ಹೆಗ್ಗಾಳಿ: ವಿಲಿಯಂ ಶೆಕ್ಸ್ ಪಿಯರ್ ದಿ. ಟೆಂಪೆಸ್ಟ್

Author : ಕೆ.ಎಸ್. ಭಗವಾನ್

Pages 96

₹ 81.00




Year of Publication: 2016
Published by: ಅಭಿಶ್ರುತಿ ಪ್ರಕಾಶನ
Address: 10, ಉದಯರವಿ ರಸ್ತೆ, ಕುವೆಂಪುನಗರ, ಮೈಸೂರು 570023

Synopsys

ವಿಲಿಯಂ ಶೆಕ್ಸ್ ಪಿಯರ್ ನ ದಿ ಟೆಂಪೆಸ್ಟ್ ನಾಟಕವನ್ನು ಪ್ರೊ. ಕೆ.ಎಸ್. ಭಗವಾನ್ ಅವರು ಕನ್ನಡಕ್ಕೆ ‘ಹೆಗ್ಗಾಳಿ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಶೆಕ್ಸ್ ಪಿಯರ್ ನಾಟಕಗಳನ್ನು ಕನ್ನಡಕ್ಕೆ ತಂದಿರುವ ಖ್ಯಾತಿಯ ಲೇಖಕರು, ದಿ. ಟೆಂಪೆಸ್ಟ್ ನಾಟಕವನ್ನೂ ಕನ್ನಡೀಕರಿಸಿದ್ದು, ಕನ್ನಡ ಓದುಗರಿಗೆ ಧೀಮಂತ ನಾಟಕಕಾರನ ವ್ಯಕ್ತಿತ್ವ-ವಿಚಾರವನ್ನು ಪರಿಚಯಿಸಿದ್ದಾರೆ.

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Related Books