ಸುಡುವ ತಂಗಾಳಿ

Author : ಮಹಾದೇವ ಎಸ್. ಪಾಟೀಲ

Pages 85

₹ 99.00




Year of Publication: 2022
Published by: ಕಂಠಿಬಸವ ಪ್ರಕಾಶನ
Address: ಮಲ್ಲಿಕಾರ್ಜುನ ನಿಲಯ, ಭೂಪೂರ(ರಾಂಪೂರ), 584122, ತಾ.ಲಿಂಗಸೂಗೂರು, ರಾಯಚೂರು ಜಿಲ್ಲೆ
Phone: 8660454158

Synopsys

ಕವಿ ಮಹಾದೇವ ಎಸ್. ಪಾಟೀಲ ಅವರ ಗಜಲ್ ಸಂಕಲನ ಸುಡುವ ತಂಗಾಳಿ. ಪ್ರೇಮಾ ಹೂಗಾರ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ನಮ್ಮ ಗಖಲ್ ಕ್ಷೇತ್ರದಲ್ಲಿ ಮುಗಿವ ಎಚ್‌.ಪಾಲ ಅವರು ಬಹು ಅಪರೂಪದ ಬರಹಗಾರರು, ವೃತ್ತಿ ಎಂದ ಪೋಲಿಸರಾದರೂ ಇವರ ಬರಹದ ಶಕ್ತಿ ಯಾವ ದಾರ್ಶನಿಕ, ಸಂಶೋಧಕ, ಉಪನ್ಯಾಸಕಲಿಗಿಂತಲೂ ಕಡಿಮೆ ಇಲ್ಲ. ಈಗಾಗಲೇ 'ಬಿಸಿಲು ಬಿದ್ದ ರಾತ್ರಿ' ಎಂಬ ಗಜಲ್ ಸಂಕಲನ ಪ್ರಕಟಿಸಿ ಗಟಲ್ ಕ್ಷೇತ್ರವೇ ತನ್ನತ್ತ ತಿರುಗಿ ನೋಡುವಂತೆ ಯಶಸ್ಸು ಕಂಡಿದ್ದಾರೆ. ಇದೀಗ ಇವರ ಎರಡನೇ ಗಜಲ್ ಸಂಕಲನ ಹೊರ ಬರುತ್ತಿರುವುದು ಬಹು ಸಂತಸದ ಸಂಗತಿ. ಪಾಟೀಲರ ಮಿಸ್ರಾದಿಂದ ಸಾಹಿರ್‌ನ ಒಂದು ಸಾಲು 'ನೀ ಹಿಂದೂ ಆಗದಿರರು, ನೀನಾಗದಿರು ಮುಸಲ್ಮಾನ್, ಮಾನವ ಸಂತಾನ ನೀನು ಮಾನವನಾಗು’ ಎಂದು ಹೇಳುತ್ತಲೇ ಅನೇಕ ವಿಷಯಗಳತ್ತ ಬೆಳಕು ಚೆಲ್ಲುತ್ತಾರೆ. ಈ ಸಂಕಲನದಲ್ಲಿ ಪ್ರೀತಿ ಪ್ರೇಮ ಇದೆ,ವಿರಹ ಇದೆ,ಹಸಿವು, ಬಡತನ ಇದೆ, ಶರಣ,ಸೂಫಿ,ತತ್ವಪದಕಾರರ ಛಾಯೆ ಇದೆ, ಎಲ್ಲಕ್ಕೂ ಮಿಗಿಲಾಗಿ ಏಕಾಂತದ ರಾತ್ರಿಗಳವೆ, ಗಟಲ್ ಬರೆದು ಹಗುರಾದೆನೆಂಬ ಸಹೃದಯನ ಮಾತು ಸುಳ್ಳಾಗಿಸಿ ಎಲ್ಲವನ್ನೂ ತನ್ನ ಷೇರ್‌ಗಳಲ್ಲಿ ತೋಡಿಕೊಂಡು ಗಜಲ್‌ನಲ್ಲಿ ಅನವಾದರೂ ತವಲಿನಿಂದ ಹಿಂತಿರುಗುವ ಹೆಣ್ಣು ಮತ್ತೆ ಮತ್ತೆ ತನ್ನ ತವರಿಗೆ, ತನ್ನ ತಾಯಿಗೆ ತಿರು ತಿರುಗಿ ನೋಡುವಂತೆ ಗಜಲ್‌ಕಾರರ ಬೆರಳ ತುದಿಯಲ್ಲಿ ಇನ್ನೂ ಸಿಲುಕಿದ ಅವೆಷ್ಟೋ ಗಜಲ್‌ಗಳು ಬಾಹಿ ಉಂಡಿವೆ ಎನಿಸಿತು.ಬಾಳ ಬಯಲಿನೊಳಗೆ ನಿಮ್ಮ ಈ 'ಹುಡುವ ತಂಗಾ'ಯು ತನ್ನ ಅರ್ಥಪೂರ್ಣ ಆಕೃತಿ ಹೊಂದಿ ತನಗೂ ತನ್ನಲರಿಗೂ ಹೊಸ ಚೈತನ್ಯವನ್ನು ಧಾರೆ ಎರೆಯುತ್ತ ಗಜಲ್ ಕ್ಷೇತ್ರ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಶುಭ ಹಾರೈಸುವೆ.

About the Author

ಮಹಾದೇವ ಎಸ್. ಪಾಟೀಲ
(15 April 1982)

ಕವಿ ಮಹಾದೇವ ಎಸ್. ಪಾಟೀಲ ಅವರು ರಾಯಚೂರು ಜಿಲ್ಲೆಯ ಅಂಗಸೂಗೂರು ತಾಲೂಕಿನ ಭೂಷರು (ರಾಂಪೂರು) ಗ್ರಾಮದಲ್ಲಿ 1982 ಏಪ್ರಿಲ್ 15ರಲ್ಲಿ ಜನಿಸಿದರು. ಓದಿದ್ದು ಬಿ.ಎ. ಪದವಿ. ಸ್ವಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ 'ರಾಜಕೀಯದಲ್ಲಿ ರಾವಣರು' ಸಾಮಾಜಿಕ ನಾಟಕವನ್ನು ರಚಿಸಿ, ತಮ್ಮ ಗ್ರಾಮದಲ್ಲಿ ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಕಾಲೇಜು ಹಂತದಿಂದಲೇ ಕಥೆ,ಕವಿತೆ,ಚುಟುಕುನಾಟಕ ಹೀಗೆ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಅವರ ಮೊದಲ ಕೃತಿ - ಗಾಂಧಿ ಬಜಾರ (ಕವನ ಸಂಕಲನ), ಎರಡನೇ ಕೃತಿ ಭೂಷರಾಧೀಶ್ವರ (ಶರಣರ ಜೀವನ ಚರಿತ್ರೆ), ಮೂರನೇ ಕೃತಿ - ಮುತ್ತಿನ ...

READ MORE

Related Books