ಕರ್ನಾಟಕ ಇತಿಹಾಸದ ಅನ್ವೇಷಣೆಗಳು

Author : ಎಸ್. ಕೆ. ಅರುಣಿ

Pages 132

₹ 125.00




Year of Publication: 2019
Published by: ಇತಿಹಾಸ ದರ್ಪಣ ಪ್ರಕಾಶನ
Address: # 33/A, ಐಟಿಐ ಕಾಲೇಜು ಸಮೀಪ, ಕೆಂಪೇಗೌಡ ನಗರ, ವಿಶ್ವನೀಡಂ, ಬೆಂಗಳೂರು-560091
Phone: 7829404063

Synopsys

ಡಾ. ಎಸ್.ಕೆ.ಅರುಣಿ ಅವರು ಬರೆದ ಕೃತಿ-ಕರ್ನಾಟಕ ಇತಿಹಾಸದ ಅನ್ವೇಷಣೆಗಳು. ಇತಿಹಾಸದಲ್ಲಿ ಸಾಮಾನ್ಯವಾಗಿ ಅರಸು ಮನೆತನಗಳ ಯುದ್ಧಗಳು, ಸಾಮ್ರಾಜ್ಯದ ವಿಸ್ತರಣೆ, ಅರಮನೆಗಳು-ಕೋಟೆಗಳು, ಅವರ ವಹಿವಾಟುಗಳು, ವೈಭೋಗ, ವೈಭವ, ಕಾಲಾಳು, ಕುದುರೆಗಳು, ಆನೆಗಳು ಇತ್ಯಾದಿ ಒಟ್ಟು ವಿವರಣೆ ಇರುತ್ತದೆ. ಆದರೆ, ರಕ್ಷಣಾ ವ್ಯವಸ್ಥೆಯ ಸಮಗ್ರ ನೋಟ ನೀಡುವುದು ಹಾಗೂ ನಗರೀಕರಣ ವ್ಯವಸ್ಥೆ ಬೆಳೆಸುವ ವಿಧಾನಗಳ ಹಾಗೂ ದಾಖಲೀಕರಣ ಕುರಿತು ಸಂಶೋಧನಾತ್ಮಕ ಕೃತಿಗಳು ವಿರಳ. ಈ ಹಿನ್ನೆಲೆಯಲ್ಲಿ, ‘ಕರ್ನಾಟಕ ಇತಿಹಾಸದ ಅನ್ವೇಷಣೆಗಳು’ ಕೃತಿಯು ಈ ಕೊರತೆಯನ್ನು ನೀಗಿಸುತ್ತದೆ.

ಕೃತಿಯ ವಿಷಯದ ಸರಳೀಕರಣಕ್ಕಾಗಿ ಲೇಖಕರು ಪರಿವಿಡಿಯಲ್ಲಿ ಎರಡು ವಿಭಾಗಗಳನ್ನು ಮಾಡಿದ್ದಾರೆ. ವಿಭಾಗ-1 ರಲ್ಲಿ; ಭಾರತೀಯ ಕೋಟೆಗಳು : ಒಂದು ಸಮೀಕ್ಷೆ, ಕರ್ನಾಟಕದ ಕೋಟೆಗಳು: ಒಂದು ಅವಲೋಕನ, ಕಲಬುರ್ಗಿ ಕೋಟೆ: ಇತ್ತೀಚಿನ ಅಧ್ಯಯನ, ನಂದಿದುರ್ಗ ಕೋಟೆಯ ರಚನೆ ಮತ್ತು ಸ್ಮಾರಕಗಳ ಸಮೀಕ್ಷೆ, ದೇವರಾಯನದುರ್ಗದ ಇತಿಹಾಸ ಮತ್ತು ಸ್ಮಾರಕಗಳು, ಹುಡೇವು: ಮಧ್ಯಕಾಲೀನ ಡೆಕ್ಕನ್ ಗ್ರಾಮ ರಕ್ಷಣಾ ವಾಸ್ತು-ಒಂದು ಅವಲೋಕನ, ವಿಭಾಗ-2ರಲ್ಲಿ; ಬಹಮನಿ ರಾಜ್ಯದ ರಾಜಧಾನಿ ನಗರಗಳು: ಒಂದು ವಿಶ್ಲೇಷಣೆ, ಬೀದರ ನಗರ ರಚನೆ ಹಾಗೀ ಇತರೆ ನಗರಗಳ ಮೇಲೆ ಪ್ರಭಾವ, ಬಹಮನಿ ವಾಸ್ತುಶಿಲ್ಪ; ಇತ್ತೀಚಿನ ಹೊಸ ಶೋಧನೆಗಳು ಹಾಗೂ ಜೇಮ್ಸ್ ವೆಲ್ಷ್ ಕಂಡ ಬಿಜಾಪುರ ಹೀಗೆ ವಿಷಯದ ವರ್ಗೀಕರಣ ಮಾಡಲಾಗಿದೆ. 

