ಆಜೂ ಬಾಜು

Author : ನೇ.ಭ.ರಾಮಲಿಂಗ ಶೆಟ್ಟಿ

Pages 168

₹ 130.00




Year of Publication: 2017
Published by: ಸ್ನೇಹ ಪ್ರಕಾಶನ
Address: 10 ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು

Synopsys

ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯವಲಯದಲ್ಲಿ ಚಂಪಾ ಎಂದೇ ಜನಪ್ರಿಯರಾದವರು.ಸಮಾಜಿಕ ಹೋರಾಟಗಾರರಾಗಿ,ಕವಿ. ಬರಹಗಾರರಾಗಿ, ನಾಟಕಕಾರರಾಗಿ, ಅಂಕಣಕಾರರಾಗಿ ಪ್ರಸಿದ್ದಿಯನ್ನು ಪಡೆದರು.ಇವರ ಚಂಪಾದಕೀಯ, ಚಂಪಾಂಕಣ, ಚಂಪಾಕಾಲಂಗಳು ಬಲು ಪ್ರಸಿದ್ದ.ಸದಾ ಸಮಾಜಮುಖಿ ಹೋರಾಟಗಳನ್ನು ಸಂಘಟಿಸುತ್ತಾ ಸಾಗುತ್ತಿರುವ ಚಂಪಾ ಕನ್ನಡನಾಡಿನ ಪ್ರಸಿದ್ದ ಹೋರಾಟಗಾರರಲ್ಲಿ ಪ್ರಮುಖರು.ಈ ಪುಸ್ತಕದಲ್ಲಿ ಅನೇಕ ಲೇಖಕರು ಚಂಪಾರ ಜೀವನ ಶೈಲಿ,ಹೋರಾಟ,ವ್ಯಕ್ತತ್ವ ಕುರಿತು ಸಂಕ್ಷಪ್ತವಾದ ಲೇಖನಗಳ ಮೂಲಕ ವಿವರಿಸಲಾಗಿದೆ.

ಈ ಕೃತಿಯ ಪರಿವಿಡಿಯಲ್ಲಿ ಕನ್ನಡ ಕನ್ನಡ ಬರ್‍ರಿ ನಮ್ಮ ಸಂಗಡ-ಬಿ.ಎನ್.ರಮೇಶ , ಮೈಸೂರಿನಲ್ಲಿ ಐದನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ- ಅಂಶಿ ಪ್ರಸನ್ನಕುಮಾರ್, ಚಂಪಾ ಜನಪರ ಸಾಹಿತ್ಯ ಮತ್ತು ಜೀವಪರ ಚಳವಳಿಗಳ ಆತ್ಮೀಯ ಬೆಸುಗೆ- ನಟರಾಜು.ವಿ, ಹೋರಾಟದ ದನಿಯೊಂದಿಗೆ ನನ್ನ ಒಡನಾಟ-ನೇ.ಭ.ರಾಮಲಿಂಗಶೆಟ್ಟಿ, ಸಾಹಿತಿ ಆಕ್ಟಿವಿಸ್ಟ್ ಆಗಬೇಕು...- ಬಿ.ಎಂ.ಹನೀಫ್, ಹೋರಟಗಳ ಹರಿಕಾರ - ಕಮಲಾ ಹೆಮ್ಮಿಗೆ, ಹಿತಾಸಕ್ತಿ ರಕ್ಷಣೆಯಲ್ಲಿ ಜನಪ್ರತಿನಿಧಿಗಳ ವೈಫಲ್ಯ - ವಸುಂಧರಾ ಭೂಪತಿ,ಜನಪರ ಸಾಹಿತಿ- ಹೋರಾಟಗಾರ- ಆರ್.ಜಿ.ಹಳ್ಳಿ ನಾಗರಾಜ, ಚಂಪಾ: ಲೋಕಾಂತವೇ ಏಕಾಂತ - ಎಸ್.ಆರ್.ವಿಜಯಶಂಕರ, ಜನಪರ ಚಿಂತನೆಯ ಅಸಲೀ ಕವಿ: ಚಂಪಾ-ಪ್ರೊ.ಕಾಳೇಗೌಡ ನಾಗವಾರ, ಚಂಪಾರಣ್ಯದಲ್ಲೊಂದು ಇಣುಕು-ಸತೀಶ ಕುಲಕರ್ಣಿ, ಚಂಪಾ ಬಂಡಾಯ-ಆಂತರ್ಯದ ಅರಿವು-ವೀರಭದ್ರಪ್ಪ ಬಿಸ್ಲಳ್ಳಿ, ಚಂಪಾಗೆ ಚಂಪಾನೆ ಸಾಟಿ- ಜಿ.ಎನ್.ಮೋಹನ, ಚಂಪಾ: ಅದಮ್ಯ ಆಶಾವಾದಿ- ಡಾ.ರುದ್ರೇಶ ಬಿ ಅದರಂಗಿ, ಕನ್ನಡ ಭಾಷಾಕೋಸಂ ಮರೋಕಸಾರಿ ಪೋರಾಟಮೇ -ಹಿಂದೂಪೂರಂ-ರವಿ-ತೆಲುಗು ಆಂದ್ರ ಜ್ಯೋತಿ ಪತ್ರಿಕೆ ಸೇರಿದಂತೆ 29 ಶೀರ್ಷಿಕೆಗಳ ಲೇಖನಗಳು ಈ ಕೃತಿಯಲ್ಲಿವೆ. 

Related Books