ಲೋಕ ಶಾಕುಂತಲ

Author : ಕೆ.ವಿ. ಸುಬ್ಬಣ್ಣ

₹ 80.00




Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741
Phone: 9480280401

Synopsys

ಲೇಖಕ ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಹಲವಾರು ಸಂಸ್ಕೃತ ನಾಟಕಗಳಲ್ಲಿ ʻಲೋಕ ಶಾಕುಂತಲʼ ಒಂದು ಕೃತಿ. ಇದು ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್ʼ ಆಧರಿಸಿದ ಕೃತಿಯಾಗಿದೆ. 1990 ರಲ್ಲಿ ನಿರ್ದಿಷ್ಟ ರಂಗಪ್ರಯೋಗದ ಅಗತ್ಯಕ್ಕಾಗಿ ಈ ಅನುವಾದ ನಡೆದಿದೆ. ಆದರೆ, ಇದು ಮೂಲವನ್ನಾಧರಿಸಿ ಕಟ್ಟಿರುವ ಮರುರೂಪವೇ ಹೊರತು ನೇರ ಅನುವಾದವಲ್ಲ. ಸಂಸ್ಕೃತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ, ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ರೂಪಾಂತರದ ಹಿಂದಿದೆ. ಇಂಥ ಹಿನ್ನೆಲೆ ಸ್ಪಷ್ಟವಾಗಲೆಂಬ ಕಾರಣಕ್ಕಾಗಿ ಮೊದಲ ಮುದ್ರಣ ಮತ್ತು ಪ್ರಯೋಗದ ಸಂದರ್ಭದಲ್ಲಿ ಬರೆಯಲಾದ ಟಿಪ್ಪಣಿಯನ್ನು ಈ ಪುಸ್ತಕದ ತುದಿಗೆ ಅನುಬಂಧವಾಗಿ ಸೇರಿಸಲಾಗಿದೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books