ಬೀಜ ಬಂಗಾರ

Author : ಜಿ. ಕೃಷ್ಣಪ್ರಸಾದ್

Pages 108

₹ 100.00




Year of Publication: 2016
Published by: ಸಹಜ ಸಮೃದ್ಡ ಪ್ರಕಾಶನ
Address: # 7, ನಂದನ, 2ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, ಸುಲ್ತಾನಪಾಳ್ಯ, ಬೆಂಗಳೂರು-560 032
Phone: 09742428853

Synopsys

ಬೀಜ ಬಂಗಾರ ಎಂಬುದು ಲೇಖಕ ಜಿ. ಕೃಷ್ಣಪ್ರಸಾದ್ ಅವರು ರಚಿಸಿದ ಕೃತಿ. ನಾಡ ತಳಿಗಳ ಜಾಡಿನಲ್ಲಿ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಎಲ್ಲ ಬೀಜಗಳು ಮೊಳಕೆಯೊಡೆಯಲಾರವು. ಬೀಜದ ತಳಿಗಳೆಂದೇ ಕೆಲವು ಬೀಜಗಳು ಇರುತ್ತವೆ. ಫಸಲು ಬಂದ ನಂತರ ಬೀಜಕ್ಕಾಗಿ ಎಂದೇ ರೈತರು ಸರಿಯಾಗಿ ಸಂಸ್ಕರಣೆ ಮಾಡಿ ಈ ಕಾಳು-ಕಡಿಯ ಬೀಜಗಳನ್ನು ಸಂರಕ್ಷಿಸಿಡುತ್ತಾರೆ. ಇಂತಹ ಬೀಜಗಳನ್ನೇ ಬಿತ್ತನೆಗೆ ಉಪಯೋಗಿಸಿದರೆ ಮಾತ್ರ ಅವು ಬೆಳೆದು ಫಸಲು ನೀಡುತ್ತವೆ. ತಪ್ಪಿದರೆ, ಮೊಳಕೆಯಲ್ಲೇ ಕಮರಿ ಹೋಗುತ್ತವೆ. ಇಂತಹ ಪದ್ಧತಿಯು ನಮ್ಮ ಸಾಂಪ್ರದಾಯಿಕ ಕೃಷಿಯಲ್ಲಿದೆ. ಈ ಜ್ಞಾನವು ಇಂದು ಮಸುಕಾಗುತ್ತಿದೆ. ಕಂಪನಿಗಳು ಸಿದ್ಧಪಡಿಸಿದ ಬೀಜಗಳನ್ನೇ ಇಂದಿನ ಕೃಷಿ ಪದ್ಧತಿ ಅವಲಂಬಿಸಿದೆ. ಇದರಿಂದ, ರೈತರಿಗೆ ಮೋಸವಾಗುತ್ತಿದೆ. ಬೀಜಗಳು ಮೊಳಕೆಯೊಡೆಯದೇ ರೈತರು ಹಾನಿ ಅನುಭವಿಸುತ್ತಿರುವುದು ಇಂದು ದುಸ್ಥಿತಿ. ಇಂತಹ ಅಪಾಯಗಳನ್ನು ತಡೆಗಟ್ಟುವ ಉದ್ದೇಶದೊಂದಿಗೆ ಉತ್ತಮ ಬಿತ್ತನೆ ಬೀಜಗಳ ಕುರಿತು ಜ್ಞಾನ ಹರಡುವಿಕೆ ಜೊತೆಗೆ ಬಿತ್ತನೆ ಬೀಜಗಳ ತಳಿಗಳ ಸಾಂಪ್ರದಾಯಿಕ ಜ್ಞಾನದ ಮುಂದುವರಿಕೆಯಾಗಿ ಈ ಕೃತಿಯು ಪೂರಕ ಮಾಹಿತಿ ನೀಡುತ್ತದೆ.

About the Author

ಜಿ. ಕೃಷ್ಣಪ್ರಸಾದ್

ರೈತರಿಗೆ ಬೀಜ ಸ್ವರಾಜ್ಯದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸುವ ಜಿ. ಕೃಷ್ಣಪ್ರಸಾದ್‌ ಅವರು ಮೈಸೂರಿನಲ್ಲಿ ’ಸಹಜ ಸಮೃದ್ಧ’ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಕೃಷಿ ಜೀವ ವೈವಿಧ್ಯ ರಕ್ಷಣಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2018-19ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ. ಮೂಲತಃ ತುಮಕೂರು ಜಿಲ್ಲೆಯವರಾದ ಜಿ. ಕೃಷ್ಣಪ್ರಸಾದ್‌ ಅವರು ಆಂಧ್ರದ ಗಡಿಯಲ್ಲಿರುವ ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿಯಲ್ಲಿ ಜನಿಸಿದರು. ಆಪ್ತರ ನಡುವೆ ’ಕೆಪಿ’ ಎಂದು ಕರೆಯಲಾಗುವ ಅವರು ಮಳವಳ್ಳಿ ಬಳಿ ನಾಲ್ಕೆಕರೆ ಜಮೀನು ಖರೀದಿಸಿ ವ್ಯವಸಾಯ ಮಾಡುತ್ತಿದ್ದಾರೆ. ಬೀಜ ಸಂರಕ್ಷಣೆಯ ...

READ MORE

Related Books