ರಾಜಧಾನಿಯಲ್ಲಿಷ್ಟೇ ಅಲ್ಲ, ಇಡೀ ದೇಶವೇ ಸಂತೋಷ ಪಡುತ್ತಿದೆ ೨ ಮಹೋತ್ಸವದ ಘಟನೆಗಳಿಂದ. ಆದರೆ ರಾಷ್ಟ್ರಕೂಟ ರಾಜ್ಯಕ್ಕೆ ವೆಂಗವಳ್ಳಿಯ ವಿಜಯ ಹಾಗು ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು. ಜಿನಸೇನಾಚಾರ್ಯರ ಶಿಷ್ಯರಾದ ನೃಪತುಂಗ ಚಕ್ರವರ್ತಿಗಳು ಅಹಿಂಸೆ ಗರ್ವಶ್ರೇಷ್ಠವಾದ ಧರ್ಮ ಎಂಬ ಸಿದ್ಧಾಂತದ ಮೇಲೆ ರಾಜ್ಯವನ್ನಾಳುತ್ತಿದ್ದರು. ತಾವಾಗಿ ಯುದ್ಧಕ್ಕೆ, ರಕ್ತಪಾತಕ್ಕೆ ಹಾತೊರೆಯಬಾರದು, ಆದರೆ ಪ್ರಜಾಪಾಲನೆಗೆ ಅಗತ್ಯವಾದಾಗ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ, ಆದ್ದರಿಂದ ಶತ್ರುವನ್ನಾಗಲಿ, ದುಷ್ಟಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ, ಚಕ್ರವರ್ತಿ ಪದವಿಯಿಂದ ಅಖಂಡ ಪ್ರಜಾಕೋಟಿಗಾಗಿ ಸಮಯ ಬಂದಾಗ ತಮ್ಮ ಪ್ರಾಣವನ್ನೂ ಕೊಡಲು ಸಿದ್ಧವಾಗಿ ಪ್ರಜಾಪಾಲನೆ ಮಾಡುತ್ತಿದ್ದರು. (ಆಯ್ದಭಾಗ)
©2025 Book Brahma Private Limited.