ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ

Author : ಎಸ್. ಲಕ್ಷ್ಮೀ ನಾರಾಯಣ

Pages 126

₹ 125.00




Year of Publication: 2018
Published by: ಅನು ಪ್ರಕಾಶನ
Address: ಬಸವೇಶ್ವರ ನಗರ, ಬೆಂಗಳೂರು

Synopsys

ಪತ್ರಕರ್ತರಾದ ಎಸ್. ಲಕ್ಷ್ಮಿನಾರಾಯಣ ಅವರ ’ ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ’ ಕೃತಿಯು ಕರ್ನಾಟಕ ರಾಜಕೀಯ ವ್ವವಸ್ಥೆ ಮತ್ತು ಪ್ರಾದೇಶಿಕ ಪಕ್ಷಗಳ ಉಗಮ- ಅವಸಾನದ ವಿಚಾರಗಳನ್ನು ಕುರಿತು ಚರ್ಚಿಸುತ್ತದೆ. 

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಏಳು - ಬೀಳು, ಇದುವರೆಗಿನ ರಾಜಕೀಯ ಇತಿಹಾಸದ ಸಮಗ್ರ ಚಿತ್ರಣವನ್ನು ಈ ಕೃತಿಯಲ್ಲಿ ನೀಡಲಾಗಿದೆ. ತುರ್ತು ಪರಿಸ್ಥಿತಿ, ಜೆ.ಪಿ ಆಂದೋಲನ, ಜನತಾಪಕ್ಷದ ಉದಯ, ಕೇಂದ್ರದಲ್ಲಿ ಪ್ರಥಮ ಕಾಂಗ್ರೇಸ್ಸೇತರ ಸರ್ಕಾರ, ಕರ್ನಾಟಕದಲ್ಲಿ ಜನತಾಪಕ್ಷ ಸರ್ಕಾರ ರಚನೆ, ಜನತಾಪಕ್ಷದ ನಿಲುವು- ವಿಚಾರ, ಎಲ್ಲವನ್ನೂ ಈ ಕೃತಿ ಒಳಗೊಂಡಿದೆ. ಆಂಧ್ರ, ತಮಿಳುನಾಡು, ದೂರದ ಉತ್ತರಪ್ರದೇಶ, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ರಕ್ಷಿಸಿದ ರೀತಿಯನ್ನು ಈ ಕೃತಿಯಲ್ಲಿ ಹೇಳಲಾಗಿದೆ. 

ರಾಜಕೀಯ ಪಕ್ಷಗಳು ನಾಡು ನುಡಿಯ ಹಿತವನ್ನು ಕಾಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .ರಾಷ್ಟ್ರೀಯ ಪಕ್ಷಗಳ ಕಾರ್ಯಸೂಚಿ ಭಿನ್ನವಾಗಿದೆ. ನಾಡು-ನುಡಿಯ ರಕ್ಷಣಿಗೆ ಪ್ರಬಲ ಪ್ರಾದೇಶಿಕ ಪಕ್ಷ ಪಾತ್ರ ಬಹುಮುಖ್ಯವಾಗುತ್ತದೆ, ಬೇರೆ ರಾಜ್ಯಕ್ಕೆ ಹೋಲಿಸಿದರೆ   ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷದ ಕೊರತೆಯಿದೆ ಎಂಬುದನ್ನು,  ರಾಷ್ಟ್ರೀಯ ಪಕ್ಷಗಳ ವಿರುದ್ದ ನಿಂತು ಅಸ್ತಿತ್ವ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಎನ್ನುವುದನ್ನೂ  'ಕರ್ನಾಟಕ ರಾಜಕೀಯ ಪ್ರಯೋಗಶಾಲೆ' ಪುಸ್ತಕದಲ್ಲಿ ಪತ್ರಕರ್ತ ಎಸ್.ಲಕ್ಷ್ಮೀನಾರಾಯಣ ಅವರು ವಿವರಿಸಿದ್ದಾರೆ.

About the Author

ಎಸ್. ಲಕ್ಷ್ಮೀ ನಾರಾಯಣ
(09 October 1975)

ಹಿರಿಯ ಪತ್ರಕರ್ತ ಎಸ್‌. ಲಕ್ಷ್ಮೀನಾರಾಯಣ ಅವರು ಮೂಲತಃ ಕೋಲಾರದವರು. 1975ರ ಅಕ್ಟೋಬರ್‌ 9ರಂದು ಜನಿಸಿದರು. ಕಠಾರಿಪಾಳ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕೋಲಾರದಲ್ಲಿ ಬಿ.ಎ. ಪದವೀಧರರಾದರು. ಅವರು ಸದ್ಯ ಉದಯವಾಣಿ ದಿನಪತ್ರಿಕೆ ಉಪಮುಖ್ಯ ವರದಿಗಾರರಾಗಿದ್ದಾರೆ. ...

READ MORE

Related Books