡ ಸಂಕೆಯ ಮಾತುಗರನ್ನು ಹೊಂದಿಯೆ ಬಳಕೆಯಲ್ಲಿ ಇವೆ. ಆದರೆ ಕನ್ನಡ ಅದಕ್ಕಿರುವ ರಾಜಕೀಯ, ಆಡಳಿತ, ಬಹುಸಂಕ್ಯಾತರ ಬಾಶೆ ಎಂಬ ಕೋಡು ಮೊದಲಾದವು ಸೇರಿ ತುಳುವಿನ ಎದುರು ಮೇಲಂತಸ್ತನ್ನು ಅನುಬವಿಸುತ್ತದೆ. ತುಳು ಕೆಳಗಿನದಾಗುತ್ತದೆ. ತುಳು ಪ್ರದಾನವಾಗಿ ಬಳಕೆಯಲ್ಲಿರುವ ಮಂಗಳೂರು ಪ್ರದೇಶಕ್ಕೆ ಬಂದಾಗ ತುಳು ಅಲ್ಲಿ ವ್ಯಾಪಕ ಬಳಕೆಯ ಬಾಶೆಯಾಗಿ, ಪರಿಸರದ ಬಾಶೆಯಾಗಿ ಕಾಣಿಸುತ್ತದೆ. ಹಾಗಾಗಿ ಅಲ್ಲಿಯೆ ಸ್ತಳೀಯವಾಗಿ ಕಂಡುಬರುವ ಸಾಮಾಜಿಕವಾಗಿ ಕೆಳಮಟ್ಟದಲ್ಲಿ ಇರುವ ಕೊರಗರ ಬಾಶೆ ತುಳುವಿಗಿಂತ ಕೆಳಗಿನದು ಆಗುತ್ತದೆ.
ಈ ತರತಮ್ಯ ಕರ‍್ನಾಟಕದ, ಬಾರತದ ಎಲ್ಲ ಪರಿಸರಗಳಲ್ಲಿಯೂ ಒಂದಲ್ಲಾ ಇನ್ನೊಂದು ರೀತಿಯಲ್ಲಿ ಇದೆ. ತುಂಬಾ ಬಿನ್ನವಾದ ಬಹುಬಾಶಿಕ ಪರಿಸರ ಇರುವಲ್ಲಿಯೂ ಈ ತರತಮ ಮಾತ್ರ ಇದ್ದೆ ಇದೆ. ಈ ಕೊಂಡಿಯಲ್ಲಿ ಸಿಗುವ ಬಾಶೆಗಳೆಂಬ ಗಂಟುಗಳೆಶ್ಟು ಎಂಬಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಸಮಾನತೆ ಎಂದಾಗ ಕೊರಗ ಮಾತನಾಡುವವರೂ, ಕನ್ನಡ ಇಲ್ಲವೆ ಇಂಗ್ಲೀಶು ಮಾತನಾಡುವವರೂ ಅವರ ಬಾಶೆಯ ಕಾರಣಕ್ಕೆ ಮೇಲು-ಕೀಳು ಕಾರಣವನ್ನು ಅನುಬವಿಸುವಂತಾಗಬಾರದು. ಎಲ್ಲ ಬಾಶೆಗಳನ್ನೂ ಸಮಾನವಾಗಿ ಕಾಣುವಂತಾಗಬೇಕು. ಅದಕ್ಕೆ ಎಲ್ಲ ಬಾಶಿಕರೂ ತಮ್ಮ ಬಾಶೆಗಳನ್ನು ಬಿಟ್ಟು ಪ್ರದಾನ ಬಾಶೆಗಳಿಗೆ ಬರುವುದು ಪರಿಹಾರ ಆಗುವುದಿಲ್ಲ. ಹಾಗಾದರೆ ಅದನ್ನು ಪ್ರಜಾಪ್ರಬುತ್ವದ ಕೊಲೆ ಎಂದೆನ್ನಬೇಕಾಗುತ್ತದೆ.
