ಇತಿಹಾಸದ ಆಚೆ ಈಚೆ

Author : ಸೂರ್ಯನಾಥ ಕಾಮತ್

Pages 328

₹ 175.00




Year of Publication: 2012
Published by: ಹೇಮಂತ ಸಾಹಿತ್ಯ
Address: ರಾಜಾಜಿನಗರ, ಬೆಂಗಳೂರು-560010
Phone: 08023354619

Synopsys

ಖ್ಯಾತ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್ ಅವರ ಕೃತಿ-ಇತಿಹಾಸದ ಆಚೆಈಚೆ. ಸಾಮಾಜಿಕ, ಆಡಳಿತಾತ್ಮಕ, ರಾಜಕೀಯ ಹೀಗೆ ವಿವಿಧ ಆಯಾಮಗಳಲ್ಲಿ ಇತಿಹಾಸವನ್ನು ವಿಶ್ಲೇಷಿಸುವ ಒಳನೋಟಗಳನ್ನು ಈ ಕೃತಿಯಲ್ಲಿ ಕಾಣಬಹುದು. ಇತಿಹಾಸವನ್ನು ಹೇಗೆ ನೋಡಬೇಕು ಎಂಬುದರ ಸೂಕ್ಷತೆಯಾಗಿಯೂ ಇತಿಹಾಸ ಆಸಕ್ತರಿಗೆ ಈ ಕೃತಿ ಪೂರಕ ಅಂಶಗಳ ಹೊಳವು ನೀಡುತ್ತದೆ.

About the Author

ಸೂರ್ಯನಾಥ ಕಾಮತ್
(26 April 1937 - 21 October 2015)

ಸಾಹಿತಿ ಸೂರ್ಯನಾಥ ಕಾಮತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ತಂದೆ ಉಪೇಂದ್ರಕಾಮತ್, ತಾಯಿ ಪದ್ಮಾವತಮ್ಮ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸ್ನಾತಕೋತ್ತರ ಪದವಿ ಗಳಿಕೆ. ಪ್ರಾಧ್ಯಾಪಕ, ಸಂಶೋಧಕ, ಇತಿಹಾಸ ಅವರ ಆಸಕ್ತಿಯ ಕ್ಷೇತ್ರಗಳು. ‘TULUVA IN VIJAYANAGAR TIMES’ ಅವರ ಪಿಎಚ್.ಡಿ. ಪ್ರಬಂಧ. ಉತ್ಥಾನ ಪತ್ರಿಕೆಯ ಸಹ ಸಂಪಾದಕರಾಗಿ, ಪ್ರಜಾವಾಣಿ ಸಹ ಸಂಪಾದಕರಾಗಿದ್ದರು. ‘ಕರ್ನಾಟಕದ ಇತಿಹಾಸ ಮಂಜರಿ, ಕರ್ನಾಟಕದ ವೀರರಾಣಿಯರು, ವಿಜಯನಗರ ಕಥೆಗಳು, ಕೆಳದಿಯ ಚೆನ್ನಮ್ಮಾಜಿ, ವೀರರಾಣಿ ಅಬ್ಬಕ್ಕ’ ಅವರ ಪ್ರಮುಖ ಕೃತಿಗಳು. ಥೇಮ್ಸ್‌ನಿಂದ ಗಂಗೆಗೆ, ಈಸಿ ಜೈಸಿದರು (ಸಾಮಾಜಿಕ) ; ಕೃಷ್ಣದೇವರಾಯ, ಮುಳ್ಳಿನಹಾದಿ ...

READ MORE

Related Books