ಜಾನುವಾರು

Author : ಎಂ. ನಾರಾಯಣ ಸ್ವಾಮಿ

Pages 128

₹ 50.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದೇಸಿ ಕೃಷಿ ಜ್ಞಾನ ಮಾಲಿಕೆಯಡಿ ಪ್ರಕಟಿತವಾದ ಕೃತಿಯಾಗಿದೆ ಇದು. ರೈತ ಸಮುದಾಯದ ಆಧಾರಸ್ತಂಭಗಳಾದ ಎತ್ತು, ಹಸು, ಕುರಿ, ಮೇಕೆ, ಎಮ್ಮೆ ಇನ್ನಿತರೆ ಜಾನುವಾರುಗಳ ಬಗ್ಗೆ, ಅವುಗಳ ವಿವಿಧ ತಳಿಗಳು ಮತ್ತು ಅವುಗಳ ಗುಣಾವಗುಣಗಳ ಕರಿತು ಈ ಕೃತಿಯೂ ವಿವರಿಸುತ್ತದೆ. ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಅವುಗಗಳಿಗೆ ನೀಡುವ ದೇಸಿ ಚಿಕಿತ್ಸಾ ವಿಧಾನಗಳ ಬಗ್ಗೆ “ಲೇಖಕರಾದ ಡಾ. ಎಂ. ನಾರಾಯಣಸ್ವಾಮಿಯವರು ಈ ಕೃತಿಯಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದಾರೆ.

About the Author

ಎಂ. ನಾರಾಯಣ ಸ್ವಾಮಿ

‌ಎಂ. ನಾರಾಯಣ ಸ್ವಾಮಿ ಅವರು ಮೂಲತಃ ಕೋಲಾರ ಜಿಲ್ಲೆಯ ತ್ಯಾವನಹಳ್ಳಿಯವರು. ಅವರು 1963 ಏಪ್ರಿಲ್‌ 12ರಂದು ಜನನ. ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಶು ಶರೀರಕ್ರಿಯಾ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ.  ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದ್ಯಾರ್ಥಿ ದೆಸೆಯಿಂದಲೂ ವೈಚಾರಿಕ ಲೇಖನಗಳ ಬರವಣಿಗೆಯಲ್ಲಿ ಆಸಕ್ತಿ ತಳೆದಿದ್ದ ಅವರು ನಂತರ ಸಾಹಿತ್ಯ ಕ್ಷೇತ್ರದಲ್ಲಿಯೇ ವೃತ್ತಿ ಮತ್ತು ಪ್ರವೃತ್ತಿಯನ್ನು ಆಯ್ದುಕೊಂಡಿದ್ದಾರೆ.  ಜಾನುವಾರುಗಳು, ತೆನೆಮರೆಯ ಕ್ರಾಂತಿ:ರಾಗಿ ಲಕ್ಷ್ಮಣಯ್ಯ, ಪಶುವೈದ್ಯ ಸಂಪದ, ನಿಮಗೆ ನೀವೇ ಬೆಳಕಾಗಿ, ಮಹಾನದಿಯ ಉಗಮ, ...

READ MORE

Related Books