ಆರು ಗ್ರೀಕ್ ನಾಟಕಗಳು

Author : ಎಸ್.ವಿ. ರಂಗಣ್ಣ 

Pages 488

₹ 315.00




Year of Publication: 2014
Published by: ಹೇಮಂತ ಸಾಹಿತ್ಯ
Address: # 972-ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 63ನೇ ಅಡ್ಡರಸ್ತೆ, 4ನೇ ಎಂ. ಬ್ಲಾಕ್, 4ನೇ ಇ-ಬ್ಲಾಕ್, ಮಂಜುನಾಥ ನಗರ, ರಾಜಾಜಿ ನಗರ, ಬೆಂಗಳೂರು-560010

Synopsys

ಹಿರಿಯ ಸಾಹಿತಿ ಡಾ. ಎಸ್.,ವಿ. ರಂಗಣ್ಣ ಅವರು ಗ್ರೀಕ್ ಭಾಷೆಯ ಆರು ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಕೃತಿ ಇದು. ಗ್ರೀಕ್ ನ ಬಹುತೇಕ ನಾಟಕಗಳು ಪುರಾಣದ ಕಥಾವಸ್ತುವನ್ನು ಹೊಂದಿವೆ. ದೇವರುಗಳ ಮತ್ತು ವೀರರ, ವಿಶ್ವ ಪ್ರಕೃತಿ ಮತ್ತು ಅದರ ಮೂಲ ಹಾಗೂ ವಿಧಿ ಮತ್ತು ಮತಾಚರಣೆ ರೂಢಿಗಳಿಗೆ ಸಂಬಂಧಿಸಿದವು. ಆದರೆ, ಅವು ಸಾಮಾಜಿಕ ಹೊಣೆಗಾರಿಕೆಯನ್ನೂ ಪ್ರದರ್ಶಿಸಿವೆ. ಆದ್ದರಿಂದ, ಕವಿಗಳು ಮತ್ತು ಕಲಾವಿದರು ಪುರಾತನ ಕಾಲದಿಂದ ಈಗಿನವರೆಗೂ ಈ ಗ್ರೀಕ್ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆಯುತ್ತಲ್ಲೇ ಇದ್ದಾರೆ

About the Author

ಎಸ್.ವಿ. ರಂಗಣ್ಣ 
(24 December 1898 - 17 February 1987)

ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ  1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921)  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ...

READ MORE

Related Books