ಕಣ್ಣ ಬೊಗಸೆಯಲ್ಲಿ

Author : ಶರೀಫ್ ಹಸಮಕಲ್

Pages 54

₹ 80.00




Year of Publication: 2022
Published by: ದಾದಜಿ ಪ್ರಕಾಶನ

Synopsys

ಶರೀಫ್‌ ಹಸಮಕಲ್ ಅವರ ಗಜಲ್ ಸಂಕಲನ 'ಕಣ್ಣ ಬೊಗಸೆಯಲ್ಲಿ' ಈ ಹೆಸರೇ ಏಶಿಷ್ಟವಾಗಿದೆ. ಕಏತೆ ಬರೆವ ಕೈ ಮಧುರ ಗಜಲ್ ರೂಪವನ್ನೂ ಒಅಸಿಕೊಳ್ಳಲು ಯತ್ನಿಸಿದಂತಿದೆ. ಕವಿಯ ಕಣ್ಣ ಬೊಗಸೆಯಲ್ಲಿ ರಾಶಿಪ್ರೀತಿ, ವಿರಹದ ಸುಷು ಸುಖದ ಯಾತನೆ ಮಧುಬಟ್ಟಲಿನ ಘಮಱದೆ. ಕನಸಿನ ಹೂವು ಪಕಳೆ, ನೀಲಾಕಾಶದ ನಿಹಾಲಕಗಳ ನೋವು, ಮಳೆಚಿಲ್ಲ ಸೊಬಗು, ಪೈಜಾಣದ ಇಂಪು, ಬೆಚ್ಚನೆಯ ಸ್ಪರ್ಷದಂತಹ ನವಿರು ಭಾವಗಳವೆ. ಇವೆಲ್ಲವುಗಳೊಂದಿಗೆ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆಯ ಬಗೆಗೆ ಕನಲುವ ಕಏ ದುಡಿವ ವರ್ಗದ ತಳಮಳ, ಸಮುದಾಯದ ಚಹರೆಗಳನ್ನು ಸುಡುವ ವರ್ತಮಾನದ ಚಿಕ್ಕಟ್ಟುಗಳನ್ನು ಬಿಡಿಸಿಟ್ಟಿದ್ದಾರೆ. ಸಂಕಲನದಲ್ಲಿ ಇಲ್ಲಲ್ಲಿ ಭಾವತೀವ್ರತೆ ಹಿಂದೆ ಸರಿದು, ತಾತ್ವಿಕತೆಯ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಕೇಡನ್ನು ಎದುರಿಸುವ ಅಭಿವ್ಯಕ್ತಿಯಲ್ಲಿ ದಿಟ್ಟತೆ, ಪ್ರಾಮಾಣಿಕತೆ ಇದೆ. ಸುತ್ತಲಿನ ಹಿಂಸೆ ಅಸಹನೆ ಅಸಹಿಷ್ಣುತೆಗೆ ಪ್ರತಿರೋಧವನ್ನು ಒಡ್ಡುವಲ್ಲಿ ಬಹುತ್ವದ ಸಾಮರಸ್ಯದ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ. ಪ್ರತಿಮೆ, ರೂಪಕ, ನೆಲದ ಭಾಷೆ, ಹೊಸ ನೋಟವನ್ನು ದಕ್ಕಿಸಿಕೊಳ್ಳಲು ಹುರುಪಿನಿಂದ ಹುಡುಕಾಟ ನಡೆಸಿರುವ ಈ ಕಏಗೆ ಭೂತದ ಎಚ್ಚರ, ವರ್ತಮಾನದ ಬಗೆಗೆ ಅರಿವಿರುವುದು ಇಲ್ಲಿ ನಿಚ್ಚಳವಾಗಿದೆ. ಖಾಸಗಿ ಸ್ಪಂದನೆಗಳ ಆಚೆಗೂ ಲೋಕದ ಕೋಲಾಹಲಗಳಿಗೆ ಮಿಡಿವ ಹಸಮಕಲ್ ಆ ಕಾರಣಕ್ಕೆ ಇಷ್ಟವಾಗುತ್ತಾರೆ. ಕತ್ತಲೆಯ ಹಾದಿಗೆ ಹಚ್ಚಿಟ್ಟ ಹಣತೆಗಳಂತಿರುವ ಈ ಗಜಲ್‌ಗಳು ಸದಾ ಅರಿವಿನ ಬೆಳಕನ್ನು ಹೀಗೆ ಹಂಚುತ್ತಿರು ಎಂದು ಆಶಿಸುವೆ ಎಂದು ದಸ್ತಗೀರಸಾಬ್ ದಿನ್ನಿ ಅವರು ತಿಳಿಸಿದ್ದಾರೆ.

About the Author

ಶರೀಫ್ ಹಸಮಕಲ್

ಶರೀಫ್ ಹಸಮಕಲ್ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದವರು. "ಇತ್ತೀಚಿನ ಕನ್ನಡ ಕಾವ್ಯ ತಾತ್ವಿಕ ನೆಲೆಗಳು" ಎನ್ನುವ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನ ಕನ್ನಡ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ಇವರ ಕವನ ಸಂಕಲನ " ಚಿಲ್ಲರೆಗೆ ಕದಲದ ಜಾಗ" ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ದೊರೆತಿದೆ. ಹಾಗೆ ಅಕ್ಷರ ಅರಿವು ಎಂಬ ಮಕ್ಕಳ ನಾಟಕವನ್ನು ರಚಿಸಿದ್ದಾರೆ. ಪ್ರಸ್ತುತ ಹೊರ ತಂದ ಗಜಲ್ ಸಂಕಲನ "ಕಣ್ಣ ಬೊಗಸೆಯಲ್ಲಿ" ಎಂಬ ಗಜಲ್ ಸಂಕಲನಕ್ಕೆ "ಸೃಷ್ಟಿ ಕಾವ್ಯ" ಪ್ರಶಸ್ತಿ ದೊರೆತಿದೆ. ಸದ್ಯ ಇವರು ಸಿಂಧನೂರಿನ ವಿಜಡಮ್ ...

READ MORE

Related Books