ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್‌ ಅವರು ಬರೆಯಿಸಿದ ರಾಜೇಂದ್ರನಾಮೆ ಮರು ಓದು

Author : ತಂಬಂಡ ವಿಜಯ್ ಪೂಣಚ್ಚ

Pages 810

₹ 900.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕರ್ನಾಟಕ ಚರಿತ್ರೆಯನ್ನು ಪುನಾರಚಿಸಿರುವ, ಪುನರ್‌ವಿಮರ್ಶಿಸುವ ಸಾಧ್ಯತೆಗಳಿಗೆ ವಿಜಯ್‌ ಪೂಣಚ್ಚ ತಂಬಂಡ ಅವರು ಸಂಪಾದಿಸಿ, ಪ್ರಸ್ತಾವನೆಯನ್ನು ಬರೆದಿರುವ ಕೃತಿಯೇ ’ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್‌ ಅವರು ಬರೆಯಿಸಿದ ರಾಜೇಂದ್ರನಾಮೆ ಮರು ಓದು’. 

1807ರಲ್ಲಿ ರಚನೆಗೊಂಡು 1857ರಲ್ಲಿ ಪ್ರಕಟಗೊಂಡ ರಾಜೇಂದ್ರನಾಮೆ ಮೂಲಪ್ರತಿಯ ಪ್ರತಿ ಪುಟಕ್ಕೂ ಪೂಣಚ್ಚ ಅವರು ಟಿಪ್ಪಣಿಯನ್ನು ಬರೆದಿರುವುದರಿಂದ 19ನೇ ಶತಮಾನದ ಮೊದಲ ದಶಕದಲ್ಲಿ ಹೊರಬಂದ ಈ ಕೃತಿಯನ್ನು ಭೂತ ಹಾಗೂ ವರ್ತಮಾನಗಳ ನಡುವಿನ ಸಂವಾದದಂತೆ ಚರ್ಚಿಸಬಹುದಾಗಿದೆ. ಮೈಸೂರು, ಇಕ್ಕೇರಿ, ಸ್ವಾದೆ, ಬೇಲೂರು, ಮಲೆಯಾಳಿ ರಾಜ್ಯಗಳಾದ ಬೆರಕಲ್‌ ಮತ್ತು ಕೋಟೆ ರಾಜ್ಯಗಳ ರಾಜಕೀಯ ಸಂಬಂಧಗಳನ್ನು ಚರ್ಚಿಸುವುದರೊಂದಿಗೆ ಮರಾಠರ, ನಿಜಾಮರ, ಪೋರ್ಚುಗೀಸರ, ಫ್ರೆಂಚರ ಮತ್ತು ಇಂಗ್ಲಿಷರ ರಾಜಕೀಯ ಪಗಡೆಯಾಟಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

About the Author

ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books