
ವಿ. ಕೃ. ಗೋಕಾಕರ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡಿದ ಬರಹಗಳು ಅಂದಿನ ಜೀವನ ಪತ್ರಿಕೆಯಲ್ಲಿ ಪ್ರಕಟವಾಗಿದ್ದವುಗಳು. ವ್ಯಕ್ತಿಚಿತ್ರ ಬರೆದಂತೆ ನಾಡಿನಮ ಪಟ್ಟಣಗಳ ಚಿತ್ರಣವನ್ನೂ ಕೊಡುವುದು ಸಾಧ್ಯವೆಂಬ ಆಲೊಚನೆಯಿಂದ ಮೂಡಿದ ಬರಹಗಳು. ಶಿವರಾಮ ಕಾರಂತ, ಸಿಂಪಿ ಲಿಂಗಣ್ಣ, ಮ.ಗ.ಶೆಟ್ಟಿ ಮೊದಲಾದವರು ಇಂಥ ಬರಹಗಳನ್ನು ಬರೆದರು. ಅವೆಲ್ಲವನ್ನು ಸಂಕಲಿಸಿ ಪ್ರಕಟಿಸುವ ಕೆಲಸ ಇಂದಿನ ಕರ್ನಾಟಕ ಮಾಲಿಕೆಯ ಪುಸ್ತಕಗಳಲ್ಲಿ ಆಗಿದೆ. ಗೋಕಾಕರ ಸಂಪಾದಕತ್ವದ ಈ ಕೃತಿ ಒಂದು ಮಹತ್ವದ ಆಕರದಂತಿದೆ.
©2025 Book Brahma Private Limited.