ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ಬೆಳಗಾವಿ

Author : ವಿವಿಧ ಲೇಖಕರು

Pages 56

₹ 30.00




Year of Publication: 2022
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

`ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ಬೆಳಗಾವಿ’ ಕೃತಿಯು ಬಿ.ವಿ. ವಸಂತಕುಮಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ, ಮೃತ್ಯುಂಜಯ ರುಮಾಲೆ ಅವರ ಸಂಪಾದಕತ್ವದಲ್ಲಿ, ಪ್ರಕಾಶ ಗಿರಿಮಲ್ಲನವರ ರಚನೆಯಲ್ಲಿ ಮೂಡಿದೆ. ಸ್ವಾತಂತ್ರ್ಯ ಹೋರಾಟದ ರೂಪ-ಸ್ವರೂಪ, ಧ್ಯೇಯ ಧೋರಣೆಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದ್ದವು. ಮುಂಬೈ ಮತ್ತು ಮದ್ರಾಸ್ ಪ್ರದೇಶಗಳಲ್ಲಿ ಈ ಹೋರಾಟ ಆಂಗ್ಲರ ವಿರುದ್ಧವಿದ್ದರೆ, ಮೈಸೂರು ಭಾಗದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ ಮತ್ತು ಪರೋಕ್ಷವಾಗಿ ಭಾರತ ಸ್ವಾತಂತ್ರ್ಯಕ್ಕಾಗಿದ್ದಿತು. ಕಲಬುರ್ಗಿ-ಬೀದರ ಪ್ರದೇಶಗಳಲ್ಲಿ ಹೈದರಾಬಾದ ನಿಜಾಮರ ಸಂಸ್ಥಾನದ ರಜಾಕಾರರ ದಬ್ಬಾಳಿಕೆಯ ವಿರುದ್ಧ ನಡೆದ ಹೋರಾಟವಾಗಿತ್ತು. ರಾಮದುರ್ಗ-ಜಮಖಂಡಿ ಮೊದಲಾದ ಸಂಸ್ಥಾನ ರಾಜ್ಯಗಳಲ್ಲಿ ಸರ್ಕಾರದ ಸ್ಥಾಪನೆ ಮತ್ತು ಭಾರತದ ಒಕ್ಕೂಟದಲ್ಲಿ ಈ ಸಂಸ್ಥಾನಗಳ ವಿಲೀನಿಕರಣದ ಉದ್ದೇಶ ಹೊಂದಿದ್ದಿತು. ಈ ಎಲ್ಲ ಬಗೆಯ ಜನಪರ ಹೋರಾಟಗಳಲ್ಲಿ ಸಮಸ್ತ ಕನ್ನಡಿಗರು ಸಕ್ರಿಯವಾಗಿ ಪಾಲುಗೊಂಡರು. ಸ್ವತಂತ್ರ ಸಂಯುಕ್ತ ಪ್ರಜಾಪ್ರಭುತ್ವ ಮತ್ತು ಧರ್ಮನಿರಪೇಕ್ಷ ಗಣರಾಜ್ಯ ಸ್ಥಾಪನೆ ಮೊದಲಾದ ಗುರಿಗಳ ಸಾಫಲ್ಯತೆಗಾಗಿ ಕನ್ನಡಿಗರು ಕ್ರಿಯಾತ್ಮಕವಾಗಿ ಭಾಗವಹಿಸಿದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪ್ರದೇಶದ ಪ್ರಮುಖ ಹೋರಾಟ ಕೇಂದ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಿರು ಕೃತಿಯನ್ನು ರಚಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books