ಮಾಸ್ಟರ್‌ ಬಿಲ್ಡರ್‌

Author : ಶ್ರೀನಿವಾಸ ವಿ. ಸುತ್ರಾವೆ

Pages 152

₹ 60.00




Year of Publication: 2001
Published by: ವಿನಯ್‌ ಪ್ರಕಾಶನ
Address: ವಿದ್ಯಾನಗರ, ದಾವಣಗೆರೆ

Synopsys

‘ಮಾಸ್ಟರ್‌ ಬಿಲ್ಡರ್‌’ ಶ್ರೀ‍ನಿವಾಸವಿ. ಸುತ್ರಾವೆ ಅವರ ಅನುವಾದಿತ ನಾಟಕವಾಗಿದೆ. ಪಾಶ್ಚಿಮಾತ್ಯ-ಯೂರೋಪ್‌ಗಳ ನಾಟಕರರಿಗೆ ಭದ್ರ ಬುನಾದಿ ಹಾಕಿಕೊಂಡ ಇಬ್ಬನ್‌ ಅವರ ನಾಟಕದ ಭದ್ರ ಬುನಾದಿಯಾಗಿದೆ.

About the Author

ಶ್ರೀನಿವಾಸ ವಿ. ಸುತ್ರಾವೆ
(30 March 1942)

ಶ್ರೀನಿವಾಸ ವಿ. ಸುತ್ರಾವೆ ಮೂಲತಃ ದಾವಣಗೆರೆಯವರು, ತಂದೆ ಎಸ್. ವೆಂಕಟಗಿರಿ ರಾವ್, ತಾಯಿ- ಎಸ್. ಶಾಂತಾಬಾಯಿ. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಡಿ.ಆರ್.ಎಂ ಕಾಲೇಜಿನಲ್ಲಿ ಪಿಯೂಸಿ ಪೂರ್ಣಗೊಳಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ  ಪೂರ್ಣಗೊಳಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ಅವರು  ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಉದುರುವ ಎಲೆಗಳು, ಚೆರಿ ತೋಟ, ಆಯ್ದ ರಷ್ಯನ್ ಕಥೆಗಳು, ಚೆಕಾಫನ ಎರಡು ನಾಟಕಗಳು, ಸಿಂಹ ಮತ್ತು ರತ್ನ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Reviews

ಹೊಸತು-2002-ಮಾರ್ಚ್

ಪಾಶ್ಚಿಮಾತ್ಯ -ಯೂರೋಪ್‌ಗಳ ಯಶಸ್ವಿ, ನಾಟಕಕಾರರಿಗೆ ಭದ್ರ ಬುನಾದಿ ಹಾಕಿಕೊಟ್ಟ ಇಬ್ಬನ್‌ನ ಒಂದು ನಾಟಕದ ಅನುವಾದ. ತಲುಪಲಾರದ ಎತ್ತರಕ್ಕೆ ಏರುವ ಮಹತ್ವಾಕಾಂಕ್ಷೆಯಲ್ಲಿ ಮೇಲೇರಿ ವಿಜಯಿಯಾದೆ ಎನ್ನುವಷ್ಟರಲ್ಲಿ ಅವನು ಪತನದ ದಾರಿ ಹಿಡಿದಿರುತ್ತಾನೆಂಬುದು ಇಲ್ಲಿನ ನಾಟಕದ ನೀತಿಯಾಗಿದೆ. ಅತ್ಯಂತ ಸಂಕೀರ್ಣ ಪಾತ್ರಗಳು ನಮ್ಮ ಎಚ್ಚರದಲ್ಲಿ ನಾವಿರಬೇಕಾದ ಅಗತ್ಯವನ್ನು ಸಾರಿ ಹೇಳುತ್ತವೆ. ಅನುವಾದ ಸಾಹಿತ್ಯದಲ್ಲಿ ಪಳಗಿದ, ರಶ್ಯನ್ ಸಾಹಿತ್ಯ ಕೃತಿಗಳನ್ನು ಈಗಾಗಲೇ ಕನ್ನಡಿಸಿದ ಶ್ರೀ ಸುತ್ರಾವೆಯವರ ಸಮರ್ಥ ಅನುವಾದ.

Related Books