ನೇತಾಜಿ ಚಲೋ ದಿಲ್ಲಿ ಎಂದವರು ಹೋದರೆಲ್ಲಿ?

Author : ಪ್ರತಾಪ್ ಸಿಂಹ

Pages 264

₹ 248.00




Year of Publication: 2013
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಪತ್ರಕರ್ತ ಹಾಗೂ ಲೇಖಕ ಪ್ರತಾಪಸಿಂಹ ಅವರ ಕೃತಿ-ನೇತಾಜಿ ಚಲೋ ದಿಲ್ಲಿ ಎಂದವರು ಹೋದರೆಲ್ಲಿ? ಭೋಸರು ಕಟ್ಟಿದ ಭಾರತೀಯ ರಾಷ್ಟ್ರೀಯ ಸೇನೆಯ ಲೆಫ್ಟಿನೆಂಟ್ ಆಗಿದ್ದ ಮಾನ್ವತಿ ಆರ್ಯ ಅವರು ಬರೆದ ಕೃತಿಯೇ ತಮಗೆ ಈ  ಬರವಣಿಗೆಗೆ ಪ್ರೇರಣೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇಂದಿಗೂ ನೇತಾಜಿ ಅವರ ಸಾವು ನಿಗೂಢವಾಗೇ ಇದೆ. ಆದ್ದರಿಂದ, ಹತ್ತು ಹಲವು ಸಂಶಯಗಳ ಮಧ್ಯೆ ಅವರ ಜೀವನ ಚರಿತ್ರೆ ತೊಳಲಾಡುತ್ತಿದೆ. ಕೇಂದ್ರ ಸರಕಾರವು ಈ ಕುರಿತು ಖಚಿತವಾಗಿ ಹೇಳುತ್ತಿಲ್ಲ. ಈ ಬಗ್ಗೆ ಲೇಖಕರು ತಮ್ಮದೇ ಆಧಾರ-ತರ್ಕಗಳನ್ನು ಬಳಸಿ ರಚಿಸಿದ ಕೃತಿ ಇದು.

About the Author

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಮೂಲತಃ ಸಕಲೇಶಪುರದವರು. ಪದವಿ ಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್.ಡಿ.ಎಂ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಎಂಸಿಜೆ ಮಂಗಳೂರಿನಿಂದ ಪತ್ರಿಕೋದ್ಟಮದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಎಂ ಐ ಸಿ ಇ ಮಂಗಳೂರಿನಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ.  ವಿಜಯ ಕರ್ನಾಟಕದಲ್ಲಿ ಬೆತ್ತಲೆ ಜಗತ್ತು, ಕನ್ನಡಪ್ರಭದಲ್ಲಿ ಸುದ್ದಿ ಸಂಪಾದಕರಾಗಿ ಬೆತ್ತಲೆ ಪ್ರಪಂಚ ಅಂಕಣ ಬರೆಯುತ್ತಿದ್ದರು.  ಬೆತ್ತಲೆ ಜಗತ್ತು- 14 ಪುಸ್ತಕಗಳು ( ಅಂಕಣ ಬರಹಗಳ ಸಂಗ್ರಹ), ನರೇಂದ್ರ ಮೋದಿ (ಯಾರೂ ತುಳಿಯದ ಹಾದಿ), ಟಿಪ್ಪು ಸುಲ್ತಾನ ಸ್ವಾತಂತ್ರವೀರನಾ, ಮೈನಿಂಗ್ ಮಾಫಿಯಾ, ಮೋದಿ ಮುಸ್ಲಿಂ ...

READ MORE

Related Books