
ಆಲೂರು ವೆಂಕಟರಾಯರ ‘ಕರ್ನಾಟಕತ್ವದ ವಿಕಾಸ’ ಕನಾಟಕ ಏಕೀಕರಣದ ಸಾಂಸ್ಕೃತಿಕ ಸಂಕಥನ. ಅವರ ಅನುಭವಗಳ ಜೊತೆಗೆ ಚಾರಿತ್ರಿಕ ಸಂಗತಿಗಳನ್ನು ದಾಖಲಿಸಿರುವ ಇದು ಅನೇಕ ಮಹತ್ವದ ಸಾಂಸ್ಕೃತಿಕ ಸಂಗತಿಗಳನ್ನು ಒಳಗೊಂಡಿದೆ. ಏಕೀಕರಣದ ಸಂದರ್ಭದಲ್ಲಿ ಹೊರಬಂದಿದ್ದ ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮತ್ತೊಮ್ಮೆ ಬಿಡುಗಡೆಗೊಂಡಿದೆ. ಕರ್ನಾಟಕತ್ವದ ಕಲ್ಪನೆಯ ಉಗಮ ಮತ್ತು ವಿಕಾಸಗಳು ನನ್ನಲ್ಲಿ ಹೇಗೆ ಉಂಟಾಗುತ್ತ ಹೋದವು ಎಂಬುದನ್ನು ಇಲ್ಲಿ ಲೇಖಕರಉ ವಿವರಿಸುತ್ತಾ ಹೋಗಿದ್ದಾರೆ. ಆನುಷಂಗಿಕವಾಗಿ ಲೇಖಕರೊಂದಿಗೆ ಕಾರ್ಯಮಾಡಿದ ಕೆಲವರ ಚಟುವಟಿಕೆಗಳೂ, ಆಗಿನ ಕಾಲದ ಕರ್ನಾಟಕತ್ವದ ಪ್ರಚಾರಕ್ಕಾಗಿ ಹುಟ್ಟಿದ ಸಂಸ್ಥೆಗಳ ಇತಿಹಾಸವೂ ಇಲ್ಲಿ ಬಂದಿದೆ.
©2025 Book Brahma Private Limited.