‘ಇತಿಹಾಸ ದರ್ಪಣ’ ಸಂಪಾದಕ ಹಂ.ಗು.ರಾಜೇಶ್ ಅವರು ಕೃತಿಗೆ ಮುನ್ನುಡಿ ಬರೆದು ‘ನಗರ ಹಾಗೂ ಕೋಟೆಗಳ ಸಂಯೋಜಿತ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಪ್ರೇರೇಪಿಸುತ್ತದೆ. ನಗರೀಕರಣ ಹಾಗೂ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಅಧ್ಯಯನಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಈ ಕೃತಿಯು ಮಹತ್ವದ ಸೂಚನೆಗಳನ್ನು ನೀಡುತ್ತದೆ. 1928ರಲ್ಲಿ, ಜೇಮ್ಸ್ ವೆಲ್ಷ್ ಎಂಬಾತ ಬಿಜಾಪುರವನ್ನು ಸಂದರ್ಶಿಸಿ ಅಲ್ಲಿಯ ನಗರ ವ್ಯವಸ್ಥೆ ಹಾಗೂ ರಕ್ಷಣ ವ್ಯವಸ್ಥೆಕುರಿತು ದಾಖಲಿಸಿದ ಸಂಗತಿಗಳ ಕುರಿತ ವಿವರಣೆಯು ಕೊನೆಯ ಅಧ್ಯಾಯದಲ್ಲಿದ್ದು, ಇಂತಹ ಬರಹಗಳು ವಿರಳವೆಂದೇ ಹೇಳಬೇಕು’ ಎಂದು ಪ್ರಶಂಸಿಸಿದ್ದಾರೆ.    

 

About the Author

ಎಸ್. ಕೆ. ಅರುಣಿ

ಎಸ್. ಕೆ ಅರುಣಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆಯ ಹಾದಿ ಹಿಡಿದಿರುವ ಇವರು ಕರ್ನಾಟಕ ಇತಿಹಾಸ, ಪುರಾತತ್ತ್ವ, ವಾಸ್ತುಶಿಲ್ಪ, ಶಿಲ್ಪಕಲೆಗೆ ಸಂಬಂಧಿಸಿದ ಸಂಶೋಧನೆಯ ಕೃತಿಗಳನ್ನು ರಚಿಸಿದ್ದಾರೆ. ಇವರ ಕರ್ನಾಟಕ ಪುರಾತತ್ವದ ಅಧ್ಯಯನಗಳನ್ನು ಸಂಪಾದಿತ ಕೃತಿಯಾಗಿ ಹೊರತಂದಿದ್ದಾರೆ. ದಖ್ಖನಿ ಚಿತ್ರಕಲೆ (2001), ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ (2007), Surapura Samsthana – Historical and Archaeological Study of a Poligar ...

READ MORE

Related Books