ಶಾಸನ ಪದ್ಯ ಮಂಜರಿ

Author : ಆರ್. ನರಸಿಂಹಾಚಾರ್

Pages 302

₹ 2.00




Year of Publication: 1923
Published by: ರಾ. ನರಸಿಂಹಾಚಾರ್ಯ
Address: ಬೆಂಗಳೂರು

Synopsys

ಕನ್ನಡ ನಾಡಿನ ಬಹುತೇಕ ಕವಿಗಳ ಹೆಸರು, ಅವರ ಸಾಹಿತ್ಯದ ಹಿರಿಮೆ ಕುರಿತು ಶಾಸನಗಳಲ್ಲಿ ಉಲ್ಲೇಖವಾಗಿದ್ದು, ಅಂತಹ ಶಾಸನಗಳ ಪಠ್ಯವನ್ನು ಲೇಖಕ ಆರ್. ನರಸಿಂಹಾಚಾರ್ಯರು ಸರಳ ಕನ್ನಡಕ್ಕೆ ಅನುವಾದಿಸಿದ ಬೃಹತ್ ಕೃತಿ ಇದು. ಕನ್ನಡ ನಾಡಿನ ಯಾವ ಪ್ರದೇಶದ ಕವಿ ಎಂದು ತಿಳಿಯದಿದ್ದರೂ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಅವರ ಹೆಸರನ್ನು ಆಧರಿಸಿಯೂ ಪಠ್ಯವನ್ನು ತಯಾರಿಸಿದೆ. ಕವಿ. ಕವಿತೆಯ ಶೈಲಿ ಹಾಗೂ ರಸದ ಸ್ವಾದವನ್ನು ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ.

‘ಕೃತಿಯ ರಚನೆಗೆ ಬಳಸಿದ ಶಾಸನಗಳ ಸಂಖ್ಯೆ-283. ಈ ಪೈಕಿ ಬಾಂಬೆ ಕರ್ಣಾಟಕಕ್ಕೆ 24 ಶಾಸನಗಳು ಸೇರಿವೆ. ಉಳಿದವು ಮೈಸೂರು ಪ್ರಾಂತ್ಯದಲ್ಲಿವೆ. ಒಟ್ಟು ಶಾಸನಗಳಿರುವ ಪ್ರದೇಶಗಳು-56. ಆ ಪೈಕಿ ಮೈಸೂರು ಸಂಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ-36 ಮತ್ತು ಬಾಂಬೆ ಪ್ರಾಂತ್ಯದಲ್ಲಿ -20 ಪ್ರದೇಶಗಳು. ಶಾಸನಗಳಲ್ಲಿರುವ ಕವಿತಾ ಶೈಲಿಯೇ ಪಠ್ಯ ಅನುವಾದ ಆಯ್ಕೆ ಕಾರಣವಲ್ಲ; ಬದಲಾಗಿ, ಆಗಿನ ಸಾಮಾಜಿಕ-ರಾಜಕೀಯ ಸನ್ನಿವೇಶಗಳನ್ನು ಸಹ ಪರಿಗಣಿಸಲಾಗಿದೆ. ಪ್ರಜೆಗಳ ಶೌರ್ಯ, ಉದಾತ್ತತೆ, ದೈವಭಕ್ತಿ, ದೇಶವಾತ್ಸಲ್ಯಗಳನ್ನು ಶಾಸನಗಳಲ್ಲಿ ಮುಕ್ತವಾಗಿ ಪ್ರಶಂಸಿಸಲ್ಪಟ್ಟಿವೆ. ಶಾಸನಗಳ ಕ್ಲಿಷ್ಟಪದಗಳಿಗೆ ಸರಳ ಅರ್ಥ ವಿವರಣೆಯನ್ನೂ ಅನುವಾದಿಸಿ ನೀಡಿದ್ದು, ಈ ಕೃತಿಯು ಕರ್ಣಾಟಕದ ಕವಿ ಚರಿತೆ ಮಾತ್ರವಲ್ಲ; ಕಾವ್ಯತ್ವದ ರಸಸ್ವಾದವನ್ನೂ ಉಣಬಡಿಸುವಂತಿದೆ.

About the Author

ಆರ್. ನರಸಿಂಹಾಚಾರ್
(08 April 1860 - 06 December 1936)

ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...

READ MORE

Related Books