ನಿನ್ನ ಧ್ಯಾನಿಸಿದ ಮೇಲೂ

Author : ನಿರ್ಮಲಾ ಶೆಟ್ಟರ್

Pages 80

₹ 80.00




Year of Publication: 2019
Published by: ಪಾಲ್ಗುಣಿ ಪ್ರಕಾಶನ
Address: # ಸೂಗೂರೇಶ್ವರ ನಿಲಯ, ದೇಸಾಯಿ ಬಣ, ಲಕ್ಷ್ಮೇಶ್ವರ, ಜಿ: ಗದಗ
Phone: 9986334719

Synopsys

ನಿರ್ಮಲಾ ಶೆಟ್ಟರ್ ಅವರ ಗಜಲ್ ಗಳ ಸಂಕಲನ- ನಿನ್ನ ಧ್ಯಾನಿಸಿದ ಮೇಲೂ. ಈ ಸಂಕಲನದಲ್ಲಿ 54 ಗಜಲ್ ಗಳಿವೆ. ಖ್ಯಾತ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಕೃತಿಗೆ ಮುನ್ನುಡಿ ಬರೆದು ‘ಬದುಕಿನ ಅನುಭವಗಳು ತಮಗೆ ಕರುಣಿಸಿದ ಸಂಯಮ , ಸಮಾಧಾನಗಳನ್ನು ಹುರಿ ಹಾಕಿ, ಕವಯತ್ರಿ ತಾವೇ ತಯಾರಿಸಿಕೊಂಡ ಸೂತ್ರದಲ್ಲಿ ಪವಣಿಸಿದ ಪದಮುಕುಲಗಳು ಗಜಲ್ ಗಳಾಗಿ ಅರಳಿವೆ. ನಿಶೆಯ ನಶೆಯಲ್ಲಿ ಬೆಳದಿಂಗಳ ಹಾಡುಗಳಿವೆ. ಅವಿಸ್ಮರಣೀಯವಾದ ಅನುತಾಪದ ಅಲೆಗಳು ಗಜಲ್ ಗಳಲ್ಲಿ ತಾಕಲಾಡಿವೆ. ರಸಿಕ ಮನದ ಕಾವ್ಯಾಸ್ವಾದನೆಯ ನಶೆಯೂ ಇದೆ’ ಎಂದು ಪ್ರಶಂಸಿಸಿದ್ದಾರೆ.

About the Author

ನಿರ್ಮಲಾ ಶೆಟ್ಟರ್

ಕವಿ ನಿರ್ಮಲಾ ಶೆಟ್ಟರ್‌ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಧಾರವಾಡದ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿದ್ದು, ಇವರಿಗೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. . ಕೃತಿಗಳು: ಬೆಳಕಿನೊಡನೆ ಪಯಣ (ಕವನ ಸಂಕಲನ), ನಿನ್ನ ಧ್ಯಾನಿಸಿದ ಮೇಲೂ (ಗಜಲ್ ಸಂಕಲನ), ‘ಸರಹದ್ದುಗಳಿಲ್ಲದ ಭೂಮಿಯ ಕನಸು (ಕವನ ಸಂಕಲನ). . *ಆಕಾಶವಾಣಿಯಲ್ಲಿ ಕತೆ ಕವಿತೆ ವಾಚನ. 2020 ರಲ್ಲಿ ಪ್ರಜಾವಾಣಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ. ಅನುಪಮಾ ನಿರಂಜನ ಕಥಾ ಬಹುಮಾನ ಲಭಿಸಿದೆ. ...

READ MORE

Related Books