ಬಾರತೀಯ ಹಲವರಲ್ಲಿ ಈ ತರತಮ ರಚನೆಯಲ್ಲಿ ತಮಗಿಂತ ಮೇಲಿರುವ ಬಾಶೆಗೆ ಹೆಚ್ಚು ಮರ‍್ಯಾದೆ ಕೊಡುತ್ತಾರೆ. ಬಾರತೀಯ ಸಾಮಾಜಿಕ ರಚನೆಯಲ್ಲಿ ಸಾಮಾಜಿಕ, ದರ‍್ಮಿಕ ಒಳಗೊಂಡು ಸಾಂಸ್ಕೃತಿಕವಾದ ಹಲವು ಆಯಾಮಗಳಲ್ಲಿ ತಮಗಿಂತ ಮೇಲಿರುವವರನ್ನು ಕೆಳಗಿರುವವರು ಅನುಸರಿಸುವುದು, ಮಾದರಿಯಾಗಿ ತೆಗೆದುಕೊಳ್ಳುವುದು ಮತ್ತು ಅವರಿಗೆ ತುಸು ಹೆಚ್ಚು ಮರ‍್ಯಾದೆಯನ್ನು ಕೊಡುವುದು ಕಂಡುಬರುತ್ತದೆ. ಅದರಂತೆಯೆ ಬಾಶಿಕ ಅಂತಸ್ತಿನಲ್ಲಿ ತಮಗಿಂತ ಮೇಲಿರುವ ಬಾಶೆಗೆ ಕೆಳಗಿರುವ ಬಾಶೆಯ ಮಾತುಗರು ಹೆಚ್ಚಿನ ಮರ‍್ಯಾದೆಯನ್ನು ಕೊಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕನ್ನಡದಂತಾ ಪ್ರದಾನ ಬಾಶೆಗಳಿಗೆ ರಾಜಕೀಯ ಕಾರಣದಿಂದಾಗಿ ತಮ್ಮ ಕೆಳಸ್ತಿತಿಗೆ ಕಾರಣವಾದ ಬಾಶೆಯನ್ನು ಒಡೆಯುವುದು ಇಲ್ಲವೆ ಎದುರಿಸುವುದು ಬದುಕಿನ ಅವಶ್ಯಕತೆ ಆಗಿರುತ್ತದೆ. ಇದು ಸಣ್ಣ ಸಣ್ಣ ಬಾಶೆಗಳಿಗೂ ವಾಸ್ತವ. ಆದುನಿಕ ಕಾಲದ ಹಲವಾರು ಬೆಳವಣಿಗೆಗಳಿಂದಾಗಿ ಇಂದು ಬಾಶೆಗಳ ನಡುವಿನ ಅಸಮಾನತೆ ಬಹುವ್ಯಾಪಕವಾಗಿ ಬೆಳೆದು ನಿಂತಿದೆ. ಹಾಗಾಗಿ ತಮ್ಮ ಈ ಸ್ತಿತಿಗೆ ಕಾರಣವಾದ ಬಾಶೆಯನ್ನು ಒಡೆಯುವುದು, ಎದುರಿಸುವುದು ಅನಿವರ‍್ಯದ ಸಾಮಾಜಿಕ ಮುಂಚಲನೆ ಎಂದು ಎಲ್ಲರೂ ಬಾವಿಸಿಕೊಳ್ಳುತ್ತಾರೆ.
ಈ ವಾಸ್ತವವನ್ನು ಶಿಕ್ಶಣಕ್ಕೂ ಎಳೆದು ತಂದು ಸಾಮಾಜಿಕ ಅಂತಸ್ತಿನಲ್ಲಿ ತಮ್ಮ ಮೇಲಿನ ಬಾಶೆಯ ಶಿಕ್ಶಣವನ್ನು ಅವರು ಬಯಸುತ್ತಾರೆ. ಹೀಗಾಗಿ ಈ ಮೇಲಿನ ನಿರ‍್ಶನದ ಸಂರ‍್ಬದಲ್ಲಿ ಕೊರಗರು ಶಿಕ್ಶಣವನ್ನು ತುಳುವಿನಲ್ಲಿ ಇಶ್ಟಪಡಬಹುದು, ಆದರೆ ತುಳುವರು ಕನ್ನಡವನ್ನು ಇಶ್ಟಪಡಬಹುದು. ಕನ್ನಡದವರು ಶಿಕ್ಶಣದ ವಿಚಾರದಲ್ಲಿ ಇಂಗ್ಲೀಶನ್ನು ಇಶ್ಟಪಡುತ್ತಾರೆ. ಹಿಂದಿಯನ್ನು ಇಶ್ಟಪಡುವ ಸ್ತಿತಿ ಬೇರೆ ಹಲವು ಕಾರಣಗಳಿಂದ ಇಲ್ಲ. ಈ ಮನಸ್ತಿತಿಯನ್ನು ಮುರಿದು ಅವರವರ ಬಾಶೆಗಳಲ್ಲಿ ಪ್ರಾತಮಿಕ ಶಿಕ್ಶಣವನ್ನು ಕೊಡುವ ಕೆಲಸವನ್ನು ಮಾಡಲೇಬೇಕಾದ ಜರೂರು ಇದೆ.
ಈ ಅಂಕಣದ ಹಿಂದಿನ ಅಂಕಣಗಳು:
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
©2024 Book Brahma Private Limited.