ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ 4 : ಚರಿತ್ರೆ

Author : ತಂಬಂಡ ವಿಜಯ್ ಪೂಣಚ್ಚ

Pages 924

₹ 70.00




Year of Publication: 2001
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ

Synopsys

ಈ ವಿಶ್ವಕೋಶವು ಇತರ ಸಾಮಾನ್ಯ ವಿಶ್ವಕೋಶಗಳ ಮಾದರಿಗಳಿಗಿಂತ ಅನೇಕ ಬಗೆಯಲ್ಲಿ ಭಿನ್ನವಾಗಿದ್ದು, ಇಲ್ಲಿ 'ಚರಿತ್ರೆ' ಎನ್ನುವ ವಿಚಾರದ ಬುನಾದಿಯಿಂದ ಚರಿತ್ರೆಯು ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಂಡುಕೊಂಡ ಏರಿಳಿತಗಳನ್ನು ವಿವರಿಸಲಾಗಿದೆ. ಭಾರತ ಉಪಖಂಡ ಹಾಗೂ ಏಕೀಕರಣೋತ್ತರ ಕರ್ನಾಟಕದ ಚರಿತ್ರೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಭಾಗಗಳನ್ನು ಮಾಡಿ ಅವುಗಳನ್ನು ಈ ವಿಶ್ವಕೋಶದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಈ ವಿಶ್ವಕೋಶವು ಒಳಗೊಂಡಿರುವ ಅಧ್ಯಾಯಗಳೆಂದರೆ:ಚರಿತ್ರೆ ರಚನಾಶಾಸ್ತ್ರ ಸಿದ್ಧಾಂತ ಮತ್ತು ಅಧ್ಯಯನ ವಿಧಾನದ ಮತ್ತು ಹೊಸ ಆಯಾಮಗಳು ,ಭೂಮಿಯ ಚರಿತ್ರ ,ಏಷ್ಯಾ, ಆಫ್ರಿಕಾ ,ಯೂರೋಪ್, ಅಮೇರಿಕಾ ಪ್ರಸ್ತುತ ವಿಶ್ವಕೋಶವು ಪ್ರಾಚೀನ ಮತ್ತು ಮಧ್ಯಯುಗೀನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಅನೇಕ ವಿವರಗಳನ್ನು ಚರ್ಚಿಸುತ್ತಲೆ ಬಹುತೇಕವಾಗಿ ಆಧುನಿಕ ಚರಿತ್ರೆಯನ್ನು ಪ್ರಮುಖವಾಗಿ ವಿಶ್ಲೇಷಿಸಿದ. ಸಾಮ್ರಾಜ್ಯಶಾಹಿ ಶಕ್ತಿಗಳು ಬೇರೆ ಬೇರೆ ಖಂಡಗಳ ಅನೇಕ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿದ ಹಾಗು ಆ ವಸಾಹತುಶಾಹಿ ಸರಕಾರಗಳಿಗೆ ವಿರೋಧವಾಗಿ ಜನಾಂದೋಲಗಳನ್ನು ಸಂಘಟಿಸಿದ ಸ್ಥಳೀಯರ ರಾಷ್ಟ್ರೀಯ ಹೋರಾಟಗಳ ಮತ್ತು ಪ್ರತಿಕ್ರಿಯೆ ಗಳ ಪ್ರಕ್ರಿಯೆಯನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಈ ವಿಶ್ವಕೋಶದಲ್ಲಿ ಒಟ್ಟು ಒಂಬತ್ತು ಭಾಗಗಳಿವೆ. ಅವು ,ಚರಿತ್ರೆ ರಚನಾಶಾಸ್ತ್ರ, ಸಿದ್ದಾಂತ ಮತ್ತು ಅಧ್ಯಯನ ವಿಧಾನದ ಹೊಸ ಆಯಾಮಗಳು , ಭೂಮಿಯ ಚರಿತ್ರೆ ,ಏಷ್ಯಾ ಚರಿತ್ರೆ , ಆಫ್ರಿಕಾ ಚರಿತ್ರೆ , ಯುರೋಪ್ ಚರಿತ್ರೆ ,ಅಮರಿಕ ಚರಿತ್ರೆ , ಆಸ್ಟ್ರೇಲಿಯಾ ಶಾಂತ ಮಹಾಸಾಗರದ ದ್ವೀಪಗಳು, ಭಾರತ ಉಪಖಂಡ ಮತ್ತು ,ಕರ್ನಾಟಕದ ಹೋರಾಟ, ಚಳುವಳಿ, ಗಡಿ ಜಲವಿವಾದಗಳು.

About the Author

ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books