ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ

Author : ಶ್ರೀ ಪಡ್ರೆ

Pages 108

₹ 150.00




Year of Publication: 2016
Published by: ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್
Address: 113, 2ನೇ ಮಹಡಿ, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಪಿಳ್ಳಪ್ಪ ಬ್ಲಾಕ್, ಗಂಗಾನಗರ, ಅಂಚೆ: ಆರ್.ಟಿ. ನಗರ, ಬೆಂಗಳೂರು 560032
Phone: 9483757707

Synopsys

ಹಿರಿಯ ಪತ್ರಕರ್ತ, ‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆ ಅವರು ಹಲಸು ಭವಿಷ್ಯದ ಬೆಳೆ ಎಂದು ಘಂಟಾಘೋಷವಾಗಿ ಹೇಳುತ್ತ, ಇದಕ್ಕೆ ಪುರಾವೆ ಎಂಬಂತೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮಾತ್ರವಲ್ಲ, ದೇಶದ ಉದ್ದಗಲ, ಜಗತ್ತಿನ ಮೂಲೆಮೂಲೆಯಿಂದ ದೃಷ್ಟಾಂತಗಳನ್ನು ಹೆಕ್ಕಿತೆಗೆದು, ತಮ್ಮ ಲೇಖನಗಳ ಮೂಲಕ ಸಾದರಪಡಿಸುತ್ತ ಬಂದಿದ್ದಾರೆ.

ಹಲಸಿನ ಮಾನವರ್ಧನೆಯನ್ನು ಸ್ವಯಂ ಸವಾಲಿನಂತೆ ಸ್ವೀಕರಿಸಿರುವ ಅವರು, ಈ ಉದ್ದೇಶ ಸಾಧನೆಗಾಗಿ ಮಾಡದ ಕೆಲಸವಿಲ್ಲ. ಆಸಕ್ತರಿಗೆ ಮಾಹಿತಿ, ಬೆಳೆಯುವವರಿಗೆ ಪ್ರೋತ್ಸಾಹ, ಅನುಶೋಧಕರಿಗೆ ಉತ್ತೇಜನ, ಉದ್ಯಮಿಗಳಿಗೆ ಬೆಂಬಲ, ವಿಜ್ಞಾನಿ-ತಜ್ಞರಿಗೆ ಕ್ಷೇತ್ರಮಟ್ಟದ ವಿವರ, ಸಂಸ್ಥೆ-ಸಂಘಟನೆಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

"ಕಳೆದುಕೊಂಡ ಹಲಸಿನ ಅತಿ ವಿಶೇಷ ತಳಿಗಳ ಬಗ್ಗೆ ಚಿಂತಿಸುವ ಬದಲು ಇರುವುದರಲ್ಲಿ ಶ್ರೇಷ್ಠವಾದದ್ದರ ಆಯ್ಕೆ ಈಗಿನ ಅಗತ್ಯ" ಎನ್ನುವ ಶ್ರೀ ಪಡ್ರೆ,  "ನಮ್ಮ ಮನೆ, ಸಭೆ-ಸಮಾರಂಭ, ವಿವಾಹ, ಹೊಟೇಲು ಎಲ್ಲೆಡೆ ಹಲಸಿನ ಬಳಕೆ ಹೆಚ್ಚಬೇಕು" ಎನ್ನುತ್ತಾರೆ. ಹಲಸು ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳ ಮೇಲೆ ಈ ಪುಸ್ತಕದಲ್ಲಿ ಅವರು ಬೆಳಕು ಚೆಲ್ಲಿದ್ದಾರೆ. ಆಕರ್ಷಕ ವರ್ಣಚಿತ್ರಗಳನ್ನೂ ಪುಸ್ತಕ ಒಳಗೊಂಡಿದೆ. ಪುಸ್ತಕದ ಬೆನ್ನುಡಿಯಲ್ಲಿ ಹಿರಿಯ ಲೇಖಕ ಡಾ. ನರೇಂದ್ರ ರೈ ಹೇಳುತ್ತಾರೆ: "ಸಾಮಾನ್ಯ ಹಣ್ಣೊಂದನ್ನು ಜಾಗತಿಕ ಮನ್ನಣೆಗೆ ತರುವುದು ಸಾಮಾನ್ಯ ವಿಷಯವಲ್ಲ. ಬರಹಗಾರನಿಗೆ ವಿಷಯ ಸಂಬಂಧಿ ನೈತಿಕ ವಾರಸುದಾರಿಕೆ ಇದ್ದಾಗ ಬರವಣಿಗೆಯೇ ಚಳವಳಿಯಾಗುತ್ತದೆ. ಪಡ್ರೆಯವರ ಆಲೋಚನೆ ಪತ್ರಿಕೆಯ ಪುಟ ಮೀರುವುದು ಅವರೊಳಗಡೆಯ ಮಾನಸಿಕ ಪಠ್ಯದೊಳಗೆ. ಕಾಲಬುಡದ ಕಸವನ್ನು ತಲೆ-ಹೆಗಲಿಗೇರಿಸಿ ಗೆಲ್ಲುವ ದಾರಿಯಲ್ಲಿ ಅವರು ಮುಕ್ಕಾಲು ದೂರ ಬಂದಿದ್ದಾರೆ. ಫಲಿತಾಂಶದ ನೂಲು ಮುಟ್ಟೇ ಮುಟ್ಟುತ್ತಾರೆ ಎಂಬ ನಂಬಿಕೆ ನನ್ನದು."

About the Author

ಶ್ರೀ ಪಡ್ರೆ

ಕರ್ನಾಟಕದ ಗಡಿಗೆ ತಾಗಿಕೊಂಡಿರುವ ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು, ಕೃಷಿಕರು. ಹಿರಿಯ ಅಭಿವೃದ್ಧಿ ಪತ್ರಕರ್ತರು. ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು. ದೆಹಲಿಯ ‘ಸಿವಿಲ್ ಸೊಸೈಟಿ’ ಇಂಗ್ಲಿಷ್ ನಿಯತಕಾಲಿಕದ ಪ್ರಮುಖ ಬರಹಗಾರರು. ಕೃಷಿ-ಗ್ರಾಮೀಣ ರಂಗದ ನಾನಾ ಅಗೋಚರ ವಿದ್ಯಮಾನಗಳನ್ನು, ನವನವೀನ ಸಂಗತಿಗಳನ್ನು ಬಹುಬೇಗನೆ ಸಲೀಸಾಗಿ, ಸೂಕ್ಷ್ಮವಾಗಿ ಗ್ರಹಿಸುವ, ಆಳಕ್ಕಿಳಿದು ಅಧ್ಯಯನ ಮಾಡುವ ಮತ್ತು ಲೇಖನ-ನುಡಿಚಿತ್ರಗಳ ಮೂಲಕ ಅಚ್ಚುಕಟ್ಟಾಗಿ ಸಾದರಪಡಿಸುವ ಮನಸ್ಸು. ರೈತಹಿತವಷ್ಟೇ ಬರವಣಿಗೆಯ ಆಶಯ. ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ...

READ MORE

Related Books