ಮಣ್ಣು ಕಥನ

Author : ಕೃಷ್ಣಮೂರ್ತಿ ಬಿಳಿಗೆರೆ

Pages 176

₹ 200.00




Year of Publication: 2022
Published by: ನಮ್ಮ ಪ್ರಕಾಶನ
Address: ಬಿಳಿಗೆರೆ, ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ

Synopsys

ಮಾಸ್ತರರಾಗಿ, ರೈತರಾಗಿ, ಹಳ್ಳಿಗರಾಗಿ ಬದುಕು ಕಟ್ಟಿಕೊಂಡಿರುವ ಲೇಖಕ ಕೃಷ್ಣಮೂರ್ತಿ, ಸಾಹಿತ್ಯದ ವಲಯದಲ್ಲಿ ಕೃಷಿಯ ಕಂಪು ಹರಡಿದವರು. ಹಾಗಾಗಿ ಇಲ್ಲಿನ ಬರಹಗಳು ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡುತ್ತಿದ್ದು, ಹಳ್ಳಿ ಕಟ್ಟುವ ಕನಸು ಕಾಣುವವರೆಲ್ಲಾ ಓದಲೇಬೇಕಾದ ಪುಸ್ತಕವಿದು. 

 ಇಲ್ಲಿನ ವಿಷಯಗಳು ನೀರಿನಿಂದ ಶುರುವಾಗಿ ಮಣ್ಣು, ಮಳೆಹಬ್ಬ, ಹಸಿರುಬೇಲಿ, ಶೂನ್ಯವೆಚ್ಚದ ಬೇಸಾಯದವರೆಗೂ ಚಾಚಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಬೃಹದಾಕಾರದ ಸಮಸ್ಯೆಯನ್ನು ತಂದೊಡ್ಡಿರುವ ನೀರಿನ ಕೊರತೆಯ ನಾನಾ ಮಗ್ಗಲುಗಳನ್ನು ಬಿಳಿಗೆರೆಯವರು ಸರಳ ಭಾಷೆಯಲ್ಲಿ ಅನಾವರಣ ಮಾಡುತ್ತಾರೆ. 

 ಪುಸ್ತಕದ ಪರಿವಿಡಿಯಲ್ಲಿ ಮಳೆಯ ಹಬ್ಬಕೆ ನೀರೆ ಔತಣ, ನೀರಿನ ಅನ್ಯಾಯದ ಹಾದಿಗಳು, ಕಾವೇರಿಯ ಸಾವಿಗೆ, ನೀರ ಸಂಕಷ್ಟದ ಹೆಜ್ಜೆಗಳು, ನೀರು ಕಾವೇರಿಯಲ್ಲಷ್ಟೆ ಇಲ್ಲ, ತಳದ ನೀರಿನ ತಾಣ ತಲಪರಿಗೆ, ನಗರವಾಸಿಗರಿಗೊಂದು ನೀರ ಪತ್ರ, ರೈತರದು ಆತ್ಮಹತ್ಯೆಯಲ್ಲ ಹತ್ಯೆ, ಗಣಿಗಾರಿಕೆ ತಂದಿಟ್ಟ ಆಪತ್ತುಗಳ ಚರಿತ್ರೆ, ಕಕ್ಕಸನಿಂದ ಮುಚ್ಚಿಹೋಗುತ್ತಿರುವ, ನಿಜ ಶ್ರೀಮಂತಿಕೆಯ ಮಾನದಂಡಗಳು, ಉಳುಮೆಯಿಲ್ಲದ ಬಹುಬೆಳೆಗಳ ತೋಟಗಳು ಸೇರಿ 36 ಶೀರ್ಷಿಕೆಗಳ ಲೇಖನಗಳಿವೆ.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Excerpt / E-Books

ಪುಸ್ಯಕದ ಬೆನ್ನುಡಿಯಲ್ಲಿ ವಿವಿಧ ಲೇಖಕರು ಬರೆದ ಸಾಲುಗಳು...


