ಪರಿಸರ ಸ್ನೇಹಿ ಕೃಷಿ-ಕ್ಯೂಬಾ ಮಾದರಿ

Author : ಜೈಕುಮಾರ್

Pages 60

₹ 20.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಕ್ಯೂಬಾ ಕ್ರಾಂತಿಯ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಪ್ರಕಟಗೊಂಡ ಪುಸ್ತಕ . ಇಂದಿನ ಕೈಗಾರಿಕಾ ಕೃಷಿ ವಿಧಾನಕ್ಕೆ ಪರ್ಯಾಯವಾಗಿ ಕ್ಯೂಬಾ ರೂಪಿಸಿದ ಪರಿಸರ ಸ್ನೇಹಿ ಕೃಷಿ ಪದ್ದತಿಯ ಯಶೋಗಾಥೆಯನ್ನು ಸ್ಥೂಲವಾಗಿ ಜನತೆಯ ಮುಂದಿಡುತ್ತದೆ ಈ ಪುಸ್ತಕ .

Reviews

(ಹೊಸತು, ಫೆಬ್ರವರಿ 2015, ಪುಸ್ತಕದ ಪರಿಚಯ)

ಪ್ರತಿಕೂಲ ವಾತಾವರಣವನ್ನೂ ಅನುಕೂಲವಾಗಿಸಿಕೊಂಡು, ವಿಶ್ವಕ್ಕೆ ಕೃಷಿ ಅಭಿವೃದ್ಧಿಯ ಹೊಸ ಮಾದರಿಗಳನ್ನು ತೋರಿಸಿಕೊಟ್ಟ ಕೀರ್ತಿ ಕ್ಯೂಬಾ ದೇಶಕ್ಕೆ ಸಲ್ಲಬೇಕು. ಅಮೆರಿಕ ಎಂಬ ದೈತ್ಯ ದೇಶ ಕ್ಯೂಬಾ ಎಂಬ ಪುಟ್ಟ ಗುಬ್ಬಚ್ಚಿ ದೇಶದ ಮೇಲೆ ಆರ್ಥಿಕ ದಿಗ್ಧಂಧನ ಹೇರಿತ್ತು. ಮಿತ್ರ ದೇಶ ಸೋವಿಯತ್ ಒಕ್ಕೂಟ ಪತನವಾಗಿತ್ತು. ಆಮದು, ರಫ್ತು ವಹಿವಾಟನ್ನೇ ಕೈಬಿಡಬೇಕಾಯಿತು ಆ ಪುಟ್ಟ ದೇಶ. ಅಧ್ಯಕ್ಷ ಫಿಡೆಲ್ ಕ್ಯಾಸ್ಟೋ ನಾಯಕತ್ವದಲ್ಲಿ ಸ್ವಂತ ಕಾಲ ಮೇಲೆ ನಿಂತು ಸಾಧಿಸುವ ಛಲ ಹೊತ್ತರು ಆ ದೇಶದ ಜನ. ಕ್ಯೂಬಾ ಆರೋಗ್ಯ, ಕ್ರೀಡೆ, ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವವೇ ಬೆರಗಾಗುವ ಸಾಧನೆಗಳನ್ನು ಮಾಡಿದೆ. ಆದರೆ ಕೃಷಿಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ. ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಆಮದು ನಿಂತುಹೋದಾಗ ಸಾವಯವ ಕೃಷಿಗೆ ಒತ್ತುಕೊಟ್ಟು ಜೈವಿಕ ಗೊಬ್ಬರ ತಯಾರಿಸಿ, ಕೀಟಗಳ ನಿಯಂತ್ರಣಕ್ಕೆ ಇರುವೆಗಳನ್ನು ಬಳಸಿ, ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ತಮ್ಮ ಪಾರಂಪರಿಕ ಪದ್ಧತಿಗೆ ಹೊಸ ರೂಪ ಕೊಟ್ಟ ಅವರ ಪ್ರಯೋಗ ಅಧ್ಯಯನಯೋಗ್ಯವಾದ್ದು. ಭಾರತವನ್ನೂ ಒಳಗೊಂಡು ವಿಶ್ವದ ಬಹುತೇಕ ದೇಶಗಳು ಕಾರ್ಪೊರೇಟ್ ಕೃಷಿಗೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಮಾರುಕಟ್ಟೆ ಕುತಂತ್ರಕ್ಕೆ ಬಲಿಯಾಗುತ್ತಿರುವ ಸಂದರ್ಭದಲ್ಲಿ, ಸಹಕಾರಿ ಕೃಷಿ ಹಾಗೂ ಜೈವಿಕ ತಂತ್ರಜ್ಞಾನದಿಂದ, ಪ್ರಭುತ್ವದ ಜನಪರ ನೀತಿಯಿಂದ ಕ್ಯೂಬಾ ಎಂಬ ಪುಟ್ಟ ದೇಶ ಜಾಗತೀಕರಣದ ರೋಗಗಳಿಂದ ಕೃಷಿಯನ್ನು ಮುಕ್ತಗೊಳಿಸುವ ದಾರಿ ತೋರಿಸಿದೆ. ಕೃಷಿ ಕ್ಷೇತ್ರದಲ್ಲಿ ಕ್ಯೂಬಾ ನಡೆಸಿದ ಪ್ರಯೋಗಗಳ ಮಾಹಿತಿಯನ್ನು 'ಪರಿಸರಸ್ನೇಹಿ ಕೃಷಿ - ಕ್ಯೂಬಾ ಮಾದರಿ' ಎಂಬ ಚಿಕ್ಕ ಪುಸ್ತಕದಲ್ಲಿ ಲೇಖಕ ಜೈಕುಮಾರ ಮಾಡಿಕೊಟ್ಟಿದ್ದಾರೆ. ಕೃಷಿ ಕುರಿತ ಕಾಳಜಿ ಇರುವವರು ಓದಲೇಬೇಕಾದ ಕೃತಿ ಇದು.

Related Books