ಶ್ರವಣಬೆಳಗೊಳ: ಒಂದು ಸಮೀಕ್ಷೆ

Author : ಜಿ.ಎಸ್. ಶಿವರುದ್ರಪ್ಪ

Pages 178

₹ 40.00




Year of Publication: 2004
Published by: ಪ್ರಸಾರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು- 560 056

Synopsys

ರಾಷ್ಟ್ರ ಕವಿ ಡಾ. ಜಿ.ಎಸ್.‌ ಶಿವರುದ್ರಪ್ಪ ಅವರ ಲೇಖನಗಳ ಸಂಕಲನ ʻಶ್ರವಣಬೆಳಗೊಳ: ಒಂದು ಸಮೀಕ್ಷೆʼ. ಶ್ರವಣ ಬೆಳಗೊಳ ಕರ್ನಾಟಕದ ಅತ್ಯಂತ ಪ್ರಾಚೀನವೂ, ಪ್ರಮುಖವೂ ಆದ ಒಂದು ಜೀವಂತ ಸಾಂಸ್ಕೃತಿಕ ಕೇಂದ್ರವಾಗಿದೆ. ಅದಕ್ಕಾಗಿ ಜೈನಧರ್ಮವು ಕೊಟ್ಟ ಕೊಡುಗೆ ಅಪಾರವಾದದ್ದು. ಇಂತಹ ಒಂದು ಸಾಂಸ್ಕೃತಿಕ ಕೇಂದ್ರವನ್ನು ಕುರಿತು 1981ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಇತಿಹಾಸ ವಿಭಾಗಗಳು ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿತವಾದ ಹನ್ನೊಂದು ಲೇಖನಗಳ ಸಂಗ್ರಹವಾಗಿದೆ ಪ್ರಸ್ತುತ ಕೃತಿ. ಎಂ.ಡಿ. ವಸಂತರಾಜ್ ಅವರ 'ಕರ್ನಾಟಕಕ್ಕೆ ಜೈನಧರ್ಮದ ಪ್ರವೇಶʼ, ಕೆ. ವೀರತಪ್ಪ ಅವರ ʻಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಶ್ರವಣಬೆಳ್ಗೊಳʼ, ಎಂ. ಚಿದಾನಂದ ಮೂರ್ತಿ ಅವರ ʻಶ್ರವಣಬೆಳ್ಗೊಳʼ: ಒಂದು ಸಾಂಸ್ಕೃತಿಕ ಕೇಂದ್ರವಾಗಿʼ, ಹೆಚ್.ವಿ. ಶ್ರೀನಿವಾಸ ಮೂರ್ತಿ ಅವರ ʻಕರ್ನಾಟಕದ ಕಲೆ ಮತ್ತು ಶಿಲ್ಪದಲ್ಲಿ ಬಾಹುಬಲಿʼ, ಎ. ಸುಂದರ ಅವರ ʻಶ್ರವಣಬೆಳಗೊಳದಲ್ಲಿ ಜೈನ ಬಸದಿಗಳು: ಒಂದು ಸಮೀಕ್ಷೆʼ, ಸೂರ್ಯನಾಥ ಕಾಮತ್ ಅವರ ʻಮಹಾಮಸ್ತಕಾಭಿಷೇಕ: ಐತಿಹಾಸಿಕ ಉಲ್ಲೇಖಗಳುʼ, ಬಿ.ವಿ. ಶಿರೂರ ಅವರ ʻಶ್ರವಣಬೆಳ್ಗೊಳಮತ್ತು ಕನ್ನಡ ಕವಿಗಳುʼ, ಜಿ.ಎಸ್.‌ ಶಿವರುದ್ರಪ್ಪ ಅವರ ʻಶ್ರವಣಬೆಳುಗೊಳದ ಕನ್ನಡ ಶಾಸನಗಳಲ್ಲಿ ಕಾವ್ಯಗುಣʼ, ಪಿ.ವಿ. ನಾರಾಯಣ ಅವರ ʻಕನ್ನಡ ಕಾವ್ಯ ಪರಂಪರೆಯಲ್ಲಿ ಬಾಹುಬಲಿʼ, ಟಿ.ಕೆ. ತುಕೋಲ ಅವರ ʻಶ್ರವಣಬೆಳಗೊಳ- ಗೊಮ್ಮಟೇಶ್ವರʼ ಹಾಗೂ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ʻನಾಮಾವಳಿಯಲ್ಲಿ 'ಗಂಧವಾರಣ' ಶಬ್ದ: ಒಂದು ಟಿಪ್ಪಣಿʼ ಲೇಖನಗಳು ಇಲ್ಲಿವೆ.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books