ಒಂದು ಹುಲ್ಲಿನ ಕ್ರಾಂತಿ

Author : ಸಂತೋಷ ಕೌಲಗಿ

Pages 146

₹ 150.00

Buy Now


Year of Publication: 2013
Published by: ಜನಪದ ಸೇವಾ ಟ್ರಸ್ಟ್ ಪ್ರಕಾಶನ

Synopsys

The One Straw Revolution ಮೊದಲು ಪ್ರಕಟವಾದದ್ದು 1975ರಲ್ಲಿ, ನಂತರ ಫುಕುವೊಕಾ ಪ್ರಣೀತ ಸಹಜ ಕೃಷಿ ಪದ್ಧತಿ - ಪ್ರಾಕೃತಿಕ ವ್ಯವಸಾಯ ಜಪಾನ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಯಿತು. 1989ರಲ್ಲಿ ಇದರ ಕನ್ನಡ ಅನುವಾದ ಪ್ರಕಟಗೊಂಡು ಕೆಲ ತಿಂಗಳುಗಳಲ್ಲೇ ಪ್ರತಿಗಳೆಲ್ಲ ಖರ್ಚಾಗಿ ಮತ್ತು 1989ರಲ್ಲೇ ಎರಡನೆಯ ಮುದ್ರಣ ಕಂಡಿತ್ತು. ಸಂತೋಷ ಕೌಲಗಿಯವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಅಚ್ಚುಕಟ್ಟಾದ ಮುನ್ನುಡಿ ಬರೆದಿರುವ ನಾಗೇಶ ಹೆಗಡೆ ಹೇಳುತ್ತಾರೆ: 'ಬೇಸಾಯಗಾರನ ಯಾಂತ್ರೀಕರಣ ಹಾಗೂ ವ್ಯವಸಾಯದ ವ್ಯಾಪಾರೀಕರಣದಿಂದಾಗಿ ಹುಟ್ಟಿದ ಅನಿಷ್ಟಗಳ ಬಗ್ಗೆ ಕೃಷಿ ಋಷಿ ಫುಕುವೊಕಾ ಚಿಂತನೆ ನಡೆಸುತ್ತಾರೆ. ಆದ್ದರಿಂದ ಈ 'ಒಂದು ಹುಲ್ಲಿನ ಕ್ರಾಂತಿ' ಕೇವಲ ಕೃಷಿಕರ ಕೈಪಿಡಿಯಾಗಿರದೆ ಎಲ್ಲ ಜನರನ್ನೂ ತಟ್ಟಬಲ್ಲ ವಿಚಾರಧಾರೆಯಾಗಿರುತ್ತದೆ. ನಿಸರ್ಗಕ್ಕೆ ಕಡಿವಾಣ ಹಾಕಿ ಕೃಷಿಕರ ಸ್ವಾತಂತ್ರಕ್ಕೂ ಕಡಿವಾಣ ಬಿದ್ದ ಮೇಲೆ, ಬಳಕೆದಾರನ ಇಷ್ಟಾನಿಷ್ಟಗಳಿಗೂ ಕಟ್ಟುಪಾಡುಗಳು ಬಂದು ಆತ ತನ್ನ ಆರೋಗ್ಯವನ್ನು ಒತ್ತೆಯಿಡಬೇಕಾದ ಸಾರ್ವತ್ರಿಕ ದುರಂತದ ಬಗ್ಗೆ ಈ ಕೃತಿಯಲ್ಲಿ ವಿವರಿಸಲಾಗಿದೆ'.

About the Author

ಸಂತೋಷ ಕೌಲಗಿ

.ಸಂತೋಷ ಕೌಲಗಿ ಅವರು ಲೇಖಕರು ಕೃತಿಗಳು: ಒಂದು ಹುಲ್ಲಿನ ಕ್ರಾಂತಿ (ಸಹಜ ಕೃಷಿ: ಒಂದು ಪರಿಚಯ)  ...

READ MORE

Related Books