ಮೆಕ್‌ಬೆತ್‌

Author : ಕೆ.ಎನ್. ಭಗವಾನ್

Pages 127

₹ 40.00




Year of Publication: 2001
Published by: ತಳುಕಿನ ವೆಂಕಣಯ್ಯ ಸ್ಮಾರಕ ಗ್ರಂಥಮಾಲೆ
Address: ಮೈಸೂರು

Synopsys

‘ಮೆಕ್‌ಬೆತ್‌’ ಷೇಕ್ಸ್‌ಪಿಯರ್‌ನ ನಾಟಕದ ಕನ್ನಡ ಅನುವಾದವಾಗಿದೆ. ಷೇಕ್ಸ್‌ಪಿಯರ್‌ನ ಇಂಗ್ಲೀಷ್‌ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುದು ಬಹಳಷ್ಟು ಇದ್ದರು ಈ ಅನುವಾದದಲ್ಲಿ ಲೇಖಕರು ಹೊಸ ಮೆರುಗನ್ನು ನೀಡಿದ್ದಾರೆ.

About the Author

ಕೆ.ಎನ್. ಭಗವಾನ್
(09 June 1942)

ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.  ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...

READ MORE

Reviews

ಹೊಸತು -ಡಿಸೆಂಬರ್‌-2001

ಅಪರೂಪದ ಚಿಂತಕ-ವಿಮರ್ಶಕರಾದ ಶ್ರೀ ಭಗವಾನ್ ಉತ್ತಮ ಅನುವಾದಕರೂ ಹೌದೆಂದು ಇಲ್ಲಿ ಧಾರಾಳವಾಗಿ ಹೇಳಬಹುದು. ಷೇಕ್ಸ್‌ಪಿಯರನ ಇಂಗ್ಲಿಷ್ ನಾಟಕಗಳನ್ನು ಕನ್ನಡದಲ್ಲಿ ಅನುವಾದಿಸಿದ್ದು ಬಹಳಷ್ಟು ಇದ್ದರೂ ಸಹ ಈ ಅನುವಾದಕ್ಕೆ ಹೆಚ್ಚಿನ ಮೆರುಗನ್ನು ಲೇಖಕರು ನೀಡಿದ್ದಾರೆ. ಪ್ರಸ್ತುತ ನಾಟಕ ರಾಜದಂಡ-ರಾಜವಂಶಗಳಿಂದ ಗರ್ವ ತಳೆದು ಕಣ್ಣಿದ್ದೂ ಕುರುಡರಾದ ರಾಜರ ಹಾಗೂ ಶ್ರೀಮಂತ ವರ್ಗಗಳಿಂದ ಜನರ ಪಾಡು ಹೇಗೆ ನಾಯಿಪಾಡಾಗುವುದೆಂದು ಚಿತ್ರಿಸಲಾಗಿದೆ.

Related Books