
ಶ್ರೀಕೃಷ್ಣದೇವರಾಯನನ್ನು ಕುರಿತಂತೆ ಸಾಕಷ್ಟು ಅಧ್ಯಯನ, ಸಂಶೋಧನೆಗಳಾಗಿವೆ. ಆದರೆ ಧಾರ್ಮಿಕ ಸ್ಥಿತಿ-ಗತಿ, ತೀರ್ಥಯಾತ್ರೆಗಳ ಬಗ್ಗೆ ಸಂಶೋಧನೆ ನಡೆದಿರುವುದು ವಿರಳಾತಿವಿರಳ. ಸಾಧು, ಸನ್ಯಾಸಿಗಳಲ್ಲದೆ, ಒಬ್ಬ ಪರಾಕ್ರಮಶಾಲಿ ಅರಸ ಈ ರೀತಿ ತೀರ್ಥಯಾತ್ರೆ ಕೈಗೊಳ್ಳಲು ಕಾರಣವೇನು?, ಯುದ್ದಗಳ ಮೂಲಕ ಗೆಲ್ಲುವ ಸಂಪತ್ತು ಸಂಗ್ರಹಿಸುವ ಚಾಣಕ್ಷತನದಿಂದ ಧಾರ್ಮಿಕ ಕ್ಷೇತ್ರಗಳು ಸೃಷ್ಟಿಯಾಗಿದ್ದ ಮಧ್ಯಕಾಲೀನ ಸಂದರ್ಭ ಮಹತ್ತರ ಬೆಳವಣಿಗೆಗೆ ಕಾರಣವೇನು? ಕೃಷ್ಣದೇವರಾಯನ ಮೂಲಕ ಯಾತ್ರಾಸ್ಥಳಗಳು ಬೆಳೆದವೊ ಅಥವಾ ಯಾತ್ರಾಸ್ಥಳಗಳು ರಾಯನನ್ನು ಆಕರ್ಷಿಸಿದವೋ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಪುಸ್ತಕದಲ್ಲಿ ಕಂಡುಕೊಳ್ಳಬಹುದಾಗಿದೆ. ವಿಜಯನಗರ ಕಾಲದ ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸ್ಥಿತ್ಯಂತರಗಳನ್ನು ಸೃಷ್ಟಿಸಿದ ಕೃಷ್ಣದೇವರಾಯನ ನಗರ, ಪಟ್ಟಣ, ಧಾರ್ಮಿಕ ಕೇಂದ್ರಗಳು ಹೇಗೆ ಉಗಮವಾದವು, ಅಭಿವೃದ್ಧಿಗೊಂಡವು?. ಅದರ ಜಾಡನ್ನು ಹಿಡಿದ ಲೇಖಕರು ಕೃಷ್ಣದೇವರಾಯ ಭೇಟಿ ಮಾಡಿದ ಕ್ಷೇತ್ರಗಳ ಅಧ್ಯಯನ ಮತ್ತು ಅದರ ಹಿನ್ನೆಲೆಯನ್ನು ಇಲ್ಲಿ ಸಕಾರಣಗಳ ಮೂಲಕ ಉಲ್ಲೇಖಿಸಿದ್ದಾರೆ.
©2025 Book Brahma Private Limited.