ಡಾ. ಜಿನದತ್ತ ದೇಸಾಯಿ ಅವರ ಕಾವ್ಯ ಸಂವೇದನೆ

Author : ಬಾಳಣ್ಣ ಶೀಗೀಹಳ್ಳಿ

Pages 152

₹ 150.00




Year of Publication: 2020
Published by: ವರ್ಧಮಾನ ಪ್ರಕಾಶನ
Address: ಸಪ್ತಾಪೂರ, 2ನೆಯ ಅಡ್ಡರಸ್ತೆ, ಧಾರವಾಡ- 580001

Synopsys

‘ಡಾ. ಜಿನದತ್ತ ದೇಸಾಯಿ ಅವರ ಕಾವ್ಯ ಸಂವೇದನೆ’ ದತ್ತಿ ಉಪನ್ಯಾಸಗಳ ಸಂಕಲನವನ್ನು ಡಾ. ಬಾಳಣ್ಣ ಶೀಗೀಹಳ್ಳಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಪ್ರಕಾಶಕರ ಮಾತು, ಸಂಪಾದಕರ ಮಾತು ಸೇರಿದಂತೆ ಪ್ರೊ.ಬಸವರಾಜ ವಕ್ಕುಂದ ಅವರ ದೇಸಾಯಿಯವರ ಕಾವ್ಯದಲ್ಲಿ ಮೌಲ್ಯಗಳ ಸಂಘರ್ಷ, ಡಾ.ವಾಯ್. ಎಂ. ಯಾಕೊಳ್ಳಿ ಅವರ ಜಿನದತ್ತ ದೇಸಾಯಿಯವರ ಕಾವ್ಯದ ವೈಶಿಷ್ಟ್ಯಗಳು, ಡಾ.ವ್ಹಿ.ಎಸ್. ಮಾಳಿ ಅವರ ಜಿನದತ್ತರ ಕಾವ್ಯ ವಿಶೇಷ, ಡಾ. ಬಸವರಾಜ ಜಗಜಂಪಿ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ನಿಸರ್ಗ, ಡಾ.ಬಾಳಣ್ಣ ಶೀಗೀಹಳ್ಳಿ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ಸಮಾಜಮುಖಿ ಚಿಂತನೆ, ಡಾ.ಗುರುದೇವಿ ಹುಲೆಪ್ಪನವರಮಠ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ಅಂತರ್ಮುಖಿ ಚಿಂತನೆ, ಡಾ.ಜಿ.ಎಂ. ಹೆಗಡೆ ಅವರ ಸಹಸ್ರ ಚಂದ್ರ:ವಸ್ತು ವಿಶ್ಲೇಷಣೆ ಲೇಖನಗಳು ಸಂಕಲನಗೊಂಡಿವೆ.

About the Author

ಬಾಳಣ್ಣ ಶೀಗೀಹಳ್ಳಿ
(01 July 1947)

ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ದೇಗಾವಿ ಗ್ರಾಮದವರು.  ಪ್ರಾಧ್ಯಾಕರಾಗಿ ನಿವೃತ್ತರು.  ‘ಡೆಪ್ಯೂಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ’ ಕುರಿತು ಮಹಾಪ್ರಂಬಂಧ ರಚಿಸಿದ್ದಾರೆ. ಕೃತಿ ಸಂಗಾತಿ, ರಂಗ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನಗಳು ಬಸವಣ್ಣ-ಮಹಾವೀರ, ಮರಿಕಲ್ಲಪ್ಪ ಮಲಶೆಟ್ಟಿ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ರನ್ನನ ಸಾಹಸಭೀಮ ವಿಜಯ : ಪರಾಮರ್ಶೆ, ಫ. ಗು. ಹಳ್ಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ:9, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರಾಧಾನಾಟ, ಆತ್ಮ ಆವ ಕುಲ, ಸ್ಥಾವರವಲ್ಲದ ಬದುಕು, ಭರತ ಚಕ್ರಿಯ ದರ್ಶನ ಲೋಕ, ನಿಜ ಸುಖದ ನಿಲುವು ಮುಂತಾದ ಕೃತಿಗಳನ್ನು ...

READ MORE

Related Books