ಕನಕದಾಸ ವಿರಚಿತ ಹರಿಭಕ್ತಿಸಾರ

Author : ಎನ್. ರಂಗನಾಥಶರ್ಮಾ

Pages 56

₹ 110.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಕನಕದಾಸ ವಿರಚಿತ ಹರಿಭಕ್ತಿಸಾರ’ ಕೃತಿಯು ವಿದ್ವಾನ್ ಎನ್. ರಂಗನಾಥಶರ್ಮ ಅವರ ಕನಕದಾಸರ ಕುರಿತ ಲೇಖನಸಂಕಲನವಾಗಿದೆ. ಕರ್ನಾಟಕದ ಅನುಭಾವ ಪರಂಪರೆಯಲ್ಲಿ ಕನಕದಾಸರು ಮಹತ್ತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿದ್ವಾನ್ ಎನ್. ರಂಗನಾಥಶರ್ಮ ಅವರು ಪೂರಕವಾಗಿ ಗದ್ಯಾನುವಾದವನ್ನು ನೀಡಿರುವುದು ಬಹು ಉಪಯುಕ್ತವಾಗಿದೆ.

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books