
ಲೇಖಕ ವಿಠ್ಠಲ ಭಂಡಾರಿ ಅವರ ಇತಿಹಾಸ ಸಂಬಂಧಿ ಕೃತಿ ಸ್ವಾತಂತ್ರ್ಯಾನೂ ಬೇಕು ಭೂಮಿನೂ ಬೇಕುʼ. ಪುಸ್ತಕವು ಉತ್ತರ ಕನ್ನಡ ಭಾಗದಲ್ಲಿ ನಡೆದ ರೈತ ಚಳುವಳಿಯ ಕುರಿತು ಇಂದಿಗೂ ಯಾರಿಗೂ ತಿಳಿದಿರದ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿ ಲೇಖಕರು ವಿಷಯಗಳನ್ನು ಎರಡು ಭಾಗಗಳಲ್ಲಿ ಹಂಚಿಕೊಂಡಿದ್ದಾರೆ. ಒಂದನೇ ಭಾಗವು 1920- 40ರ ಮೂರು ದಶಕಗಳ ಕೆಂಬಾವುಟ ನಾಯಕತ್ವದ ರೈತ ಹೋರಾಟಗಳ ವೀರಗಾಥೆಯ ಕುರಿತು ಹೇಳುತ್ತದೆ. ಇದನ್ನು ಹೋರಾಟಗಳ ನಾಯಕರ, ಸಂದರ್ಶನಗಳ ಪಾಲುಗೊಂಡವರ, ಕುಟುಂಬದವರ ಮತ್ತು ದಾಖಲೆಗಳ ಸಂಗ್ರಹಗಳ ಆಧಾರದ ಮೇಲೆ ಮೊದಲ ಬಾರಿಗೆ ದಾಖಲು ಮಾಡಲಾಗಿದೆ. ಎರಡನೇ ಭಾಗವು 1970ರ ದಶಕದ ವರೆಗಿನ ಉತ್ತರ ಕನ್ನಡದ ರೈತ ಚಳುವಳಿಯ ಗೊತ್ತಿರದ ಇತಿಹಾಸದ ಘಟನೆಗಳ ಬಗ್ಗೆ ಎರಡನೇ ಭಾಗ ಬಿಚ್ಚಿಡುತ್ತದೆ. ಹೀಗೆ, ಬೇರೆ ಬೇರೆ ದಾಖಲೆಗಳ, ಸಂಗ್ರಹಗಳ ಆಧಾರದ ಮೇಲೆ ಸಂಗ್ರಹಿಸಿದ ಮಾಹಿತಿಗಳು ಮೊದಲ ಬಾರಿಗೆ ಸ್ವಾತಂತ್ರ್ಯಾನೂ ಬೇಕು ಭೂಮಿನೂ ಬೇಕುʼ ಪುಸ್ತಕದ ಮೂಲಕ ದಾಖಲು ಮಾಡಲಾಗಿರುವುದು ವಿಶೇಷವಾಗಿದೆ.
©2025 Book Brahma Private Limited.