ಅಂತರ್ಜಲ ಬಳಕೆ

Author : ಎ.ಎಸ್. ಕುಮಾರಸ್ವಾಮಿ

Pages 346

₹ 350.00




Year of Publication: 2016
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ

Synopsys

ನೀರಿನ ಪ್ರಮುಖ ಮೂಲಗಳಲ್ಲಿ ಅಂತರ್ಜಲವು ಒಂದು. ಮಾನವನ ದುರಾಸೆಗೆ ಅಂತರ್ಜಲವು ಬತ್ತಿಹೋಗುತ್ತಿದೆ. ಸಾವಿರಾರು ಅಡಿಗಳಷ್ಟು ಆಳಕ್ಕೆ ಹೋದರೂ ನೀರು ಸಿಗದ ಪರಿಸ್ಥಿತಿ ಎಲ್ಲೆಡೆ ಮಾರ್ಪಟ್ಟಿದೆ. ಈ ಕೃತಿಯು ಸಮೃದ್ಧ ಜಲ ಸಂಪನ್ಮೂಲದ ಮಾಹಿತಿ ನೀಡುತ್ತದೆ. ಆದರೂ ಅಭಾವ, ಕೃಷಿಯಲ್ಲಿ ಅಂತರ್ಜಲ ಬಳಕೆಯ ಮಹತ್ವ, ಅಂತರ್ಜಲದ ಸ್ವರೂಪ, ಅಂತರ್ಜಲ ಶೋಧ, ನೀರಿನ ಅಳತೆ, ಕೊಳವೆ ಬಾವಿ ಕೊರೆಸಿ ಬಳಕೆಯಲ್ಲಿ ತರುವುದು, ಅಂತರ್ಜಲದ ಬೆಲೆ, ಸೂಕ್ತ ಪಂಪ್‌ ಮತ್ತು ಮೋಟಾರ್‌ ಆಯ್ಕೆ, ಶಕ್ತಿಯ ಮಿತಬಳಕೆ ಮರು ಸೌರಶಕ್ತಿಯ ಬಳಕೆ, ಅಂತರ್ಜಲ ಸಾಗಾಣಿಕೆಗೆ ಕೊಳವೆ ಮಾರ್ಗ, ನೀರು ಮತ್ತು ಮಣ್ಣಿನ ಗುಣಮಟ್ಟದ ಪರಿಗಣನೆ, ಕೊಳವೆ ಬಾವಿ ನೀರಾವರಿ ವ್ಯವಸ್ಥೆಯ ವಿನ್ಯಾಸ, ಅಂತರ್ಜಲ ಬಳಕೆಗೆ ವಿವಿಧ ನೀರಾವರಿ ವಿಧಾನಗಳು, ಅಂತರ್ಜಲ ಬಳಕೆಯಲ್ಲಿನ ಸಮಸ್ಯೆಗಳು ಮರು ಪರಿಹಾರೋಪಾಯಗಳು, ಮಣ್ಣು, ನೀರು, ಸಸ್ಯ, ವಾತಾವರಣಗಳ ಮಧ್ಯದ ಮೂಲಭೂತ ಸಂಬಂಧಗಳು, ಬೆಳೆಗಳ ನೀರಾವರಿ ನೀರಿನ ಬೇಡಿಕೆ, ಅತಿ ನೀರಾವರಿಯ ಆಪತ್ತುಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸುತ್ತದೆ.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books