ಎರಡೂವರೆ ದಶಕಗಳಿಂದ ಕೃಷ್ಣಮೂರ್ತಿ ಬಿಳಿಗೆರೆಯೊಂದಿಗೆ ನನ್ನ ಒಡನಾಟವಿದೆ. ಬೀಜ ಯಾತ್ರೆಯಲ್ಲಿ, ಸಿರಿಸಮೃದ್ಧಿ ಸಭೆಗಳಲ್ಲಿ, ತೋಟದ ಓಡಾಟಗಳಲ್ಲಿ, ಹಾಡುಗಾರಿಕೆಯಲ್ಲಿ ಜತೆಗಿದ್ದೇವೆ. ಎಳೆತಲೆಮಾರುಗಳಿಗೆ ಪಾಠ, ಕೃಷಿ ಮತ್ತು ಸಾಹಿತ್ಯವನ್ನು ಒಂದುಗೂಡಿಸಿ ಕೊಂಡೊಯ್ಯುವ ಅವರ ಕಿಯಾಶೀಲತೆ, ಲವಲವಿಕೆ ಹಾಗೂ ಬದುಕಿನ ಪ್ರೀತಿ ನನಗೆ ಅಚ್ಚು-ಮೆಚ್ಚು. ನನಗೆ ಒಂದು ಸಮಗ್ರತೋಟ ಸುತ್ತಾಡಿದ ಅನುಭವ ಕೊಟ್ಟ ಈ ಪುಸ್ತಕವು ನಿಮಗೂ ಹಾಗೇ ಅನ್ನಿಸುವುದರಲ್ಲಿ ಸಂಶಯವಿಲ್ಲ. ಕನ್ನಡ ಕೃಷಿ ಸಾಹಿತ್ಯಕ್ಕೆ ಒಂದು ಅನನ್ಯ ಕೊಡುಗೆ ಇದು.
ಮಲ್ಲಿಕಾರ್ಜುನ ಹೊಸಪಾಳ್ಯ


ಇಂತಿಪ್ಪ ವೃತ್ತಾಂತದ ಬಿಳಿಗೆರೆ ಮೇಷ್ಟ್ರು, ಬೇಸಾಯದ ಕಥೆಯನ್ನು ವಿವರವಾಗಿ ಹೇಳುವ ಹೊಸ, ಕಥನವನ್ನು ಓದುಗರ ಕೈಗೆ ಕೊಟ್ಟಿದ್ದಾರೆ. ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳಿಗೆ ಹೋಲಿಸಿದರೆ, ಇದು ಸಮಗ್ರ ಕೃತಿ ಎನ್ನಬಹುದೇನೋ? ಇಲ್ಲಿನ ವಿಷಯಗಳು ನೀರಿನಿಂದ ಶುರುವಾಗಿ ಮಣ್ಣು, ಮಳೆಹಬ್ಬ, ಹಸಿರು ಬೇಲಿ, ಶೂನ್ಯವೆಚ್ಚದ ಬೇಸಾಯದವರೆಗೂ ರೆಂಬೆ ಚಾಚಿವೆ. ಬರೀ ವಿಷಯಗಳಷ್ಟೇ ಅಲ್ಲದೇ, ಅನಿಲ್ ಅಗರವಾಲ್ ಹಾಗೂ ರಾಜೇಂದ್ರ ಸಿಂಗ್‌ ಅವರಂಥ ಸಾಧಕರ ಪಥವನ್ನು ತೆರೆದಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಬೃಹದಾಕಾರದ ಸಮಸ್ಯೆಯನ್ನು ತಂದೊಡ್ಡಿರುವ ನೀರಿನ ಕೊರತೆಯ ನಾನಾ ಮಗ್ಗಲುಗಳನ್ನು ಬಿಳಿಗೆರೆಯವರು ಸರಳ ಭಾಷೆಯಲ್ಲಿ ಅನಾವರಣ ಮಾಡುತ್ತಾರೆ.
- ಆನಂದತೀರ್ಥ ಪ್ಯಾಟಿ
 

Related Books