ಅಪೂರ್ವ ಪಶ್ಚಿಮಘಟ್ಟ

Author : ನಾಗೇಶ ಹೆಗಡೆ

Pages 52

₹ 50.00




Published by: ಭೂಮಿ ಬುಕ್ಸ್

Synopsys

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜನಜಾಗೃತಿ ಮೂಡಿಸಲೆಂದು 1986ರ ಅಕ್ಟೋಬರ್‌ನಲ್ಲಿ ಕೇರಳದಿಂದ ಗುಜರಾತಿನವರೆಗೆ ಪಾದಯಾತ್ರೆ ನಡೆಯಿತು. ಅನೇಕ ಪರಿಸರ ಚಳವಳಿಗಳಿಗೆ ಪ್ರೇರಣೆಯಾದ ಪಾದಯಾತ್ರೆ ಅದು. ಕರ್ನಾಟಕದಲ್ಲಿ ಅನೇಕ ಹೋರಾಟಗಾರರು ಹುಟ್ಟಲು ಆ ಯಾತ್ರೆಯೇ ಸ್ಫೂರ್ತಿಯಾಗಿತ್ತು. ಹೀಗೆ ಕರ್ನಾಟಕ ಪರಿಸರ ಚಳವಳಿಯ ಮುಖ್ಯಘಟ್ಟವಾಗಿದ್ದ ಜಾಥಾವನ್ನು ನೆನೆದಿದ್ದಾರೆ ನಾಡಿನ ಹಿರಿಯ ಚಿಂತಕ, ಪರಿಸರ ವಿಜ್ಞಾನಗಳ ಬರಹಗಾರ ನಾಗೇಶ ಹೆಗಡೆ. 

ಇದಲ್ಲದೆ ಪಶ್ಚಿಮ ಘಟ್ಟಗಳ ಮಹತ್ವವನ್ನು ಸಾರುವ ವಿವರಗಳು, ಚಿತ್ರಗಳು ಕೃತಿಯ ಇನ್ನಷ್ಟು ಧನಾತ್ಮಕ ಅಂಶಗಳು. 

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books