ಬಿತ್ತೋಣ ಹತ್ತಿ ಬೆಳೆಯೋಣ

Author : ಚನ್ನಪ್ಪ ಅಂಗಡಿ

Pages 144

₹ 0.00




Year of Publication: 2009
Published by: ಜಂಟಿ ಕೃಷಿ ನಿರ್ದೇಶಕರು
Address: ಕೃಷಿ ಇಲಾಖೆ, ಧಾರವಾಡ-8
Phone: 0836-2436518

Synopsys

‘ಬಿತ್ತೋಣ ಹತ್ತಿ ಬೆಳೆಯೋಣ’ ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ ಬಾನುಲಿ ಕೃಷಿ ಪಾಠಗಳ ಸಂಗ್ರಹ. ಹತ್ತಿಯಲ್ಲಿ ಸಮಗ್ರ ಕೃಷಿ ಪದ್ಧತಿಯು ಬಾನುಲಿ ಪಾಠದ ಉದ್ದೇಶ ಹಾಗೂ ರೂಪುರೇಷೆಗಳು, 2009-10ನೇ ಸಾಲಿನ ಹತ್ತಿ ಯೋಜನೆಗಳು ಹಾಗೂ ಸೌಲಭ್ಯಗಳು, ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಸುಧಾರಣೆ, ಹತ್ತಿಯಲ್ಲಿ ಸಮಗ್ರ ಪೀಡೆ ನಿರ್ವಹಣೆ, ಎರೆಗೊಬ್ಬರ ತಯಾರಿಕೆ ಹಾಗೂ ಅಜೋಲಾ ಕೃಷಿ, ಹತ್ತಿ ಪರಿಸರ ವಿಶ್ಲೇಷಣೆ: ಮಿತ್ರ ಕೀಟಗಳು ಮತ್ತು ಶತ್ರುಕೀಟಗಳು, ನೀರಾವರಿ ಪದ್ಧತಿಗಳು: ಹತ್ತಿ ಬೆಳೆಯಲ್ಲಿ ನೀರು ನಿರ್ವಹಣೆ, ಲಘು ಪೋಷಕಾಂಶಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಹೊದಿಕೆ ಅಳವಡಿಕೆ, ಸಸ್ಯಜನ್ಮ ಕೀಟನಾಶಕಗಳ ತಯಾರಿಕೆ ಹಾಗೂ ಬಳಕೆ, ಹತ್ತಿ ಬೆಳೆಯಲ್ಲಿ ಸಂರಕ್ಷಣ ಕ್ರಮಗಳು, ಪೂರಕ ಕಸುಬಾಗಿ ಪಶುಸಂಗೋಪನೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಹಲವಾರು ಮಹತ್ವದ ಲೇಖನಗಳು ಸಂಕಲನಗೊಂಡಿವೆ.

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books